Teachers Recruitment : ಅತಿಥಿ ಶಿಕ್ಷಕರು-ಅತಿಥಿ ಉಪನ್ಯಾಸಕರ ನೇಮಕ; ಈಗಲೇ ಅರ್ಜಿ ಸಲ್ಲಿಸಿ, ವೇತನ ವಿವರ ಇಲ್ಲಿದೆ
Teachers Recruitment: 2024-2025ರ ಶೈಕ್ಷಣಿಕ ಸಾಲಿಗೆ ಬಿಬಿಎಂಪಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹೊರಗುತ್ತಿಗೆ ಆಧಾರದಡಿ 'ಅತಿಥಿ ಶಿಕ್ಷಕರು' ಹಾಗೂ 'ಅತಿಥಿ ಉಪನ್ಯಾಸಕರ' ನೇಮಕಕ್ಕೆ ಆದೇಶವನ್ನು ಶನಿವಾರ ಹೊರಡಿಸಿದೆ.
Mangaluru: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಮೂವರು ವಶಕ್ಕೆ
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದಡಿ 'ಅತಿಥಿ ಶಿಕ್ಷಕರು' ಹಾಗೂ 'ಅತಿಥಿ ಉಪನ್ಯಾಸಕರ' ನೇಮಕವನ್ನು (BBMP Recruitment) ಜೂನ್ 16ರೊಳಗೆ ನೇಮಕ ಮಾಡಿಕೊಳ್ಳುವಂತೆ ಆದೇಶವನ್ನು ಶನಿವಾರ ಹೊರಡಿಸಿದೆ.
ಶಿಶುವಿಹಾರ ಶಾಲೆಗಳಿಗೆ ಬೇಕಾಗಿರುವ ಶಿಕ್ಷಕರನ್ನು ಶಿಶಿವಿಹಾರಗಳಿಗೆ ಹತ್ತಿರವಿರುವ ಪ್ರಾಥಮಿಕ ಶಾಲಾ ಮುಖ್ಯಸ್ಥರು ಎಸ್‌ಡಿಎಂಸಿ ಮೂಲಕ ನಿಯೋಜಿಸಬೇಕು ಎಂದು ಪಾಲಿಕೆ ತಿಳಿಸಿದೆ. ಇದರೊಂದಿಗೆ ಶಾಲಾ-ಕಾಲೇಜುಗಳಲ್ಲಿ ಸೂಚನಾ ಫಲಕದಲ್ಲಿ ಪ್ರಕಟಣೆ ಹೊರಡಿಸಬೇಕು. ನೇಮಕಕ್ಕೆ ಬರುವ ಅರ್ಜಿಗಳನ್ನು ಸಮಿತಿಯಲ್ಲಿ ಮಂಡಿಸಿ ನೇಮಕ ಮಾಡಿಕೊಳ್ಳಬೇಕು.
ಮುಖ್ಯವಾಗಿ 2017ರಲ್ಲಿ ಕೌನ್ಸಿಲ್ ನಿರ್ಣಯದಂತೆ ಗೌರವ ಸಂಭಾವನೆ ನಿಗದಿ ಪಡಿಸಲಾಗಿದೆ. ಅದರಂತೆ ಯಾವ ಶಿಕ್ಷಕರಿಗೆ ಎಷ್ಟಿದೆ ಎಂಬ ವೇತನ ಪಟ್ಟಿ ಇಲ್ಲಿದೆ :
ಅತಿಥಿ ಶಿಕ್ಷಕರು (ಶಿಶುವಿಹಾರ/ಪ್ರಾಥಮಿಕ ಶಾಲೆ) - ಮಾಸಿಕ ವೇತನ 19336 ರೂ.
ಅತಿಥಿ ಶಿಕ್ಷಕರು (ಪ್ರೌಢಶಾಲೆ) - ಮಾಸಿಕ ವೇತನ 22840 ರೂ.
ಅತಿಥಿ ಉಪನ್ಯಾಸಕ (ಪಿಯುಸಿ) - ಮಾಸಿಕ ವೇತನ 22567 ರೂ.
ಅತಿಥಿ ಉಪನ್ಯಾಸಕ (ಪದವಿ) - ಮಾಸಿಕ ವೇತನ 27897 ರೂ.
ಅತಿಥಿ ಉಪನ್ಯಾಸಕ (ಸ್ನಾತಕೋತ್ತರ ಪದವಿ)- ಮಾಸಿಕ ವೇತನ 30897
ಅತಿಥಿ ಉಪನ್ಯಾಸಕ (ಗಣಕಯಂತ್ರ)- ಮಾಸಿಕ ವೇತನ 22053 ರೂ.
ಸದ್ಯ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು ಜೂನ್ 01ರಿಂದ ಆರಂಭವಾಗಿವೆ. ಈ ಕಾರಣದಿಂದ ಜೂನ್ 16ರೊಳಗೆ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಗಡುವು ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶದ ಮೂಲಕ ಸೂಚನೆ ನೀಡಿದ್ದಾರೆ. ಮುಖ್ಯವಾಗಿ ಈ ಹಿಂದೆ ಬಿಬಿಎಂಪಿ ಸೆಕ್ಯೂರಿಟಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಕ್ಕೆ ನಿರ್ಧರಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಕೈ ಬಿಟ್ಟ ಬಿಬಿಎಂಪಿ, ಎಸ್‌ಡಿಎಂಸಿ ಹಾಗೂ ಸಿಡಿಸಿ ಮೂಲಕ ನೇಮಕಾತಿ ಮುಂದಾಗಿ ಆದೇಶ ಮಾಡಿದೆ.
Lakhpati Didi Scheme: ಸರ್ಕಾರದಿಂದ ಮಹಿಳೆಯರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ! ಇಲ್ಲಿದೆ ಸಂಪೂರ್ಣ ವಿವರ!