For the best experience, open
https://m.hosakannada.com
on your mobile browser.
Advertisement

Rice Price : ಅಕ್ಕಿ ಬೆಲೆಯಲ್ಲಿ 10 ರೂ ಇಳಿಕೆ !!

Rice Price : ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ ಕಂಡಿದ್ದು, ಆದರೀಗ ಏಕಾಏಕಿ ಎನ್ನುವಂತೆ ಗಗನಕ್ಕೇರಿದ್ದ ಅಕ್ಕಿ ದರ(Rice Price)ದಲ್ಲಿ ಭರ್ಜರಿ 10 ರೂ ಇಳಕೆಯಾಗಿದೆ.
09:09 AM Apr 02, 2024 IST | ಸುದರ್ಶನ್
UpdateAt: 09:13 AM Apr 02, 2024 IST
rice price   ಅಕ್ಕಿ ಬೆಲೆಯಲ್ಲಿ 10 ರೂ ಇಳಿಕೆ
Image Credit Source: New 18 Kannada

Rice Price : ಕೆಲ ಸಮಯದಿಂದ ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ ಕಂಡಿದ್ದು ಜನತೆಗೆ, ಬಡ-ಬಗ್ಗರಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೀಗ ಏಕಾಏಕಿ ಎನ್ನುವಂತೆ ಗಗನಕ್ಕೇರಿದ್ದ ಅಕ್ಕಿ ದರ(Rice Price)ದಲ್ಲಿ ಭರ್ಜರಿ 10 ರೂ ಇಳಕೆಯಾಗಿದೆ.

Advertisement

ಹೌದು, ಅಕ್ಕಿದರ ಸ್ವಲ್ಪ ಇಳಿಕೆ ಕಂಡಿದ್ದು ಸ್ಟೀಮ್ ರೈಸ್(Steam Rice) ದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್(Raw Rice) ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಸದ್ಯ ಇದೀಗ ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರ ಕೆಜಿಗೆ 57 -58 ರೂ. ಇತ್ತು. ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ.

Advertisement

ಇದನ್ನೂ ಓದಿ: Rarest Twins Born: ಮೊದಲ ಮಗುವಿನ ಜನನದ ನಂತರ ಎರಡನೇ ಮಗುವಿಗೆ 22 ದಿನದ ನಂತರ ಜನ್ಮ ನೀಡಿದ ಮಹಿಳೆ

ಇನ್ನು ಈ ಬೆಲೆ ಇಳಿಕೆ ಬೆನ್ನಲ್ಲೇ ಇದು ತಾತ್ಕಾಲಿಕ ಎನ್ನುವ ಸುದ್ದಿ ಕೂಡ ಹೊರಬಿದ್ದಿದೆ. ಜೊತಗೆ ಜನರು ಹೆಚ್ಚಾಗಿ ಸ್ಟೀಮ್ ರೈಸ್ ಬಳಸುವುದಿಲ್ಲ, ಹೋಟೆಲ್ ನವರಿಗೆ ಮಾತ್ರ ಇದು ಉಪಯುಕ್ತವಾಗುವುದು ಎಂಬುದನ್ನು ಕೂಡ ಮರೆಯಬಾರದು.

ದಿಢೀರ್ ಬೆಲೆ ಇಳಿಕೆಗೆ ಕಾರಣವೇನು?
ಇದೀಗ ಕುಯ್ಲು ಶುರುವಾದ ಕಾರಣ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಜೊತೆಗೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಅಗ್ಗದ ಬೆಲೆಗೆ ಭಾರತ್ ರೈಸ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ, ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಜೊತೆಗೆ ಚುನಾವಣೆ ಕೂಡ ಹತ್ತಿರವಾಗಿದೆ. ಈ ಕಾರಣಗಳಿಂದ ಅಕ್ಕಿ ದರ ಕೊಂಚ ಕಡಿಮೆಯಾಗಿದೆ.

ಇದನ್ನೂ ಓದಿ: Sullia: ಸುಳ್ಯ; ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲು, ಆರೋಪಿ ಪರಾರಿ

Advertisement
Advertisement