For the best experience, open
https://m.hosakannada.com
on your mobile browser.
Advertisement

Renuka Swamy Murder: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣ ದೋಚಿತ್ತೇ ಗ್ಯಾಂಗ್??? ಇಲ್ಲಿದೆ ಸ್ಪೆಷಲ್ ಮಾಹಿತಿ

Renuka Swamy Murder: ರೇಣುಕಾಸ್ವಾಮಿ ಶವವನ್ನು ಮೋರಿಗೆ ಎಸೆಯುವ ಮೊದಲು ಆರೋಪಿಗಳು ಆತನ ಚಿನ್ನಾಭರಣವನ್ನು ದೋಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
02:01 PM Jun 17, 2024 IST | ಕಾವ್ಯ ವಾಣಿ
UpdateAt: 02:01 PM Jun 17, 2024 IST
renuka swamy murder  ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣ ದೋಚಿತ್ತೇ ಗ್ಯಾಂಗ್    ಇಲ್ಲಿದೆ ಸ್ಪೆಷಲ್ ಮಾಹಿತಿ

Renuka Swamy Murder : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಇದೀಗ ಮತ್ತೊಂದು ಹೊಸ ವಿಚಾರ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಹತ್ಯೆ ನಂತರ ಆರೋಪಿಗಳು ಕಾಮಾಕ್ಷಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋರಿಗೆ ಶವವನ್ನು ಎಸೆದಿದ್ದರು. ಆದರೆ ರೇಣುಕಾಸ್ವಾಮಿ ಶವವನ್ನು ಮೋರಿಗೆ ಎಸೆಯುವ ಮೊದಲು ಆರೋಪಿಗಳು ಆತನ ಚಿನ್ನಾಭರಣವನ್ನು ದೋಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

ನ್ಯಾಯಾಲಯದಲ್ಲಿ ಎಸ್‌ಪಿಪಿಯೇ ವಾದ ಮಂಡಿಸಿದ ಪ್ರಕಾರ, ರೇಣುಕಾಸ್ವಾಮಿ ಮನೆಯಿಂದ ಹೊರಡುವಾಗ ಮೈಮೇಲೆ ಚಿನ್ನಾಭರಣವಿತ್ತು. ಶೆಡ್‌ನಲ್ಲಿಯೂ ಇತ್ತು. ಶೆಡ್‌ನಲ್ಲಿ ರೇಣುಕಾಸ್ವಾಮಿ ಬಟ್ಟೆಯನ್ನು ಬಿಚ್ಚಿಸಿ ಆರೋಪಿಗಳು ಚಿತ್ರಹಿಂಸೆ ನೀಡಿದ್ದಾರೆ. ಕರೆಂಟ್ ಶಾಕ್ ನೀಡಿದ್ದಾರೆ. ಅಲ್ಲದೇ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಕಿಡ್ನಾಪ್ ಮಾಡುವಾಗ ಆತ ಧರಿಸಿದ್ದ ಬಟ್ಟೆಯೇ ಬೇರೆ. ಆದರೆ ಮೋರಿಯಲ್ಲಿ ಶವ ಸಿಕ್ಕಾಗ ಹಾಕಿದ್ದ ಬಟ್ಟೆಯೇ ಬೇರೆ. ಶವದ ಬಟ್ಟೆ ಬದಲಾಯಿಸಿ ಮೋರಿಗೆ ಎಸೆಯುವಾಗ ಚಿನ್ನಾಭರಣಗಳನ್ನು ಆರೋಪಿಗಳು ದೋಚಿದ್ದಾರೆ ಎಂಬುದು ಆರೋಪವಾಗಿದೆ.

ಅಂತೆಯೇ ಪೊಲೀಸ್ ವಿಚಾರಣೆಯಲ್ಲಿ ರೇಣುಕಾಸ್ವಾಮಿಯ ಧರಿಸಿದ್ದ ಚಿನ್ನದ ಸರ, ಕಡಗ, ಉಂಗುರಗಳು ಶವದ ಮೇಲಿರಲಿಲ್ಲ (Renuka Swamy Murder Gold Jewellery Missing) . ಪೊಲೀಸರ ವಶದಲ್ಲಿರುವ ರವಿ ಎಂಬ ಆರೋಪಿ ಜಗ್ಗ ಎಂಬ ಆರೋಪಿ ಶವವನ್ನು ಎಸೆಯುವ ಮೊದಲು ಚಿನ್ನಾಭರಣಗಳನ್ನು ಬಿಚ್ಚಿಕೊಂಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು. ಚಿನ್ನಾಭರಣವನ್ನು ಆರೋಪಿ ಏನು ಮಾಡಿದ್ದಾನೆ ಎನ್ನುವ ತನಿಖೆ ಇನ್ನಷ್ಟೇ ನಡೆಯಲಿದೆ.

Advertisement

Advertisement
Advertisement
Advertisement