For the best experience, open
https://m.hosakannada.com
on your mobile browser.
Advertisement

Jobs: ದಕ್ಷಿಣ ರೈಲ್ವೆ ವಲಯದಿಂದ 2,860 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

01:55 PM Feb 09, 2024 IST | ಹೊಸ ಕನ್ನಡ
UpdateAt: 01:59 PM Feb 09, 2024 IST
jobs  ದಕ್ಷಿಣ ರೈಲ್ವೆ ವಲಯದಿಂದ 2 860 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Southern Railway Apprentice Recruitment 2024: ರೈಲ್ವೇ ನೇಮಕಾತಿ ದಕ್ಷಿಣ ರೈಲ್ವೆಯು ಅಪ್ರೆಂಟಿಸ್ ನಿಯಮದ ಅಡಿಯಲ್ಲಿ ವಿವಿಧ ವಿಭಾಗಗಳು / ಕಾರ್ಯಾಗಾರಗಳು / ಘಟಕಗಳಲ್ಲಿ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ನೀಡಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು.

Advertisement

ಇದನ್ನೂ ಓದಿ: Mangaluru Congress Convention: ಮಂಗಳೂರಿನಲ್ಲಿ ಫೆ.17 ರಂದು ಲೋಕಸಭಾ ಚುನಾವಣೆ ಸಿದ್ಧತೆಯಾಗಿ ಕಾಂಗ್ರೆಸ್‌ ಸಮಾವೇಶ

ರೈಲ್ವೆ ನೇಮಕಾತಿಯು ಎಲ್ಲಾ ಡಿವಿಷನ್‌ಗಳಲ್ಲಿ ಖಾಲಿ ಇರುವ ತರಬೇತುದಾರ ಹುದ್ದೆ (Apprentice Posts) ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಫೆ.28,2024 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

Advertisement

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭಿಕ ದಿನಾಂಕ: 29-01-2024 10:00 ಗಂಟೆಗೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28-02-2024 17:00 ಗಂಟೆಗಳವರೆಗೆ

ಅರ್ಜಿ ಶುಲ್ಕ: ಎಲ್ಲಾ ಅಭ್ಯರ್ಥಿಗಳಿಗೆ: ರೂ. 100/-

SC/ST/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು ಹುದ್ದೆ: ಒಟ್ಟು 2860 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ: ಅಭ್ಯರ್ಥಿಗಳು 15 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಫ್ರೆಶರ್ಸ್ / ಎಕ್ಸ್-ಐಟಿಐ, ಎಂಎಲ್ಟಿಗೆ ಕ್ರಮವಾಗಿ 22/24 ವರ್ಷಗಳನ್ನು ಮೀರಿರಬಾರದು.

OBC ಅಭ್ಯರ್ಥಿಗಳಿಗೆ 3 ವರ್ಷಗಳು, SC/ST ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (PwBD) 10 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು 10,12ನೇ ತರಗತಿ/ತತ್ಸಮಾನ ವಿದ್ಯಾರ್ಹತೆ ಜೊತೆಗೆ ಐಟಿಐ ತೇರ್ಗಡೆಯಾಗಿರಬೇಕು. ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣ ಪತ್ರ ನಿಮ್ಮಲ್ಲಿದ್ದರೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Advertisement
Advertisement