RCB Fan: ತುರ್ತು ಎಂದು ಸುಳ್ಳು ಹೇಳಿ ಆಫೀಸ್'ಗೆ ರಜೆ ಹಾಕಿ ಮ್ಯಾಚ್ ನೋಡುವಾಗ ಟಿವಿಯಲ್ಲಿ ಬಾಸ್'ಗೆ ಸಿಕ್ಕಿಬಿದ್ದ RCB ಅಭಿಮಾನಿ !!
RCB Fan: 2024ರ IPL ಲೀಗ್ ಆರಂಭವಾಗಿ ಅಭಿಮಾನಿಗಳನ್ನು ಹುರಿದುಂಬಿಸಿ, ಆಶಾಭಾವನೆ ಮೂಡಿಸಿದೆ. ನಮ್ಮ ಕರ್ನಾಟಕದಲ್ಲೂ RCB ಅಭಿಮಾನಿಗಳಿಂದ(RCB Fan) ಈ ಸಲ ಕಪ್ ನಮ್ದೇ ಅನ್ನೋ ಸೌಂಡ್ ಪ್ರತೀ ಸಲದಂತೆ ಈ ಸಲವೂ ಕೇಳಿಬರುತ್ತಿದೆ. ಅವರ ಸೋತ್ರೂ, ಗೆದ್ರೂ, ಕಪ್ ಗೆದ್ರೂ, ಗೆಲ್ಲಲಿಲ್ಲ ಅಂದ್ರೂ ನಾವೆಂದೂ RCB ಅನ್ನೋ ಸೆಂಟಿಮೆಂಟಲ್ ಡೈಲಾಗ್ ಎಂತವರನ್ನೂ ಸೆಳೆದುಬಿಡುತ್ತೆ. ಅಷ್ಟು ಹುಚ್ಚು ನಮ್ಮ ಬೆಂಗಳೂರು ಟೀಮ್ ಅಂದ್ರೆ.
ಎಂತದ್ದೇ ಕಷ್ಟ ಬಂದ್ರೂ, ಎಲ್ಲೇ ಇದ್ರೂ TV ಮೂಲಕವೇ RCB ಮ್ಯಾಚ್ ನೋಡೋದನ್ನು ಮಾತ್ರಾ ಮಿಸ್ ಮಾಡಲ್ಲ ಇನ್ನು ಡೈರೆಕ್ಟ್ ಗ್ರೌಂಡ್ ಅಲ್ಲಿ ಕೂತು ಲೈವ್ ಮ್ಯಾಚ್ ವೀಕ್ಷಿಸೋ ಚಾನ್ಸ್ ಸಿಕ್ತು ಅಂದ್ರೆ ಬುಟ್ ಬುಡ್ತೀವಾ ?ಏನೇ ಎಮಾರ್ಜೆನ್ಸಿ ಇದ್ರೂ ಗ್ರೌಂಡ್ ಗೆ ಹಾಜರ್ ಇರ್ತೀವಿ ಅಂತಾರೆ ನಮ್ಮ RCB ಫ್ಯಾನ್ಸ್!! ಅಂತೆಯೇ ಇಲ್ಲೊಬ್ಬ RCB ಮಹಿಳಾ ಫ್ಯಾನ್ ಕೂಡ ಆಫಿಸ್ ನಲ್ಲಿ ತನ್ನ ಬಾಸ್ ಗೆ ಸುಳ್ಳು ಹೇಳಿ, ಎಮಾರ್ಜೆನ್ಸಿ ಎಂದು ರಜೆ ಹಾಕಿ ಸೀದಾ ಗ್ರೌಂಡ್ ಗೆ ಬಂದು ಮ್ಯಾಚ್ ವೀಕ್ಷಿಸಿದ್ದಾಳೆ. ಆದರೆ ದುರದೃಷ್ಟವಶಾತ್ ಆಕೆ ತನ್ನ ಬಾಸ್ ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಹೌದು, ಇತ್ತೀಚೆಗೆ RCB ತಂಡದ ಕಟ್ಟಾ ಅಭಿಮಾನಿಯಾಗಿರುವ ಮಹಿಳೆಯೊಬ್ಬರು ಆದರೆ, ಆಫೀಸ್ ನಿಂದ ಹೊರಡುವಾಗ, ತಮ್ಮ ಕುಟುಂಬದಲ್ಲಿ ಎಮರ್ಜೆನ್ಸಿ ಇದೆ ಎಂದು ಬಾಸ್‌ಗೆ ಸುಳ್ಳು ಹೇಳಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ತೆರಳಿದ್ದರು. ಆದರೆ, ಲೈವ್ ವೇಳೆ ಟಿವಿ ಪರದೆಯಲ್ಲಿ ಬಾಸ್ ಕಣ್ಣಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ಸ್ವತಃ ಆ ಮಹಿಳೆಯೇ 'ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ಷ್ಮೀ ಸೂಪರ್ ಜೈಂಟ್ಸ್ ನಡುವಿನ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಹೋದಾಗ ತನ್ನ ಬಾಸ್ ತನ್ನನ್ನು ಟಿವಿಯಲ್ಲಿ ನೋಡಿದ್ದಾರೆ ಎಂದ ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.
ಟಿವಿ ಪರದೆಯಲ್ಲಿ ಸಿಕ್ಕಿಬಿದ್ದ ಬಳಿಕ ಅವರ ಬಾಸ್, ದ್ವಿವೇದಿ ಬಳಿ ಬೆಂಗಳೂರು ತಂಡದ ಮೇಲಿನ ಅಭಿಮಾನದ ಬಗ್ಗೆ ವಿಚಾರಿಸಿದರು. ಅಲ್ಲದೆ, ನಾನು ನಿನ್ನನ್ನು ಒಂದು ಸೆಕೆಂಡ್ ಮಾತ್ರ ನೋಡಿದೆ ಮತ್ತು ಗುರುತಿಸಿದೆ. ಇದು ನಿನ್ನೆಯ ಆರಂಭಿಕ ಲಾಗ್‌ಔಟ್‌ಗೆ ಕಾರಣವಾಗಿತ್ತು ಎಂದು ಕಿಚಾಯಿಸಿದ್ದಾರೆ. ಜೊತೆಗೆ ಆರ್‌ಸಿಬಿ ಆ ಪಂದ್ಯವನ್ನು ಸೋತ ಕಾರಣ ಪಂದ್ಯವನ್ನು ವೀಕ್ಷಿಸಿ ನಿರಾಶೆಗೊಳ್ಳಬೇಕಾಯಿತು ಎಂದು ಟೀಕಿಸಿದ್ದಾರೆ. ಈ ರೀತಿ ಇನ್‌ಸ್ಟಾಗ್ರಾಂನಲ್ಲಿ ಬಾಸ್ ಕಳುಹಿಸಿದ ಸಂದೇಶವನ್ನು ದ್ವಿವೇದಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Love Jihad: ಲವ್ ಜಿಹಾದ್ ಆರೋಪ; ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಯುವಕರು