ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Sabarimala Temple: ಇತಿಹಾಸದಲ್ಲೇ ಮೊದಲು, ಅಯ್ಯಪ್ಪನ ದರ್ಶನ ಪಡೆದ ಮಂಗಳಮುಖಿ!!

02:44 PM Jan 02, 2024 IST | ಹೊಸ ಕನ್ನಡ
UpdateAt: 02:45 PM Jan 02, 2024 IST
Advertisement

Sabarimala Temple: ಕೇರಳ ರಾಜ್ಯದ ಶಬರಿಮಲೆ ಪ್ರಸಿದ್ಧ ಪುಣ್ಯ ಕ್ಷೇತ್ರ. ಹಿಂದೂಗಳು ಅಯ್ಯಪ್ಪನನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ಅಯ್ಯಪ್ಪ ಭಗವಂತ ಇಷ್ಟಾರ್ಥ ನೆರೆವೇರಿಸುತ್ತಾರೆ ಎಂಬ ನಂಬಿಕೆ ಭಕ್ತರದ್ದು. ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ಅಯ್ಯಪ್ಪ ದೀಕ್ಷಾ ಮಾಲೆಗಳನ್ನು ಭಕ್ತರು ಧರಿಸಿ, ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಜ್ಯೋತಿ, ಶಬರಿಮಲೆ ಜ್ಯೋತಿ ಕಾಣುತ್ತಾರೆ.

Advertisement

ಶತಮಾನಗಳಿಂದಲೂ 10 ರಿಂದ 50 ವರ್ಷದೊಳಗಿನ ಋತುಚಕ್ರದ ಮಹಿಳೆಯರಿಗೆ ಪ್ರವೇಶಿಸಲು ಅವಕಾಶವಿಲ್ಲ. ಆದರೆ ಈ ಬಾರಿ ಶಬರಿಮಲೆಯ ದೇವಸ್ಥಾನದಲ್ಲಿ ಭಾನುವಾರ ಒಂದು ಘಟನೆ ನಡೆದಿದೆ. ಅದೇನು ಬನ್ನಿ ತಿಳಿಯೋಣ.

ಕೇರಳದ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು (Transgender) ಮೊದಲ ಬಾರಿಗೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ತೆಲಂಗಾಣದ ಚೆರ್ವುಗಟ್ಟು ಶ್ರೀ ಪಾರ್ವತಿ ಜಡಲ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವಗಳಲ್ಲಿ, ಹಾಗೂ ಪ್ರತಿ ಅಮವಾಸ್ಯೆಯಲ್ಲಿ ಜೋಗಿಣಿಯಾಗಿ ಭಾಗವಹಿಸುತ್ತಾರೆ ನಿಶಾ ಕ್ರಾಂತಿ.

Advertisement

ಮಂಗಳಮುಖಿ ಜೋಗಿನಿ ನಿಶಾ ಕ್ರಾಂತಿ ಅವರು ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಟ್ರಾನ್ಸ್‌ಜೆಂಡರ್‌ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರಕಾರ ಆಕೆಗೆ ಭೇಟಿಗೆ ಅವಕಾಶ ನೀಡಿದೆ. ಅಂದ ಹಾಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೃತೀಯ ಲಿಂಗಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ನಿಶಾ ಕ್ರಾಂತಿ ಅವರು ಕೇರಳ ಸರಕಾರಕ್ಕೆ ಈ ಕುರಿತು ಧನ್ಯವಾದ ತಿಳಿಸಿದ್ದಾರೆ.

Related News

Advertisement
Advertisement