For the best experience, open
https://m.hosakannada.com
on your mobile browser.
Advertisement

Revanna to Jail: ರೇವಣ್ಣಗೆ 7 ದಿನ ಬಂಧನ, ಅಮಾವಾಸ್ಯೆಯಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್, ಮ್ಯಾಜಿಕ್ ಮಾಡದ ಮಂತ್ರಿಸಿದ ನಿಂಬೆ !

Revanna to Jail: ಪ್ರಜ್ವಲ್ ಏನೋ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಅದರ ಗೊತ್ತಿಲ್ಲ. ಗೊತ್ತಿಲ್ಲ ಅನ್ನುತ್ತಲೆ ಇದ್ದ ರೇವಣ್ಣನವರನ್ನು ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದೆ.
04:44 PM May 08, 2024 IST | ಸುದರ್ಶನ್ ಬೆಳಾಲು
UpdateAt: 04:45 PM May 08, 2024 IST
revanna to jail  ರೇವಣ್ಣಗೆ 7 ದಿನ ಬಂಧನ  ಅಮಾವಾಸ್ಯೆಯಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್  ಮ್ಯಾಜಿಕ್ ಮಾಡದ ಮಂತ್ರಿಸಿದ ನಿಂಬೆ
Image Credit: Deccan Herald
Advertisement

Revanna to Jail: ಪ್ರಜ್ವಲ್ ಏನೋ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಅದರ ಗೊತ್ತಿಲ್ಲ. ಗೊತ್ತಿಲ್ಲ ಅನ್ನುತ್ತಲೆ ಇದ್ದ ರೇವಣ್ಣನವರನ್ನು ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದೆ. ಯಾವತ್ತು ವಾಸ್ತು ಮೇಂಟೇನ್ ಮಾಡುವ ಮಂತ್ರಿಸಿದ ನಿಂಬೆಕಾಯಿ ಮ್ಯಾಜಿಕ್ ಯಾಕೋ ಇಂದು ವರ್ಕ್ ಆದಂತೆ ಕಾಣಿಸಿಲ್ಲ. ರೇವಣ್ಣ ಸೀದಾ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ.

Advertisement

ನನಗೆ ಏನು ಗೊತ್ತಿಲ್ಲ. ನನ್ನದು ಯಾವುದು ತಪ್ಪು ಇಲ್ಲ. ಬೇಕನ್ತಲೆ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನನಗೆ ಹುಷಾರಿಲ್ಲ, ಬೆಳಿಗ್ಗೆ ಡ್ರಿಪ್ಸ್ ಬೇರೆ ಹಾಕಿದ್ದಾರೆ. ಹೊಟ್ಟೆ ಉರಿ ಕೂಡಾ ಬಂದಿದೆ, ಗ್ಲುಕೋಸ್ ಬೇರೆ ಹಾಕಿದ್ದಾರೆ. ನಾನು ಶಾಸಕನಾಗಿ 25 ವರ್ಷ ಕಳೆದಿದೆ. ಬೇಕೆಂದೇ ಈ ರೀತಿ ಮಾಡಲಾಗಿದೆ. ವಾರಂಟ್ ಇಲ್ಲದೆ ಮನೆಗೆ ಬಂದು ಅರೆಸ್ಟ್ ಮಾಡಿದರು - ಹೀಗೆಲ್ಲ ಎಚ್‌.ಡಿ. ರೇವಣ್ಣ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದರು. ಕೊನೆಗೆ ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ರೇವಣ್ಣ ಮೇ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಹೀಗಾಗಿ ಇಂದಿನಿಂದ 7 ದಿನಗಳ ವರೆಗೆ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗಲಿದ್ದಾರೆ.

17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನುದ್ದೇಶಿಸಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರೇವಣ್ಣ, ಕಸ್ಟಡಿಗೆ ಬಂದು 3 ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡ ಆಗುತ್ತಿದೆ. ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಗೊತ್ತಿದ್ದನ್ನು ಹೇಳಿದ್ದೇನೆ. ಮೂರು ದಿನದಿಂದ ಹೊಟ್ಟೆ ನೋವು ಇದೆ. ಮಲಗಲು ಕೂಡ ಆಗಿಲ್ಲ. ಎಲ್ಲ ವಿಚಾರಣೆಯೂ ಮುಗಿದಿದೆ ಎಂದು ತನಿಖಾಧಿಕಾರಿಯು ನಿನ್ನೆಯೇ ಹೇಳಿದ್ದರು. ಆದರೆ, ಇಂದು ಮತ್ತೆ ಮತ್ತೆ ವಿಚಾರಣೆ ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ನಾನು ಏನೂ ಮಾಡಿಲ್ಲ ಸರ್. ಮಾಡಿಲ್ಲ ಅಂದಾಗ ಯಾಕೆ ಸುಮ್ನೆ ನಾನು ಒಪ್ಪಿಕೊಳ್ಳಬೇಕು? ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

Advertisement

ಇದನ್ನೂ ಓದಿ: ನನಗೆ ದಕ್ಷಿಣದ ಚಿತ್ರಗಳಲ್ಲಿ ಅವಕಾಶಗಳು ಸಿಗದಿರಲು ಇದೇ ಕಾರಣ-ನಟಿ ಇಲಿಯಾನಾ  

ವಿವಾದ ವಾದ ಪ್ರತಿವಾದ ಹೇಗಿತ್ತು ಗೊತ್ತೇ?
ವಿಚಾರಣೆ ಶುರುವಾಗುತ್ತಿದ್ದಂತೆ, ಎಚ್‌.ಡಿ. ರೇವಣ್ಣ ಅವರನ್ನು ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ತಕ್ಕಂತೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಶನ್ ಸಲ್ಲಿಸಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲರು. SIT ಸಲ್ಲಿಸಿರೋ ವರದಿಯಲ್ಲಿ ಆರೋಪಿ ತನಿಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ. ಮೌನ ವಹಿಸುವುದು ಸಹ ವ್ಯಕ್ತಿಯ ಹಕ್ಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶ ಮಾಡಿದ ವಿಶೇಷ ಸರ್ಕಾರಿ ಅಭಿಯೋಜಕರು, ಜಾಮೀನು ನೀಡದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಅಲ್ಲದೆ, ಹಲವು ಹಳೇ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು. ಆರೋಪಿ ಪ್ರಬಲ ವ್ಯಕ್ತಿ. ಜಾಮೀನು ನೀಡಿದರೆ ಸಾಕ್ಷಿ ನಾಶ ಪಡಿಸುತ್ತಾರೆ. ಇದು 354a ಪ್ರಕರಣ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಹೇಳಿದ್ದಾರೆ. ಇವೆಲ್ಲವೂ ಜಾಮೀನು ಸಹಿತ ಸೆಕ್ಷನ್‌ಗಳಾಗಿವೆ ಎಂದು ವಾದ ಮಂಡಿಸಿದ್ದಾರೆ. ಕುಲಗೂ ನ್ಯಾಯಾಧೀಶರು ರೇವಣ್ಣರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿಸಿದ್ದಾರೆ.

ಇದನ್ನೂ ಓದಿ: Comedy Kiladigalu: ಕಾಮಿಡಿ ಕಿಲಾಡಿಗಳು ಸೀಸನ್ -7: ಪುತ್ತೂರಿನ ಎರಡು ಮುತ್ತುಗಳು ಸೆಲೆಕ್ಟೆಡ್ !!

Advertisement
Advertisement
Advertisement