ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Relation Tips: ಲಿವಿಂಗ್ ಟುಗೆದರ್ ಬೆನ್ನಲ್ಲೇ ಮೈಕ್ರೋ ಚೀಟಿಂಗ್ ಹಾವಳಿ; ಪ್ರೇಮಿಗಳ ನಡುವೆ ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಇಲ್ಲಿದೆ ಡೀಟೈಲ್ಸ್

03:28 PM Jan 20, 2024 IST | ಅಶ್ವಿನಿ ಹೆಬ್ಬಾರ್
UpdateAt: 03:28 PM Jan 20, 2024 IST
Advertisement

Relationship Tips: ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ (Marraige)ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ ಪ್ರೀತಿಯ(Love)ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು.

Advertisement

 

ಕಾಲ ಬದಲಾದಂತೆ ಜನರ ಯೋಚನಾ ಲಹರಿ ಕೂಡ ಬದಲಾಗುವುದು ಸಹಜ. ಈ ನಡುವೆ ಪ್ರೇಮಿಗಳ(Lovers)ನಡುವೆ ಮೈಕ್ರೋ ಚೀಟಿಂಗ್ ಎಂಬ ಕಾನ್ಸೆಪ್ಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅಷ್ಟಕ್ಕೂ ಏನಿದು ಮೈಕ್ರೋ ಚೀಟಿಂಗ್ ಎಂದು ನೀವು ಯೋಚಿಸುತ್ತಿರಬಹುದು!! ಸಾಮಾನ್ಯವಾಗಿ ಚೀಟಿಂಗ್(Cheating)ಎಂದು ಕರೆಯಲ್ಪಡುವ ರಹಸ್ಯ ಸಂಬಂಧ ಕೂಡ ಮೈಕ್ರೋ ಚೀಟಿಂಗ್ (Relationship Tips)ಎಂದು ಪರಿಗಣಿಸಲಾಗುತ್ತದೆ.

Advertisement

 

ನಿಮ್ಮೊಂದಿಗೆ ಪ್ರೀತಿಯ ನಾಟಕ ಮಾಡಿಕೊಂಡು ಬೇರೆಯವರ ಜೊತೆಗೂ ಪ್ರೀತಿಯಲ್ಲಿದ್ದರೆ ಅದನ್ನು ಪ್ರೇಮ ಎನ್ನಲಾಗದು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಲವ್ ಮೆಂಟೈನ್ ಮಾಡುವುದು ಮೈಕ್ರೋ ಚೀಟಿಂಗ್ ಭಾಗವಾಗಿರುತ್ತದೆ. ಯಾವುದೇ ಲವರ್ಸ್ ಮಧ್ಯೆ ಒಬ್ಬ ಸಂಗಾತಿ ಕದ್ದುಮುಚ್ಚಿ ಇನ್ನೊಬ್ಬರಿಗೆ ಮೆಸೇಜ್ ಮಾಡುತ್ತಿದ್ದರೆ ಅದನ್ನು ಸೀಕ್ರೆಟ್ ಮೆಸೇಜಿಂಗ್ ಎನ್ನುತ್ತಾರೆ. ತಮ್ಮ ಸಂಗಾತಿಗೆ ತಿಳಿಯದ ರೀತಿಯಲ್ಲಿ ಕದ್ದು ಮುಚ್ಚಿ ಮೆಸೇಜ್ ಮಾಡುವುದು ಮೈಕ್ರೋ ಚೀಟಿಂಗ್ ಭಾಗವೆನ್ನಬಹುದು. ನಿಮ್ಮ ಸಂಗಾತಿ ನಿಮ್ಮನ್ನೂ ಬಿಟ್ಟು ಕಂಡವರನ್ನೆಲ್ಲ ಇಂಪ್ರೆಸ್ ಮಾಡುವ ಕೆಟ್ಟ ಚಾಳಿ ಹಿಡಿದರೆ ಅದು ಮೋಸ ಅಂದರೆ ಮೈಕ್ರೋ ಚೀಟಿಂಗ್ ಆಗಿರುತ್ತದೆ

 

ನಿಮ್ಮನ್ನು ಪ್ರೀತಿಸುತ್ತಿರುವ ನಿಮ್ಮ ಬಾಯ್ಫ್ರೆಂಡ್ ಇಲ್ಲವೇ ಗರ್ಲ್ಫ್ರೆಂಡ್ ನಿಮ್ಮ ಮಾಜಿ ಜೊತೆಗೆ ಮಾತನಾಡುವುದಲ್ಲದೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮೈಕ್ರೋ ಚೀಟಿಂಗ್ ಆಗಿದೆ. ಅಷ್ಟೆ ಅಲ್ಲದೇ, ನಿಮ್ಮ ಜೊತೆಗೆ ವೈರುಧ್ಯ ಇರುವ ಜನರ ಜೊತೆಗೆ ಸಂಪರ್ಕದಲ್ಲಿರುವುದು ಕೂಡಾ ಮೋಸದ ಭಾಗವಾಗುತ್ತದೆ.

 

ನಿಮ್ಮ ಸಂಗಾತಿ ಇತರರೊಂದಿಗೆ ಮಾತನಾಡುವುದು ತಪ್ಪಲ್ಲ. ಆದರೆ ಮಿತಿ ಮೀರಿದ ವರ್ತನೆ ಒಳ್ಳೆಯದಲ್ಲ. ನಿಮ್ಮಲ್ಲಿ ತೋರಿಸುವಷ್ಟೇ ಸ್ವಾತಂತ್ರ್ಯ, ಕ್ಲೋಸ್ನೆಸ್ ಮತ್ತೊಬ್ಬರ ಜೊತೆಗೆ ಇರುವುದು ಒಳ್ಳೆಯದಲ್ಲ. ಇನ್ನೊಬ್ಬರ ಮೈಮುಟ್ಟಿ ಮಾತನಾಡುವುದು, ಹೆಚ್ಚು ಟಚ್ಚಿ ಆಗಿರುವುದು ಮೈಕ್ರೋ ಚೀಟಿಂಗ್ ಭಾಗವೆನ್ನಬಹುದು. ಲವ್ವರ್ ಆಗಿದ್ದು ಬೇರೆಯವರಿಗೆ ಹೇಳುವುದು ಇಬ್ಬರಿಗೂ ಇಷ್ಟವಿದ್ದರೆ ಅದನ್ನು ಬಹಿರಂಗಪಡಿಸಬಹುದು. ಆದರೆ ಉದ್ದೇಶಪೂರ್ವಕವಾಗಿ ಇದನ್ನು ರಹಸ್ಯವಾಗಿ ಇಡುವುದು ಕೂಡ ಮೈಕ್ರೋ ಚೀಟಿಂಗ್ ಆಗಿದೆ.

Related News

Advertisement
Advertisement