For the best experience, open
https://m.hosakannada.com
on your mobile browser.
Advertisement

Renuka Swamy Murder Case: ದರ್ಶನ್ ಕೇಸ್, ಹಾಸ್ಯನಟ ಚಿಕ್ಕಣ್ಣನಿಗೂ ನೋಟಿಸ್ ಸಾಧ್ಯತೆ???

Renuka Swamy Murder Case: ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣ (Renuka Swamy Murder Case) ಸಂಬಂಧ ಕನ್ನಡದ ಹಾಸ್ಯ ನಟ ಚಿಕ್ಕಣ್ಣನಿಗೂ ಪೊಲೀಸರು ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
01:51 PM Jun 17, 2024 IST | ಕಾವ್ಯ ವಾಣಿ
UpdateAt: 02:09 PM Jun 17, 2024 IST
renuka swamy murder case  ದರ್ಶನ್ ಕೇಸ್  ಹಾಸ್ಯನಟ ಚಿಕ್ಕಣ್ಣನಿಗೂ ನೋಟಿಸ್ ಸಾಧ್ಯತೆ

Renuka Swamy Murder Case: ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan Thoogudeepa) ಬಂಧನವಾಗಿರುವ ಸಂದರ್ಭದಲ್ಲಿ ದರ್ಶನ್ ಬಗೆಗಿನ ಶಾಕಿಂಗ್ ಮಾಹಿತಿಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಅಲ್ಲದೇ ದರ್ಶನ್ ಕೊಲೆ ನಡೆಯುವ ಮುನ್ನ ಯಾರೊಂದಿಗೆ ಸಂಪರ್ಕದಲ್ಲಿದ್ದರು, ಕೊಲೆಗೂ ಮುನ್ನ ಯಾರನ್ನೆಲ್ಲ ಭೇಟಿ ಮಾಡಿದ್ದರು ಅವರೆಲ್ಲರಿಗೂ ಅಘಾತ ಕಾದಿದೆ.

Advertisement

ಹೌದು, ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣ (Renuka Swamy Murder Case) ಸಂಬಂಧ ಕನ್ನಡದ ಹಾಸ್ಯ ನಟ ಚಿಕ್ಕಣ್ಣನಿಗೂ ಪೊಲೀಸರು ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ದರ್ಶನ್‌ ಶೆಡ್‌ಗೆ ಹೋಗುವ ಮೊದಲು ಖಾಸಗಿ ರೆಸ್ಟೂರೆಂಟ್‌ ಆಗಿರುವ ಸ್ಟೋನಿ ಬ್ರೂಕ್‌ ರೆಸ್ಟೂರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಅಲ್ಲಿ ಚಿಕ್ಕಣ್ಣ ಸೇರಿದಂತೆ ಇನ್ನೂ ಹಲವಾರು ಜನರು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ರೇಣುಕಾ ಸ್ವಾಮಿಗೆ ಹಲ್ಲೆ ನಡೆಸುವ ಕುರಿತು ಏನಾದರೂ ಚರ್ಚೆ ನಡೆದಿದೆಯೇ ಎಂದು ತನಿಖೆ ಮಾಡುವ ಸಲುವಾಗಿ ಚಿಕ್ಕಣ್ಣ ಅವರಿಗೂ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲು ಪೊಲೀಸರು ಉದ್ದೇಶಿಸಿದ್ದಾರೆ. ಸದ್ಯ ಈ ಕೃತ್ಯ ನಡೆಯುವ ಮೊದಲು ನಡೆದ ಆ ಪಾರ್ಟಿಯಲ್ಲಿ ಭಾಗಿಯಾದವರಿಗೂ ನೋಟಿಸ್‌ ನೀಡುವ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Advertisement

ತಕ್ಷಣವೇ ಕಾಮಾಕ್ಷಿಪಾಳ್ಯ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಕೊಲೆ ನಡೆಯುವುದಕ್ಕೂ ಮೊದಲು ಬಂಧಿತ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರುಕ್ ಹೋಟೆಲ್‌ನಲ್ಲಿ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ದರ್ಶನ್, ವಿನಯ್, ಚಿಕ್ಕಣ್ಣ ಹಾಗೂ ಪವನ್ ಇದ್ದರು ಎನ್ನಲಾಗಿದೆ.

Advertisement
Advertisement
Advertisement