ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Pavitra Gowda: ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮೇಕಪ್‌- ಎಸ್‌ಐ ನೇತ್ರಾವತಿಗೆ ನೋಟಿಸ್‌

Pavitra Gowda: ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಎಸ್‌ಐ ನೇತ್ರಾವತಿ ಎಂಬುವವರಿಗೆ ಈಗ ನೋಟಿಸ್‌ ನೀಡಲಾಗಿರುವ ಕುರಿತು ವರದಿಯಾಗಿದೆ.
02:28 PM Jun 25, 2024 IST | ಸುದರ್ಶನ್
UpdateAt: 02:28 PM Jun 25, 2024 IST
Advertisement

Pavitra Gowda: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy) ಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಎಸ್‌ಐ ನೇತ್ರಾವತಿ ಎಂಬುವವರಿಗೆ ಈಗ ನೋಟಿಸ್‌ ನೀಡಲಾಗಿರುವ ಕುರಿತು ವರದಿಯಾಗಿದೆ.

Advertisement

Zameer Ahmed: ಮುಸ್ಲಿಮರ ಕೆಲಸವನ್ನು ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕು-ಜಮೀರ್‌ ಅಹ್ಮದ್‌ ಹೇಳಿಕೆ

Advertisement

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡಗೆ ಮೇಕಪ್‌ ಕಿಟ್‌ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ಆರೋಪ ಪೊಲೀಸ್‌ ಅಧಿಕಾರಿ ನೇತ್ರಾವತಿ ಅವರ ಮೇಲೆ ಇದ್ದು, ಇದೀಗ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್‌ ನೀಡಲಾಗಿರುವ ಕುರಿತು ವರದಿಯಾಗಿದೆ.

ಪೊಲೀಸ್‌ ಕಸ್ಟಡಿಯಲ್ಲಿರುವ ಸಮಯದಲ್ಲಿ ಪವಿತ್ರಾ ಗೌಡ ಮೇಕಪ್‌ ಮಾಡಿಕೊಂಡಿದ್ದು, ಜೂನ್.‌ 15 ರಂದು ರಾಜರಾಜೇಶ್ವರಿ ಮನೆಗೆ ಸ್ಥಳ ಮಹಜರಿಗೆ ಹೋಗುವಾಗ ಹಿಂತಿರುಗಿ ಬರುವಾಗ ಮೇಕಪ್‌ ಮಾಡಿಕೊಂಡು ತುಟಿಗೆ ಲಿಪ್‌ಸ್ಟಿಕ್‌ ಹಾಕಿ ಹೊರ ಬಂದಿದ್ದರು ಎನ್ನಲಾಗಿದೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಹೋಗುವಾಗ ಮಾಮೂಲಿಯಾಗಿ ಹೋಗಿದ್ದು, ಮಹಜರು ಮುಗಿಸಿ ವಾಪಸ್‌ ಬರುವ ಸಮಯದಲ್ಲಿ ಮೇಕಪ್‌ ಮಾಡಿಕೊಂಡು ಮುಖ ತಿರುವಿಕೊಂಡು ಬಂದಿದ್ದ ವೀಡಿಯೋ ವೈರಲ್‌ ಆಗಿತ್ತು.

ವಿಜಯನಗರ ಠಾಣೆ ಎಸ್‌ಐ ನೇತ್ರಾವತಿ ಅವರಿಗೆ ಕರ್ತವ್ಯಲೋಪದಡಿ ರೂಲ್‌ 7 ರ ಅಡಿ ಡಿಸಿಪಿ ನೋಟಿಸ್‌ ನೀಡಿರುವ ಕುರಿತು ವರದಿಯಾಗಿತ್ತು.

ಪವಿತ್ರಾ ಗೌಡ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗವ ಸಮಯದಲ್ಲಿ ಆಕೆಯ ಬಳಿ ಮೇಕಪ್‌ ಕಿಟ್‌ ಇತ್ತು ಎನ್ನಲಾಗಿದೆ.

One Kidney: ಒಂದು ಕಿಡ್ನಿ ಹಾಳಾಗಿದ್ದರೆ ಇನ್ನೊಂದು ಕಿಡ್ನಿ ಎಷ್ಟು ದಿನ ಬಾಳಿಕೆ ಬರುತ್ತೆ? ಇಲ್ಲಿದೆ ಉತ್ತರ

Advertisement
Advertisement