ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ayodhya: ಅಯೋಧ್ಯಾ ರಾಮನಿಗೆ 7 ಕೆಜಿ ಚಿನ್ನದಿಂದ ಮಾಡಿದ "ರಾಮಾಯಣ" ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌

Ayodhya: ಏಳು ಕೆಜಿ ಚಿನ್ನದ ಲೇಪನ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌ ಅವರು ಬಾಲ ರಾಮನಿಗೆ 24 ಕ್ಯಾರೆಟ್ ಚಿನ್ನದ ರಾಮಾಯಣವನ್ನು ಸಮರ್ಪಿಸಿದ್ದಾರೆ.
01:46 PM Apr 11, 2024 IST | ಸುದರ್ಶನ್
UpdateAt: 01:48 PM Apr 11, 2024 IST
Advertisement

Ayodhya: ಅಯೋಧ್ಯೆಯ ಪ್ರಭು  ಶ್ರೀರಾಮನಿಗೆ ಸುಮಾರು 151 ಕೆಜಿ ತೂಕದ ರಾಮಚರಿತ ಮಾನಸ ಪ್ರತಿಯನ್ನು 5 ಕೋಟಿ ಮೊತ್ತದಲ್ಲಿ ತಯಾರಿಸಿದ್ದು, ಇದಕ್ಕೆ ಏಳು ಕೆಜಿ ಚಿನ್ನದ ಲೇಪನ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್‌ ಅವರು ಬಾಲ ರಾಮನಿಗೆ 24 ಕ್ಯಾರೆಟ್ ಚಿನ್ನದ ರಾಮಾಯಣವನ್ನು ಸಮರ್ಪಿಸಿದ್ದಾರೆ.

Advertisement

ಇದನ್ನೂ ಓದಿ: Actor Suraj: ನಿಶ್ಚಿತಾರ್ಥದಂದೇ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಟ

24 ಕ್ಯಾರೆಟ್ ಚಿನ್ನದ ಲೇಪನದಿಂದ ಕೂಡಿರುವ ರಾಮಚರಿತ ಮಾನಸ 10,902 ಕಾವ್ಯಗಳನ್ನು ಒಳಗೊಂಡಿದೆ. ಈ ಚಿನ್ನದ ಕೃತಿಯಲ್ಲಿ ಸುಮಾರು 480 ರಿಂದ 500 ಪುಟಗಳು ಇವೆ ಎಂದು  ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ: Ajith Hanumakkanavr: ನಿರೂಪಕ ಅಜಿತ್ ಹನುಮಕ್ಕನವರ್' ಗೆ ಕಾಂಗ್ರೆಸ್ ನಿಂದ MP ಟಿಕೆಟ್ ?!

ಲಕ್ಷ್ಮೀನಾರಾಯಣ್ ಅವರು ತಮ್ಮ ಇಡೀ ಜೀವಮಾನದ

ಉಳಿತಾಯವನ್ನು ಈ ಚಿನ್ನದ ರಾಮಚರಿತ ಮಾನಸ ಪುಸ್ತಕಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ಪುಸ್ತಕವನ್ನು ತಯಾರಿಸಲು 140 ಕೆಜಿಯಷ್ಟು ತಾಮ್ರವನ್ನು ಸಹ ಬಳಸಿದ್ದಾರೆ, ಪ್ರಸ್ತುತ ಈ ಪುಸ್ತಕವನ್ನು ಶ್ರೀರಾಮನ ಗರ್ಭಗುಡಿಯಲ್ಲಿ ಇರಿಸಲಾಗಿದೆ.

ಇನ್ನು ಮಂಗಳವಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ನವಮಿ ಆಚರಣೆ ಶುರುವಾಗಿದೆ. ಇನ್ನು ಅಲ್ಲಿನ ಇತರೆ ದೇವಾಲಯಗಳಲ್ಲಿ ರಾಮಲೀಲಾ, ರಾಮಕಥೆ, ರಾಮರಕ್ಷಾ ಸ್ತೋತ್ರ, ದುರ್ಗಾ ಸಪ್ತಶತಿ ಪಾರಣೆ ಮತ್ತು ಭಜನೆಗಳನ್ನು ಮಾಡಲಾಗುತ್ತಿದೆ. ರಾಮಚಂದ್ರ ನೆಲೆಸಿರುವ ಗರ್ಭಗುಡಿಯ ಭಾಗದಲ್ಲಿ ಬೆಳ್ಳಿಯ ಕಳಶವನ್ನು ಪ್ರತಿಷ್ಠಾಪಿಸುವ ಮೂಲಕ ರಾಮನವಮಿಗೆ ವಿದ್ಯುಕ್ತ ಚಾಲನೆ ದೊರೆತಿದೆ

Related News

Advertisement
Advertisement