Rohit Sharma: IPL ಪ್ರಸಾರಕರ ಮೇಲೆ ಕಿಡಿ ಕಾರಿದ ರೋಹಿತ್ ಶರ್ಮಾ : ವ್ಯಯಕ್ತಿಕ ಸಂಭಾಷಣೆ ಪ್ರಸಾರ ಮಾಡಿದ್ದೆ ಇದಕ್ಕೆ ಕಾರಣ!
Rohit Sharma: ಐಪಿಎಲ್ ನಲ್ಲಿ ಟೀಂ ಇಂಡಿಯಾ ನಾಯಕ ಮತ್ತು ಮುಂಬೈ ಇಂಡಿಯನ್ಸ್(Mumbai Indians)ಆಟಗಾರ ರೋಹಿತ್ ಶರ್ಮಾ(Rohit Sharma)ಐಪಿಎಲ್ ಪ್ರಸಾರಕರ(Star sp ಮೇಲೆ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಆಟಗಾರರ ನಡುವಿನ ಸಂಭಾಷಣೆಗಳನ್ನು (Conversation) ರೆಕಾರ್ಡ್ ಮಾಡಿ ಪ್ರಸಾರ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರು.
ಇದನ್ನೂ ಓದಿ: KSRTC: 185 ರು ಪ್ರಯಾಣಕ್ಕೆ 200 ರು ಪಡೆದ ಕಂಡಕ್ಟರ್ : ಕಂಡಕ್ಟರ್ ವಿರುದ್ಧ KSRTC ಗೆ ದೂರು ನೀಡಿದ ಪ್ರಯಾಣಿಕ
ಇಂತಹ ಕ್ರಮಗಳು ಆಟಗಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಅವರು ಟ್ವಿಟರ್‌ನಲ್ಲಿ(X) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್(Kolkata night riders) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಪಂದ್ಯದ ವೇಳೆ ಎರಡೂ ತಂಡಗಳ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ಇದೇ ವೇಳೆ ಕೆಕೆಆರ್ ಸಹಾಯಕ ಕೋಚ್ -ರೋಹಿತ್ ಶರ್ಮಾ( Rohit Sharma) ತಮ್ಮ ಸ್ನೇಹಿತ ಅಭಿಷೇಕ್ ನಾಯರ್ ಜೊತೆ ಖುದ್ದು ಮಾತನಾಡಿದ್ದಾರೆ. -ರೋಹಿತ್ ಶರ್ಮಾ "ಬಾಯ್ ಇದು ಕೊನೆಯ ಪಂದ್ಯ" ಎಂದು ಹೇಳಿರುವ ವಿಡಿಯೋ ಹೊರಬಿದ್ದಿದೆ. ಈ ವೀಡಿಯೋವನ್ನು ಕೆಕೆಆರ್ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಬಳಿಕ ಅದು ವೈರಲ್ ಆಗಿ ಡಿಲೀಟ್ ಆಗಿತ್ತು. ಆದರೆ ಆಗಲೇ ಹಾನಿಯಾಗಿತ್ತು. ಮುಂಬೈ ಇಂಡಿಯನ್ಸ್(Mumbai Indians) ಜೊತೆಗಿನ ಸಂಬಂಧದ ಬಗ್ಗೆ ರೋಹಿತ್ ಶರ್ಮಾ(Rohit Sharma) ಮಾತನಾಡಿದ್ದಾರೆ ಎಂದು ನೆಟಿಜನ್‌ಗಳು ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರೋಹಿತ್ ಮುಂಬೈಗೆ ವಿದಾಯ ಹೇಳಲಿದ್ದಾರೆ ಎಂಬ ವರದಿಗಳಿವೆ.
ಇತ್ತೀಚೆಗಷ್ಟೇ ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಟೀಂ ಇಂಡಿಯಾದ(Team india) ಮಾಜಿ ಆಟಗಾರ ಧವಲ್ ಕುಲಕರ್ಣಿ(Dhavan Kulkarni ) ಜತೆ ಮಾತನಾಡಿದ್ದು ಕಂಡುಬಂತು. ಈ ಪ್ರಕ್ರಿಯೆಯಲ್ಲಿ ಅವರು ಕ್ಯಾಮರಾಮನ್(Camera man) ವಿಡಿಯೋ ರೆಕಾರ್ಡ್ ಮಾಡುವುದನ್ನು ಗಮನಿಸಿದರು. ಅದಾಗಲೇ ಒಂದು ವಿಡಿಯೋ ವೈರಲ್ ಆಗಿರುವುದನ್ನು ನೆನಪಿಸಿಕೊಂಡ ರೋಹಿತ್(Rohit Sharma)ಕ್ಯಾಮೆರಾಮನ್‌ಗೆ ಒಂದು ಸಲಹೆ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, 'ಅಣ್ಣ, ಆಡಿಯೋವನ್ನು ಮ್ಯೂಟ್ ಮಾಡಿ... ಈಗಾಗಲೇ ವಿಡಿಯೋವೊಂದು ವೈರಲ್ ಆಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಆದರೆ ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ -ರೋಹಿತ್(Rohit Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರ ನಡುವಿನ ಸಂಭಾಷಣೆಯ ರೆಕಾರ್ಡಿಂಗ್ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಐಪಿಎಲ್ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ಗೆ(Star sports)ಈ ಬಗ್ಗೆ ವಿವರಿಸಿದರೂ ಅದನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಹೇಳಿದರು. ವಿಶೇಷವಾದ ವಿಷಯವನ್ನು ನೀಡುವ ಪ್ರಸಾರಕರ ಪ್ರಯತ್ನಗಳು ಅಭಿಮಾನಿಗಳು ಮತ್ತು ಕ್ರಿಕೆಟಿಗರ ನಡುವಿನ ಸಂಬಂಧವನ್ನು ಹಾಳು ಮಾಡುತ್ತಿದೆ ಎಂದು ಅವರು ಹೇಳಿದರು.