Relationship: ಪ್ರೇಮಿಯೊಂದಿಗೆ ತಪ್ಪಿಯೂ ಈ ರೀತಿ ನಡೆದುಕೊಳ್ಳದಿರಿ; ಬ್ರೇಕ್ಅಪ್ ಆದೀತು!
Relationship: ಪ್ರೀತಿ ಅನ್ನೋದು ಹೇಳೋಕೆ ಎರಡು ಅಕ್ಷರ. ಆದ್ರೆ ಅದನ್ನು ಉಳಿಸೋದು ದೊಡ್ಡ ಸವಾಲು. ಹೌದು, ಯಾಕೆಂದರೆ ಒಂದು ಸಣ್ಣ ವಿಚಾರಕ್ಕೂ ಕೂಡಾ ಪ್ರೀತಿಗೆ ಬ್ರೇಕ್ ಬೀಳುವುದಂತೂ ಖಂಡಿತಾ. ಅದು ನಿಮ್ಮ ಪ್ರಿಯತಮೆ ಆಗಿರಲಿ, ಪತಿ, ಪತ್ನಿ, ಯಾರೇ ಆಗಿರಲಿ ನೀವು ಪ್ರೀತಿ ವಿಷಯದಲ್ಲಿ ಕೆಲವು ವಿಚಾರ ತಿಳಿಯೋದು ಮುಖ್ಯ. ಇದರಿಂದ ಪ್ರೀತಿ ಸಂಬಂಧವನ್ನು (Relationship) ಉತ್ತಮಗೊಳಿಸಿ ದೀರ್ಘ ಸಂಬಂಧ ಉಳಿಸಿಕೊಳ್ಳಬಹುದು.
ಎಕ್ಸ್ (ಮಾಜಿ ಪ್ರೀತಿ) ಬಗ್ಗೆ ಮಾತನಾಡಬೇಡಿ:
ಹುಡುಗ ಅಥವಾ ಹುಡುಗಿ ತಮ್ಮ ಸಂಗಾತಿಯೊಂದಿಗೆ ಮೊದಲ ಪ್ರೀತಿ ನೆನಪುಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಬೇಕು. ನಿಮ್ಮ ಸಂಗಾತಿಗೆ ನಿಮ್ಮ ಮಾಜಿ ಬಗ್ಗೆ ತಿಳಿದಿದ್ದರೂ, ಅದು ಮತ್ತೆ ಮತ್ತೆ ಮಾತನಾಡುವ ಮೂಲಕ ನಿಮ್ಮನ್ನು ಕೆರಳಿಸುತ್ತದೆ. ಏಕೆಂದರೆ ಯಾರೂ ತಮ್ಮ ಸಂಗಾತಿಯ ಮಾಜಿ ಪ್ರೀತಿಯ ಬಗ್ಗೆ ಕೇಳಲು ಬಯಸುವುದಿಲ್ಲ.
ಗೌರವ ನೀಡಿ:
ಯಾರಾದರೂ ನಿಮ್ಮನ್ನು ಪ್ರೀತಿಸುತ್ತಾರೆ ಎಂದ ಮಾತ್ರಕ್ಕೆ ಅವರನ್ನು ಗುಲಾಮರನ್ನಾಗಿ ಕಾಣಬೇಡಿ. ನಾಲ್ಕು ಜನರ ಮುಂದೆ ನಿಮ್ಮ ಗೆಳೆಯ/ಗೆಳತಿಯರನ್ನು ಕೀಳಾಗಿ ಮಾತನಾಡಿದರೆ ನಿಮ್ಮ ಸಂಗಾತಿ ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸುತ್ತಾರೆ.
ಸಮಯ ನೀಡಿ:
ನೀವು ಒಟ್ಟಿಗೆ ಕಳೆಯುವ ಸಮಯವನ್ನು ಖುಷಿಯಾಗಿ ಕಳೆಯಿರಿ. ಕೆಲಸ ಅಥವಾ ಇತರ ಕಾರಣಗಳಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವುದನ್ನು ಮರೆಯಬೇಡಿ .
ಕೋಪವನ್ನು ನಿಯಂತ್ರಿಸಬೇಕು:
ಸಣ್ಣ ಪುಟ್ಟ ಸಮಸ್ಯೆಗಳಿಗೆ ಕೋಪ ಮಾಡಿಕೊಳ್ಳಬೇಡಿ. ಮೌನವಾಗಿರಿ. ಅನಗತ್ಯವಾಗಿ ಜಗಳವಾಡಿದಾಗ ಅಥವಾ ಬೇರೆ ಕಾರಣಕ್ಕಾಗಿ ಅನಗತ್ಯವಾಗಿ ಕೋಪವನ್ನು ತೋರಿಸಿದಾಗ ಪ್ರೀತಿಯಲ್ಲಿ ವಿಘಟನೆ ಸಂಭವಿಸುತ್ತದೆ.
ಮತ್ತೆ ಮತ್ತೆ ಸುಳ್ಳು ಹೇಳಬೇಡಿ:
ನಿಮ್ಮ ಸಂಗಾತಿಗೆ ಪದೇ ಪದೇ ಸುಳ್ಳು ಹೇಳುವುದು ಸಂಬಂಧದಲ್ಲಿ ಬಿರುಕುಗಳಿಗೆ ಕಾರಣವಾಗಬಹುದು. ಹಾಗಾಗಿ ತಪ್ಪು ಮಾಡಿದರೂ ಮರೆಯದೆ ಹೇಳುವುದು ಒಳ್ಳೆಯದು. ಏಕೆಂದರೆ ನಿಮ್ಮ ಸಂಗಾತಿಗೆ ಮೋಸ ಮಾಡುವುದರಿಂದ ನಿಮ್ಮ ಸಂಬಂಧವನ್ನು ಕ್ಷಣಮಾತ್ರದಲ್ಲಿ ಮುರಿಯಬಹುದು. ನಂಬಿಕೆ ಇದ್ದಲ್ಲಿ ಪ್ರೀತಿ ಗಟ್ಟಿಯಾಗಿರುತ್ತದೆ.