Renukaswamy Murder Case: ಮೈಸೂರಿನ ರ್ಯಾಡಿಸನ್ ಹೋಟೆಲ್‌ನಲ್ಲಿ ಶರಣಾಗಲು ಆಪ್ತರಿಗೆ ತಿಳಿಸಿದ್ದ ದರ್ಶನ್
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಠಾಣೆಗೆ ಹೋಗಿ ಕೆಲವರನ್ನು ಶರಣಾಗಿಸಲು ಮೈಸೂರಿನ ರ್ಯಾಡಿಸನ್ ಹೋಟೆಲ್‌ನಲ್ಲೇ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ.
ಜೂ.9 ರಂದು ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತ ದೇಹ ಪತ್ತೆಯಾಗಿರುವ ಕುರಿತು ಅರಿತ ದರ್ಶನ್, ವಿನಯ್ ಹಾಗೂ ಇತರರು ಗಾಬರಿಗೊಂಡು ಈ ಪ್ರಕರಣದಲ್ಲಿ ಯಾರನ್ನಾದರೂ ಶರಣಾಗುವಂತೆ ಸೂಚಿಸಲು ಯೋಜನೆ ರೂಪಿಸಿದ್ದರು.
ನಿದ್ರಿಸುತ್ತಿದ್ದಾಗ ಯುವಕನ ಲಿಂಗ ಬದಲಾವಣೆ ; ಹುಡುಗನಿಂದ ಹುಡುಗಿಯಾಗಿ ಬದಲಾವಣೆ
ಮೈಸೂರಿನ ರಾರ್ಡಿಸನ್ ಹೋಟೆಲ್‌ನಲ್ಲಿ ವಾಸವಿದ್ದ ದರ್ಶನ್, ಪವನ್, ನಂದೀಶ್, ವಿನಯ್, ದೀಪಕ್ ಮತ್ತು ಪ್ರದೂಶ್ ಜೊತೆ ಚರ್ಚೆ ಮಾಡಿ ರಾಘವೇಂದ್ರ, ನಂದೀಶ್, ದೀಪಕ್, ಕಾರ್ತಿಕ್, ಕೇಶವ ಮೂರ್ತಿ ಹಾಗೂ ನಿಖಿಲ್ ನಾಯಕ್ ರನ್ನು ಪೊಲೀಸ್ ಠಾಣೆಗೆ ಹೋಗಿ ಶರಣಾಗಲು ಸೂಚಿಸಿದ್ದರು. ನಂತರ ರಾಘವೇಂದ್ರ, ಕಾರ್ತಿಕ್, ಕೇಶವ ಮೂರ್ತಿ ಮತ್ತು ನಿಖಿಲ್ ನಾಯಕ್‌ಗೆ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿದ್ದಾಗಿ ಶರಣಾಗಲು ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಆರೋಪಿಗಳ ಒಳಸಂಚು ಮತ್ತು ಸಾಕ್ಷ್ಯ ನಾಶದ ವಿಷಯ ಮುಚ್ಚಿ ಹಾಕಲು ನಟ ದರ್ಶನ್, ತನ್ನ ಸ್ನೇಹಿತ ಮೋಹನ್‌ರಾಜ್ ಎಂಬಾತನಿಂದ 40 ಲಕ್ಷ ರೂ. ಪಡೆದುಕೊಂಡಿದ್ದಾಗಿ ವರದಿಯಾಗಿದೆ. ಇದರಲ್ಲಿ 3 ಲಕ್ಷ ರೂ.ವಿಜಯಲಕ್ಷ್ಮೀಗೆ ತನ್ನ ಆಪ್ತರ ಮೂಲಕ ಕಳುಹಿಸಿದ್ದ. ಇನ್ನು 40 ಲಕ್ಷ ರೂ. ಜಪ್ತಿ ಮಾಡಲಾಗಿದೆ.