ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Fact Check: ವೋಟ್ ಮಾಡದವರ ಖಾತೆಯಿಂದ 350 ರೂ ಕಟ್ !! ಇದು ಸತ್ಯವೇ?

05:49 PM Apr 18, 2024 IST | ಸುದರ್ಶನ್ ಬೆಳಾಲು
UpdateAt: 05:49 PM Apr 18, 2024 IST
Advertisement

 

Advertisement

Fact Check: ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ನಾಳೆ( ಏ 19 )ಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು ದೇಶಾದ್ಯಂತ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣೆ(Election) ಪ್ರಯುಕ್ತ ಈಗಾಗಲೇ ಅನೇಕ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಆದರೀಗ ಅಚ್ಚರಿ ಎಂಬಂತೆ ಮತದಾನ ಮಾಡದವರಿಗೆ ಚುನಾವಣಾ ಆಯೋಗ(Election Commission) ದಂಡ ವಿಧಿಸಲಿದೆ ಎಂದು ಹೇಳಲಾಗಿದೆ.

ಹೌದು, ಚುನಾವಣೆಯಲ್ಲಿ ಯಾರೆಲ್ಲಾ ಮತದಾನ ಮಾಡುವುದಿಲ್ಲವೋ ಅಂತವರ ಖಾತೆಯಿಂದ 350 ರೂ ಕಟ್ ಆಗುತ್ತದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಜನರು ಭಯದಿಂದ ಅದನ್ನು ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಪತ್ರಿಕೆಯೊಂದರಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ ಎಂಬುದಾಗಿ ನಕಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Advertisement

ಏನಿದರ ಅಸಲಿಯತ್ತು?
ಎಲ್ಲೆಡೆ ಹಬ್ಬುತ್ತಿರುವ ಈ ವಿಚಾರ ಕೇವಲ ವದಂತಿಯಾಗಿದೆ. ಚುನಾವಣಾ ಆಯೋಗವಾಗಲಿ, ಸರ್ಕಾರವಾಗಲಿ ಈ ರೀತಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಚುನಾವಣಾ ಆಯೋಗ, ಹಲವು ಪೊಲೀಸ್‌ ಇಲಾಖೆಗಳು ಫ್ಯಾಕ್ಟ್‌ ಚೆಕ್‌ ಮಾಡಿವೆ. ಫ್ಯಾಕ್ಟ್‌ ಚೆಕ್‌ ಮಾಹಿತಿ ಪ್ರಕಾರ, ಮತದಾನ ಮಾಡದವರ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಇದರ ಕುರಿತು ಯಾವುದೇ ಮಾಧ್ಯಮಗಳೂ ವರದಿ ಮಾಡಿಲ್ಲ. ಇವೆಲ್ಲ ನಕಲಿ ಸುದ್ದಿಯಾಗಿವೆ ಎಂದು ಸ್ಪಷ್ಟೀಕರಣ ನೀಡಿದೆ.

ನಾಳೆ ಮೊದಲ ಹಂತದ ಮತದಾನ:
ಲೋಕಸಭೆ ಚುನಾವಣೆಗೆ (Lok Sabha Election 2024) ಶುಕ್ರವಾರ (ಏಪ್ರಿಲ್‌ 19) ಚಾಲನೆ ಸಿಗಲಿದೆ. ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಳೆ ಮೊದಲ ಹಂತದ ಮತದಾನ (First Phase Voting) ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement
Advertisement