ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Relationship Tips: ಯುವತಿಯರು ಇಂತಹ ಗಂಡಸರಿಗೆ ಫಿದಾ ಆಗ್ತಾರಂತೆ! ಇಲ್ಲಿದೆ ನೋಡಿ ಹುಡುಗೀರ ಸೀಕ್ರೆಟ್

Relationship Tips: ಗಂಡಸರ ಲುಕ್, ವ್ಯಕ್ತಿತ್ವ, ಗುಣಗಳು, ಮಾತು ಅಥವಾ ಉತ್ತಮ ನಡವಳಿಕೆ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಾ ಎಂದು ವೈಜ್ಞಾನಿಕ ಸಂಶೋಧನೆಯನ್ನು ಮಾಡಲಾಗಿದ್ದು, ಏನು ಹೇಳಿದೆ?
01:11 PM Jul 15, 2024 IST | ಕಾವ್ಯ ವಾಣಿ
UpdateAt: 01:11 PM Jul 15, 2024 IST
Advertisement

Relationship Tips: ನೀರಲ್ಲಿರುವ ಮೀನಿನ ಹೆಜ್ಜೆ ಮತ್ತು ಒಬ್ಬ ಹೆಣ್ಣಿನ ಮನಸು ಯಾರಿಗೂ ಅರ್ಥ ಮಾಡೋಕೆ ಕಷ್ಟ. ಹಾಗಿರುವಾಗ ಬಹುತೇಕ ಪುರುಷರು ಹೆಣ್ಮಕ್ಳು ನನ್ನನ್ನು ಇಷ್ಟ ಪಡಲಿ ಅಂತಾ ತಿರುಗಿ ನೋಡಲಿ ಅಂತಾ ಏನೇನೊ ಪ್ಯಾಷನ್ ಮಾಡುತ್ತಾರೆ. ಬಾಡಿ ಬಿಲ್ಡ್ ಮಾಡುತ್ತಾರೆ, ಹ್ಯಾರ್ ಸ್ಟೈಲ್ ಮಾಡಿಸಿಕೊಳ್ಳುತ್ತಾರೆ, ಹೀಗೆ ನಾನಾ ಪ್ರಯತ್ನ ಮಾಡುತ್ತಾರೆ. ಆದ್ರೆ ಪ್ರೀತಿ ಗಳಿಸಲು ಆತನ ಲುಕ್, ವ್ಯಕ್ತಿತ್ವ, ಗುಣಗಳು, ಮಾತು ಅಥವಾ ಉತ್ತಮ ನಡವಳಿಕೆ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಾ ಎಂದು ವೈಜ್ಞಾನಿಕ ಸಂಶೋಧನೆಯನ್ನು ಮಾಡಲಾಗಿದ್ದು, ಈ ಸಂಶೋಧನೆ ಏನು ಹೇಳುತ್ತದೆ ಎಂದು (Relationship Tips) ಇಲ್ಲಿ ತಿಳಿಸಲಾಗಿದೆ.

Advertisement

ರಟ್ಜರ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ಮಾನವಶಾಸ್ತ್ರಜ್ಞ ಮತ್ತು ಶ್ರೇಷ್ಠ ಲೇಖಕಿ ಹೆಲೆನ್ ಇ. ಫಿಶರ್ ಪ್ರಕಾರ, ಪ್ರಪಂಚದಾದ್ಯಂತದ ಮಹಿಳೆಯರು ವ್ಯಕ್ತಿತ್ವ ಆಧಾರದ ಮೇಲೆ ಪುರುಷರತ್ತ ಆಕರ್ಷಿತರಾಗುತ್ತಾರೆ. ಆದ್ರೆ ಅಸಭ್ಯವಾಗಿ ವರ್ತಿಸುವ ಪುರುಷರು ಅವರನ್ನು ಎಂದಿಗೂ ಆಕರ್ಷಿಸುವುದಿಲ್ಲ. ಯಾಕೆಂದರೆ ತಮಗೂ ಅಭಿವ್ಯಕ್ತ ಸ್ವಾತಂತ್ರ ವನ್ನು ಮಹಿಳೆ ಬಯಸುತ್ತಾಳೆ.

ಇನ್ನು ಯುವಕರು ಬೆಲೆಬಾಳುವ ಬಟ್ಟೆಗಳನ್ನು ಧರಿಸಿ, ಫ್ಯಾನ್ಸಿ ಕಾರುಗಳನ್ನು ಓಡಿಸುವ ಗಂಡಸರು ಹೆಂಗಸರಿಗೆ ಇಷ್ಟವಾಗುತ್ತಾರೆ ಎನ್ನುವುದು ಒಂದು ಭ್ರಮೆ. ಯಾಕೆಂದರೆ ನೀವು ಸೈಕಲ್ ಓಡಿಸಿದರೂ, ತಳ್ಳೋ ಗಾಡಿ ಓಡಿಸಿದ್ರು ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಧ್ಯಯನವೊಂದು ಹೇಳುತ್ತದೆ. ಹುಡುಗೀರ ಲುಕ್ ಅದು ನಿಮ್ಮ ಮುಗ್ಧ ಮುಖವೂ ಆಗಿರಬಹುದು. ನೀವು ಸರಳವಾದ ಬಟ್ಟೆಗಳನ್ನು ಧರಿಸಿದ್ದರೂ, ಅದು ನಿಮಗೆ ಸರಿಹೊಂದುವ ಶೈಲಿಯನ್ನು ಹೊಂದಿರಬೇಕು.

Advertisement

ಮುಖ್ಯವಾಗಿ 2010 ರ ಅಧ್ಯಯನವು ಮಹಿಳೆಯರು ಹೆಚ್ಚಾಗಿ ವಯಸ್ಸಾದ ಪುರುಷರನ್ನು ಬಯಸುತ್ತಾರೆ ಎಂದು ಬಹಿರಂಗ ಪಡಿಸಿದೆ. ಡುಂಡೀ ವಿಶ್ವವಿದ್ಯಾನಿಲಯದ ಶಿಕ್ಷಕಿ ಮತ್ತು ಮನಶ್ಶಾಸ್ತ್ರಜ್ಞ ಫಿಯೋನಾ ಮೂರ್ ಅವರು ಈ ಬಗ್ಗೆ ಮಾತನಾಡಿದ್ದು, ಮಹಿಳೆಯರು ಹೆಚ್ಚು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿದ್ದರೆ, ಅವರು ಶಕ್ತಿಯುತ ಮತ್ತು ವಯಸ್ಸಾದ ಪುರುಷರ ಕಡೆಗೆ ಆಕರ್ಷಿತರಾಗುತ್ತಾರೆ. ಹೌದು ವಯಸ್ಸಾದ ಪುರುಷರು ಅನುಭವಿಗಳಾಗಿರುವುದರಿಂದ ಮಹಿಳೆಯರು ಅಂತಹವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಅವರಿಗೆ ಇರುತ್ತೆ.

ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು 2013 ರಲ್ಲಿ ನಡೆಸಿದ ಅಧ್ಯಯನದಲ್ಲಿ, ಅವರು ಕ್ಲೀನ್ ಶೇವ್ ಮಾಡಿದ ಮುಖ, ತಿಳಿ ಗಡ್ಡ, ದಪ್ಪ ಗಡ್ಡ ಅಥವಾ ಪೂರ್ಣ ಗಡ್ಡದ ಆಕರ್ಷಣೆಯ ಮೇಲೆ ಪುರುಷರ ಅಭಿಪ್ರಾಯವನ್ನು ಸಂಗ್ರಹಿಸಿದಾಗ, ಹಗುರವಾದ ಗಡ್ಡವನ್ನು ಹೊಂದಿರುವ ಪುರುಷರು ಹೆಚ್ಚು ಆಕರ್ಷಕವಾಗಿದ್ದಾರೆ ಎಂದು ಮಹಿಳೆಯರ ಮೂಲಕ ಉತ್ತರ ದೊರೆತಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ, ಹಗುರವಾದ ಗಡ್ಡವು ಪ್ರಪಂಚದಾದ್ಯಂತದ ಯುವಕರು ಮತ್ತು ಪುರುಷರಲ್ಲಿ ಟ್ರೆಂಡ್ ಆಗಿದೆ. ಈ ಲುಕ್ನಲ್ಲಿಯೇ ಪುರುಷರು ಅಚ್ಚುಕಟ್ಟಾಗಿ ಮತ್ತು ಕ್ರಮಬದ್ಧವಾಗಿ ಕಾಣುತ್ತಾರೆ.

ಜೊತೆಗೆ ಮಹಿಳೆಯರು ದಯೆ ಮತ್ತು ಸೌಮ್ಯ ಸ್ವಭಾವದ ಪುರುಷರನ್ನು ಪ್ರೀತಿಸುತ್ತಾರೆ. ಅನೇಕ ಅಧ್ಯಯನಗಳು ಮಹಿಳೆಯರು ತಮ್ಮನ್ನು ನಗಿಸುವ ಪುರುಷರನ್ನು ಬಯಸುತ್ತಾರೆ ಎಂದು ತಿಳಿಸುತ್ತವೆ. ಅಂತಹ ಮಹಿಳೆಯರು ಯಾವಾಗಲೂ ಹಾಸ್ಯ ಪ್ರಜ್ಞೆಯನ್ನು ಪ್ರೀತಿಸುತ್ತಾರೆ.

ಒಟ್ಟಿನಲ್ಲಿ ಪುರುಷರು ಮಹಿಳೆಯರ ಕೆಲವು ಸೀಕ್ರೆಟ್ ಬಗ್ಗೆ  ತಿಳಿಯೋಕೆ ಹರ ಸಾಹಸ ಪಡುವ ಪ್ರಯತ್ನ ಇಂದಿಗೂ ನಡೆಯುತ್ತಲೇ ಇದೆ.

Rakshit Shetty: ಕಾಪಿರೈಟ್‌ ವಿಚಾರ- ರಕ್ಷಿತ್‌ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದ ಹೊರಬಿತ್ತು ಮೊದಲ ಪ್ರತಿಕ್ರಿಯೆ

 

Advertisement
Advertisement