ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Actor Darshan: ರಾಜ್ ಕುಟುಂಬದ ಕುಡಿ ಸೂರಜ್ ಗೆ ಬೆಂಗಾವಲಾಗಿ ನಿಂತ ಕಾಟೇರಾ ; ವೈರಲ್ ಆಯ್ತು ಫೋಟೋಸ್!!

01:59 PM Jan 18, 2024 IST | ಅಶ್ವಿನಿ ಹೆಬ್ಬಾರ್
UpdateAt: 02:02 PM Jan 18, 2024 IST
Advertisement

Darshan: ನಟ ದರ್ಶನ್‌ (Actor Darshan)ಅವರ ಫಾರ್ಮ್‌ ಹೌಸ್‌ನಲ್ಲಿ ಪ್ರತಿ ವರ್ಷ ವಿಶೇಷವಾಗಿಯೇ ಸಂಕ್ರಾಂತಿ ಆಚರಣೆ ನಡೆಯುತ್ತದೆ. ಅದರಲ್ಲೂ ಈ ಬಾರಿ ಕಾಟೇರ ಸಿನಿಮಾ ಯಶಸ್ಸಿನ ನಂತರ ಸಂಭ್ರಮ ದುಪ್ಪಟ್ಟಾಗಿದೆ.

Advertisement

ದರ್ಶನ್ ಸಂಕ್ರಾಂತಿ ಹಬ್ಬವನ್ನು ( Makar Sankranti)ದನ ಕರು, ಆಡು, ಮೇಕೆ, ಕುದುರೆ ಸೇರಿ ಫಾರ್ಮ್‌ ಹೌಸ್‌ನ ಪ್ರಾಣಿಗಳ ಜೊತೆಗೆ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಸಂಕ್ರಾತಿ ಹಬ್ಬದ ವೇಳೆ ದರ್ಶನ್‌ ಅವರ ಆಪ್ತ ಬಳಗ ಚಿಕ್ಕಣ್ಣ, ಸೂರಜ್‌, ಯಶಸ್‌ ಸೂರ್ಯ ಸೇರಿ ಇನ್ನೂ ಅನೇಕ ಮಂದಿ ಫಾರ್ಮ್‌ ಹೌಸ್‌ನಲ್ಲಿ ನೆಲೆಸಿದ್ದರು.

Advertisement

ಕಳೆದ ವರ್ಷ ಅಪಘಾತದಲ್ಲಿ( Accident)ಕಾಲು ಕಳೆದುಕೊಂಡಿದ್ದ ನಟ ಸೂರಜ್‌ ಸದ್ಯ ಚೇತರಿಸಿಕೊಂಡಿದ್ದಾರೆ. ಅದರಲ್ಲಿಯೂ ಇತ್ತೀಚಿಗೆ ಬಿಡುಗಡೆಯಾದ ಕಾಟೇರ ಸಿನಿಮಾದಲ್ಲಿ ಸೂರಜ್ ನಾಯಕಿಯ ತಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್‌ ಸಂದರ್ಭ ಕಳೆದ ವರ್ಷ ಮೈಸೂರಿನ ಹೊರ ವಲಯದಲ್ಲಿ ರಸ್ತೆ ಅಪಘಾತದಲ್ಲಿ ಸೂರಜ್‌ ಕಾಲು ಕಳೆದುಕೊಂಡಿದ್ದರು.

ಇದನ್ನೂ ಓದಿ: ಮೀನುಗಾರರಿಗೆ ISRO ದಿಂದ ಸಿಹಿ ಸುದ್ದಿ; ಆಧುನಿಕ ಉಪಕರಣದ ಅನ್ವೇಷಣೆ!!

ಕಾಲು ಕಳೆದುಕೊಂಡ ಬಳಿಕ, ಅವರ ಜತೆ ನಿಂತ ದರ್ಶನ್‌, ಮಾನಸಿಕವಾಗಿ ಸೂರಜ್‌ ಅವರಿಗೆ ಬೆಂಗಾವಲಾಗಿ ನಿಂತು ಧೈರ್ಯ ತುಂಬಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸೋದರ ಸಂಬಂಧಿಯಾಗಿರುವ ಸೂರಜ್‌, ದರ್ಶನ್ ಅವರೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೂರಜ್‌ ಜತೆಗೆ ಸಂಕ್ರಾಂತಿ ಆಚರಿಸುತ್ತಿರುವ ದರ್ಶನ್‌ ಅವರ ಹತ್ತಾರು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿ ಸಂಚಲನ ಮೂಡಿಸಿದೆ. ದರ್ಶನ್ ಗೆಳೆಯರ ಬಳಗ ಪಂಚೆ ಧರಿಸಿ ಸಂಕ್ರಾಂತಿ ವಿಶೇಷ ತಳಿಯ ಹಸುಗಳನ್ನು ಹಿಡಿದು ಫೋಟೋಗಳಿಗೆ ಪೋಸ್‌ ನೀಡಿರುವ ಫೋಟೋ ಕೂಡ ವೈರಲ್ ಆಗಿದೆ.

Advertisement
Advertisement