For the best experience, open
https://m.hosakannada.com
on your mobile browser.
Advertisement

RTC Correction : ರೈತರೇ, ಪಹಣಿಯಲ್ಲಿ ತಪ್ಪುಗಳಿವೆಯೇ? ತಿದ್ದುಪಡಿ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ !!

RTC Correction : ಎಷ್ಟೇ ಎಚ್ಚರವಾಗಿದ್ದರು ಪಹಣಿಯಲ್ಲಿ ಕೆಲವೊಮ್ಮೆ ತಪ್ಪುಗಳಾಗಿರುತ್ತವೆ. ಇದನ್ನು ಸರಿಪಡಿಸುವುದು ಹೇಗೆ? ತಿದ್ದುವುದು ಹೇಗೆ? ಇಲ್ಲಿದೆ ಮಾಹಿತಿ.
11:26 AM Jun 02, 2024 IST | ಸುದರ್ಶನ್
UpdateAt: 11:26 AM Jun 02, 2024 IST
rtc correction   ರೈತರೇ  ಪಹಣಿಯಲ್ಲಿ ತಪ್ಪುಗಳಿವೆಯೇ  ತಿದ್ದುಪಡಿ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ
Advertisement

RTC Correction : ರೈತರಿಗೆ ತಮ್ಮ ತೋಟ, ಹೊಲ ಗದ್ದೆ ಹಾಗೂ ದನ-ಕರುಗಳಷ್ಟೇ ಪಹಣಿ(RTC) ಕೂಡ ತುಂಬಾ ಮುಖ್ಯವಾದು ಎಂದರೆ ತಪ್ಪಾಗಲಾರದು. ಯಾಕೆಂದರೆ ರೈತರು ಕೃಷಿಗಾಗಿ ಸರ್ಕಾರದಿಂದ ಏನಾದರೂ ಪ್ರಯೋಜನ ಪಡಿಯಬೇಕು ಅಂದರೆ ಇದು ತುಂಬಾ ಮುಖ್ಯ. ಆದರೆ ಎಷ್ಟೇ ಎಚ್ಚರವಾಗಿದ್ದರು ಪಹಣಿಯಲ್ಲಿ ಕೆಲವೊಮ್ಮೆ ತಪ್ಪುಗಳಾಗಿರುತ್ತವೆ. ಇದನ್ನು ಸರಿಪಡಿಸುವುದು ಹೇಗೆ? ತಿದ್ದುವುದು ಹೇಗೆ? ಇಲ್ಲಿದೆ ಮಾಹಿತಿ.

Advertisement

ಹೌದು, ಪಹಣಿಯಲ್ಲಿ ಕೆಲವೊಮ್ಮೆ ಮಾಹಿತಿ ತಪ್ಪು ಇರುತ್ತದೆ. ಹೆಸರು ಮತ್ತು ಇನಿಶೀಯಲ್ ಸರಿಯಾಗಿ ಇಲ್ಲ‌ದೆ ಇರುವುದು, ಹಿಂದೆ ಮುಂದೆ ಆಗಿರುವುದು, ಊರಿನ ಹೆಸರು, ತಂದೆಯ ಹೆಸರು ಬದಲಾಗಿರುವುದು ಹೀಗೆ ಏನಾದರೂ ಸಮಸ್ಯೆ ಆಗಿರುತ್ತದೆ. ಇದರಿಂದ ಬಹಳಷ್ಟು ತೊಂದರೆ ಆಗಲಿದೆ. ಹಾಗಾಗಿ ನೀವು ಪಹಣಿ ಪತ್ರದಲ್ಲಿ ಇರುವ ಹೆಸರು ತಿದ್ದುಪಡಿ ಮಾಡಲು( RTC Correction )ಅವಕಾಶ ಕೂಡ ಇರಲಿದೆ. ಇದನ್ನು ತುಂಬಾ ಸರಳವಾಗಿ ನೀವು ಸರಿಪಡಿಸಬಹುದು.

ತಿದ್ದುಪಡಿ ಹೇಗೆ?
ನೀವು ನಿಮ್ಮ ಊರಿನ ತಾಲೂಕು ಕೇಂದ್ರಕ್ಕೆ ಹೋಗಿ‌ ತಾಲೂಕು ಆಫೀಸಿನ ಪಹಣಿ ಕೇಂದ್ರ (Pahani Center) ದಲ್ಲಿ ನೀವು ಪಹಣಿ ಪತ್ರವನ್ನು ಪಡೆದಿದ್ದರೆ ಇಲ್ಲಿ ಇ ಸ್ಟ್ಯಾಂಪ್ ಪೇಪರ್ ಅನ್ನು ಪಡೆದು ಅದರಲ್ಲಿ ಹೆಸರು ತಿದ್ದುಪಡಿ ಎಂದು ಬರೆಯಬೇಕು. ಬಳಿಕ ಅದರಲ್ಲಿ ಏನನ್ನು ನಾವು ತಿದ್ದುಪಡಿ ಮಾಡ್ತೇವೆ ಎಂಬುದನ್ನು ಸರಿಯಾಗಿ ಅರ್ಜಿಯಲ್ಲಿ ನಮೋದಿಸಬೇಕು. ಬೇಕಾದ ಅಗತ್ಯ ದಾಖಲೆ ಯೊಂದಿಗೆ ನೀವು ತಾಲೂಕು ಕಚೇರಿಯ ಭೂಮಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು. ಆಗ ಭೂಮಿ ಕೇಂದ್ರದ ಮೂಲಕ ಬೇಕಾದ ದಾಖಲೆಯನ್ನು ಕಳುಹಿಸಲಾಗುವುದು.

Advertisement

ಭೂಮಿ ಕೇಂದ್ರದಿಂದ ದಾಖಲೆಗಳನ್ನು ಗ್ರಾಮ ಲೆಕ್ಕಿಗರಿಗೆ(VA) ಕಳುಹಿಸುತ್ತಾರೆ. ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳು ತಪ್ಪಾಗಿದ್ದಲ್ಲಿ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ. ದಾಖಲೆಗಳು ಸರಿಯಾಗಿದ್ದಲ್ಲಿ ಭೂಮಿ ಕೇಂದ್ರಕ್ಕೆ ಪಹಣಿ ತಿದ್ದುಪಡಿ ಮಾಡಲು ಆದೇಶ ಮಾಡುವ ಅಧಿಕಾರವನ್ನು ಗ್ರಾಮ ಲೆಕ್ಕಿಗರು ಹೊಂದಿರುತ್ತಾರೆ. ಭೂಮಿ ಕೇಂದ್ರದಲ್ಲಿ ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡುತ್ತಾರೆ. ಕೆಲವು ದಿನಗಳ ನಂತರ ತಿದ್ದುಪಡಿ ಆದ ಪಹಣಿ ನಿಮಗೆ ತಲುಪುತ್ತದೆ.

ಇದನ್ನೂ ಓದಿ: ಪೂರ್ವ ಮುಂಗಾರು ಗಾಳಿ-ಮಳೆ ಆರಂಭವಾದ ಬೆನ್ನಲ್ಲೇ ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ 

Advertisement
Advertisement
Advertisement