For the best experience, open
https://m.hosakannada.com
on your mobile browser.
Advertisement

Road Pothole: ಸತ್ತನೆಂದು ಮನೆ ಕಡೆ ಹೊರಟ ಆಂಬುಲೆನ್ಸ್; ಮುಂದೆ ನಡೆದದ್ದೇ ಪವಾಡ!!

10:29 AM Jan 13, 2024 IST | ಅಶ್ವಿನಿ ಹೆಬ್ಬಾರ್
UpdateAt: 10:29 AM Jan 13, 2024 IST
road pothole  ಸತ್ತನೆಂದು ಮನೆ ಕಡೆ ಹೊರಟ ಆಂಬುಲೆನ್ಸ್   ಮುಂದೆ ನಡೆದದ್ದೇ ಪವಾಡ

Road Pothole: ದಿನಂಪ್ರತಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ಸಂಚಲನ ಮೂಡಿಸುತ್ತದೆ. ಅದರಲ್ಲಿ ಕೆಲ ವಿಚಾರಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ರಸ್ತೆ ಗುಂಡಿಗಳಿಂದ(Road Pothole) ಅಪಘಾತAccident)ನಡೆದು ಅದೆಷ್ಟೋ ಮಂದಿ ಜೀವ ಕಳೆದುಕೊಂಡದ್ದನ್ನ ನೀವು ಕೇಳಿರಬಹುದು!! ಆದರೆ, ಅದೇ ರಸ್ತೆ ಗುಂಡಿಯಿಂದ ವೃದ್ದನೊಬ್ಬನ ಜೀವ ಉಳಿದ (Grandfather Comes Alive)ಘಟನೆ ವರದಿಯಾಗಿದೆ.

Advertisement

80 ವರ್ಷದ ಬ್ರಾರ್ ಕರ್ನಾಲ್ ಬಳಿಯ ನಿಸಿಂಗ್‌ನಲ್ಲಿ ವಾಸಿಸುತ್ತಿದ್ದರಂತೆ. ಕೆಲವು ದಿನಗಳಿಂದ ಬ್ರಾರ್‌ ಅನಾರೋಗ್ಯ ಪೀಡಿತರಾಗಿದ್ದರಂತೆ. ಹೀಗಾಗಿ, ಚಿಕಿತ್ಸೆಗಾಗಿ ಪಟಿಯಾಲಾದ ಅವರ ಮನೆಯ ಸಮೀಪವಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪಟಿಯಾಲದಲ್ಲಿ ವೈದ್ಯರು 80 ವರ್ಷದ ಹೃದ್ರೋಗಿ ಬ್ರಾರ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಇದನ್ನು ಓದಿ: Government New Scheme: ರೈತರಿಗೆ ಭರ್ಜರಿ ಗುಡ್ ನ್ಯೂಸ್! ಸಾಲ ಮನ್ನಾ ಕುರಿತು ಸರ್ಕಾರದ ಮಹತ್ವದ ಘೋಷಣೆ?

Advertisement

ಹರ್ಯಾಣದ 80 ವರ್ಷದ ದರ್ಶನ್ ಸಿಂಗ್ ಬ್ರಾರ್ ಅವರು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ ಹಿನ್ನೆಲೆ ಅವರ ದೇಹವನ್ನು ಕುಟಂಬಸ್ಥರು ಪಟಿಯಾಲದ ಕರ್ನಾಲ್‌ಗೆ ಆಂಬ್ಯುಲೆನ್ಸ್‌ನಲ್ಲಿ ಒಯ್ಯುತ್ತಿದ್ದಾಗ ವಾಹನವು ರಸ್ತೆ ಗುಂಡಿಗೆ ಇಳಿದಿದೆ(Ambulance Hits Pothole). ಆ ಹೊಡೆತಕ್ಕೆ ಮೃತಪಟ್ಟಿದ್ದಾರೆ ಎಂದುಕೊಂಡ ದರ್ಶನ್ ಸಿಂಗ್ ಅವರು ತಮ್ಮ ಕೈಗಳನ್ನು ಅಲುಗಾಡಿಸಿದ್ದಾರೆ. ಈ ಸಂದರ್ಭ ವಾಹನದಲ್ಲಿ ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬದುಕಿರುವುದು ಗೊತ್ತಾಗಿದೆ. ಹೀಗಾಗಿ ಮೊಮ್ಮಗ, ಕೂಡಲೇ ಹತ್ತಿರದ ಆಸ್ಪತ್ರೆಗೆ ಆಂಬುಲೆನ್ಸ್ ಅನ್ನು ಆಸ್ಪತ್ರೆಗೆ ತೆರಳುವಂತೆ ಡ್ರೈವರ್‌ಗೆ ಸೂಚಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಬ್ರಾರ್ ಅವರನ್ನು ಪರೀಕ್ಷಿಸಿ, ಬದುಕಿದ್ದಾರೆಂದು ಘೋಷಿಸಿದ್ದಾರೆ. ಈ ಮೂಲಕ ದರ್ಶನ್ ಸಿಂಗ್ ಅವರ ಕುಟುಂಬದಲ್ಲಿ ಆವರಿಸಿದ್ದ ಸೂತಕದ ಛಾಯೆ ಮರೆಯಾಗಿ ಸಂತಸ ಮನೆ ಮಾಡಿದೆ.

Advertisement
Advertisement