Ravi Basrur: ರವಿ ಬಸ್ರೂರು ಹೆಸರೇ ಸ್ವಂತದಲ್ಲ, ಹಾಗಾದರೆ ನಿಜವಾದ ಹೆಸರೇನು? ಸಂಗೀತ ನಿರ್ದೇಶಕನ ದಯನೀತ ಕಥೆ!!
Ravi Basrur: ಕನ್ನಡ ಚಿತ್ರರಂಗ ಮಾತ್ರವಲ್ಲದೇ (sandalwood) ಬಾಲಿವುಡ್(Bollywood)ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡುವ ಮಟ್ಟಿಗೆ ಬೆಳೆದು ನಿಂತಿರುವ ಉಡುಪಿ ಮೂಲದ ರವಿ ಬಸ್ರೂರು (Ravi Basrur)ಅವರು ನಡೆದು ಬಂದ ಹಾದಿ ಸುಲಭದಲ್ಲ.. 'KGF' ಸರಣಿ ಸಿನಿಮಾ ಮೂಲಕ ಸಂಗೀತ ನಿರ್ದೇಶನದ ಮೂಲಕ ಖ್ಯಾತಿ ಪಡೆದ ರವಿ(KGF Music director Ravi Basrur) ಸದ್ಯ 'ಸಲಾರ್' ಸಿನಿಮಾ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದಾರೆ.
ರವಿ ಬಸ್ರೂರು ಸರಿಗಮಪ ಶೋಗೆ ಅತಿಥಿಯಾಗಿ ಆಗಮಿಸಿದ ಸಂದರ್ಭ ತಮ್ಮ ಸಾಧನೆಗೆ ಬೆಳಕಾದ ದಾರಿ ದೀಪವಾಗಿ(Salaar Ravi Basrur inspirational life story) ನಿಂತ ವ್ಯಕ್ತಿಯ ಬಗ್ಗೆ ಮಾತಾಡಿದ್ದಾರೆ. ಸಾಧಿಸುವ ಹಂಬಲ, ಕಷ್ಟಗಳ ಮೆಟ್ಟಿ ನಿಲ್ಲುವ ಕೆಚ್ಚೆದೆಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ರವಿ ಬಸ್ರೂರು(Ravi Basrur life story)ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಬರೀ ಹಾಡುಗಳು ಮಾತ್ರವಲ್ಲ ಮಾಸ್ ಸಿನಿಮಾಗಳಿಗೆ ತಮ್ಮ ಅದ್ಭುತ ಹಿನ್ನೆಲೆ ಸಂಗೀತದಿಂದ ಕೂಡ ರವಿ ಬಸ್ರೂರು ಹೆಸರು ಮಾಡುತ್ತಿದ್ದಾರೆ.
ಕನ್ನಡ ಸರಿಗಮಪ ಸೀಸನ್ 10ರ ಅತಿಥಿಯಾಗಿ ಬಂದಿದ್ದ ರವಿ ತಮ್ಮ ಜೀವನದ ಅನೇಕ ರೋಚಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ರವಿಬಸ್ರೂರು ತಂದೆ ಊರಿನಲ್ಲಿ ಕುಲುಮೆ ನಡೆಸುತ್ತಿದ್ದರಂತೆ . ಆಗ ರವಿ ತಂದೆಯ ಜೊತೆ ಕುಲುಮೆಯಲ್ಲಿ ಕೆಲಸ ಮಾಡಿ ಕುಸುರಿ ಕೆಲಸವನ್ನು ಕಲಿತರಂತೆ. ಹೀಗಿದ್ದರೂ ಕೂಡ ರವಿ ಅವರಿಗೆ ಸಂಗೀತ ಕ್ಷೇತ್ರದಲ್ಲಿದ್ದ ಒಲವು, ಏನಾದರು ಸಾಧಿಸಬೇಕು ಎಂಬ ತುಡಿತದಿಂದ ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ನಿಂತಿದ್ದಾರೆ.
ಇದನ್ನೂ ಓದಿ: Travelling Tips: ಮೋದಿಯಂತೆ ನೀವೂ ಕೂಡ ಲಕ್ಷದ್ವೀಪದಲ್ಲಿ ಕಾಲ ಕಳೆಯಬೇಕಾ? ಬಜೆಟ್ ಫ್ರೆಂಡ್ಲಿಯಾಗಿ ಹೀಗೆ ಹೋಗಿ ಬನ್ನಿ
" ಒಂದು ಬಾರಿ ಜೀವನವೇ ಸಾಕು ಎಂದು ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಕೂತಿದ್ದೆ, ಊಟ ಮಾಡದೇ ಮೂರ್ನಾಲ್ಕು ದಿನ ಆಗಿತ್ತು. ಯಾವ ದೇವಸ್ಥಾನದಲ್ಲಿ ಯಾವ ದಿನ ಯಾವ ಪ್ರಸಾದ ಕೊಡುತ್ತಾರೆ ಎಂದು ನನ್ನ ಜೇಬಿನಲ್ಲಿ ಒಂದು ಲಿಸ್ಟ್ ಇತ್ತು. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಪ್ರಸಾದ ಸಿಗುತ್ತಿರಲಿಲ್ಲ" ಎಂದು ಜೀವನದ ಕಠಿಣ ದಿನಗಳನ್ನು ರವಿ ನೆನಪಿಸಿಕೊಂಡಿದ್ದಾರೆ.
"ನನ್ನ ಸ್ಥಿತಿ ಹೇಗಾಗಿತ್ತು ಎಂದರೆ, ಇಲ್ಲದ ಆಲೋಚನೆಗಳು ಬರಲು ಶುರುವಾಗಿತ್ತು. ಆಗ ಹಿರಿಯರಾದ ಕಾಮತ್ ನನ್ನನ್ನು ಕರೆದುಕೊಂಡು ಅವೆನ್ಯೂ ರೋಡ್‌ಗೆ ಹೋದರು. ಅಲ್ಲಿ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಈತ ಹಿತ್ತಾಳೆ, ಬೆಳ್ಳೆ ಕೆಲಸ ಎಲ್ಲಾ ಕೆಲಸ ಮಾಡುತ್ತಾನೆ. ಆದರೆಇವನಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಒಬ್ಬ ವ್ಯಕ್ತಿ ಮುಂದೆ ಕೂರಿಸಿ ಹೇಳಿದರು"
"ನಾನು ಮೊದಲು 5 ರೂ. ಕೊಡಿ. ಏನಾದರೂ ತಿನ್ಕೊಂಡು ಬರ್ತೀನಿ. ಆಮೇಲೆ ನೀವು ಹೇಳಿದ್ದು ನನ್ನ ತಲೆಗೆ ಏರುತ್ತದೆ ಎಂದು ರವಿ ಹೇಳಿದರಂತೆ. ಆಗ ಆ ವ್ಯಕ್ತಿ, ರವಿಯನ್ನು ನೋಡಿ ಎಂತಹ ವ್ಯಕ್ತಿನ ಕರ್ಕೊಂಡು ಬಂದು ಕೂರಿಸಿದ್ದೀರಾ. ಈತನನ್ನು ನೋಡಲು ಭೇಟಿ ಮಾಡಲು 5 ತಿಂಗಳು ಅಪಾಯಿಂಟ್‌ಮೆಂಟ್ ಪಡೆಯುವ ಮಟ್ಟಿಗೆ ಬೆಳೆಯುತ್ತಾನೆ. ಈತನನ್ನು ಮತ್ತೆ ಹಿಡಿಯಲು ಸಾಧ್ಯವಿಲ್ಲವೆಂದು ಆ ವ್ಯಕ್ತಿ ಎಂದಿದ್ದರಂತೆ.
"ಜಾತಕ ನೋಡಿ ಈ ರೀತಿ ಹೇಳುವವರು ಬೇಕಾದಷ್ಟು ಮಂದಿ ಸಿಗುತ್ತಾರೆ. ನನಗೆ ಮ್ಯೂಸಿಕ್ ಬೇಕು ಅಷ್ಟೆ ಎಂದು ರವಿ ಹೇಳಿದಾಗ ,ಆ ವ್ಯಕ್ತಿ ನಿಮಗೆ ಏನು ಬೇಕು ಎಂದು ಕೇಳಿದರಂತೆ. ನಾನು ಕೀಬೋರ್ಡ್ ತಗೋಬೇಕು.ಅದಕ್ಕೆ ನೀವು ಹಣ ಕೊಡುತ್ತೀರಾ ಎಂದು ರವಿ ಕೇಳಿದರಂತೆ. ಕೂಡಲೇ ಎಷ್ಟು ಹಣ ಬೇಕು ಎಂದು ಕೇಳಿದ ವ್ಯಕ್ತಿ, ರವಿ 35 ಸಾವಿರ ಎಂದಾಗ ಹಿಂದೂ ಮುಂದೂ ಆಲೋಚಿಸದೆ 35ಸಾವಿರ ಕೂಡಲೇ ಕೊಟ್ಟರಂತೆ. ಆ ಸಂದರ್ಭ ಆ ವ್ಯಕ್ತಿ ಯಾರು ಎಂಬುದು ಕೂಡ ರವಿ ಅವರಿಗೆ ಗೊತ್ತಿರಲಿಲ್ಲವಂತೆ. ಈ ಹಣ ವಾಪಸ್ ಕೊಡುವುದೇನು ಬೇಡ!! ಕೀಬೋರ್ಡ್ ತೆಗೆದುಕೋ, ಈ 35 ಸಾವಿರಕ್ಕೆ ಕೆಲಸ ಕೊಡ್ತೀನಿ, ಕೆಲಸ ಮಾಡಿ ತೀರಿಸು ಎಂದರಂತೆ.
"ಆ ವ್ಯಕ್ತಿಯ ಹೆಸರು ರವಿ ಎಂದು ತಿಳಿದ ಬಳಿಕ ಕಿರಣ್ (Ravi Basrur real name kiran)ಎಂದಿದ್ದ ತಮ್ಮ ಹೆಸರನ್ನು ಡಿಲೀಟ್ ಮಾಡಿ ನಾನು ಅವರ ಹೆಸರನ್ನು ನನ್ನ ಹುಟ್ಟೂರಿನ ಹೆಸರಿನೊಂದಿಗೆ ಸೇರಿಸಿಕೊಂಡು ಇಟ್ಟುಕೊಂಡಿದ್ದೇನೆ "ಎಂದು ರವಿ ಹೇಳಿದ್ದಾರೆ. ನೀವು ನನ್ನ ಹೆಸರನ್ನು ಹೇಗೆ ಕರೆದರು ಕೂಡ ಆ ಕ್ರೆಡಿಟ್ ರವಿ ಅವರಿಗೆ ಸಿಗಬೇಕು ಎಂಬ ಕಾರಣಕ್ಕೆ ಹೆಸರು ಬದಲಿಸಿಕೊಂಡೆ ಎಂದಿದ್ದಾರೆ. ನಾನು ಇವತ್ತು ಏನೇ ಸಾಧಿಸಿದ್ದರು ಅದಕ್ಕೆ ಅವರು ಕಾರಣ ಎಂದು ರವಿ ಬಸ್ರೂರು ತಮ್ಮ ಸಾಧನೆಗೆ ಬೆಳಕಾದ ವ್ಯಕ್ತಿಯ ಬಗ್ಗೆ ವಿವರಿಸಿದ್ದಾರೆ.