RCB: ಆರ್‌ಸಿಬಿಯ ನಿರಂತರ ಸೋಲಿಗೆ ಕೊಯ್ಲಿಯೇ ನೇರ ಹೊಣೆ : ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಹಳೆಯ ಕ್ರಿಕೆಟ್ ದಿಗ್ಗಜ
RCB: ಆರ್ಸಿಬಿ 2008ರ IPL ಪಂದ್ಯಾವಳಿಯ ಆರಂಭದಿಂದಲೂ ಸಹ ಟ್ರೋಫಿ ಗೆಲ್ಲಲು ವಿಫಲವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟ್
ಆಟಗಾರರೊಬ್ಬರು ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Sumalatha Ambrish: ಚುನಾವಣೆಗೆ ನಿಲ್ಲಲ್ಲ, ಮಂಡ್ಯ ಬಿಡಲ್ಲ, ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ - ಸಂಸದೆ ಸುಮಲತಾ ಅಂಬರೀಷ್ !!
ಐಪಿಎಲ್ 2024 ರ ಲಕ್ಕೋ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಅಂಬಟಿ ರಾಯುಡು ಆರ್ ಸಿ ಬಿ ಸೋಲಿಗೆ ಕಾರಣವೇನು ಎಂಬುದರ ಕುರಿತಾಗಿ ವಿಮರ್ಶೆ ಮಾಡಿದ್ದಾರೆ.
RCBಯ ದೊಡ್ಡ ಸಮಸ್ಯೆ ಎಂದರೆ ಆಟಗಾರರಿಗೆ ಸರಿಯಾದ ಬೆಂಬಲದ ಕೊರತೆ ಇರುವುದು. ಆರ್‌ಸಿಬಿ ಆಯ್ಕೆ ಸಮಿತಿಯು ಶೇನ್ ವ್ಯಾಟ್ಸನ್, ಯುಜೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್‌ಗಳಿಗೆ ಫ್ರಾಂಚೈಸಿಯನ್ನು ತೊರೆಯಲು ಅವಕಾಶ ಮಾಡಿಕೊಟ್ಟದ್ದು ಈ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: KPSC: ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿದ KPSC : ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ
ಈ ಹಿಂದೆ ಕೊಹ್ಲಿ ವರ್ಷಗಳ ಕಾಲ RCB ಯ ನಾಯಕರಾಗಿದ್ದರು. ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸುವ ಆಯ್ಕೆ ಇದ್ದರೂ ಕೊಹ್ಲಿಯವರು ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಬೋಲರ್ಗಳನ್ನ ಆಯ್ಕೆ ಮಾಡಲಿಲ್ಲ. ತಂಡವು ಗುಣಮಟ್ಟದ ಬೌಲರ್‌ಗಳನ್ನು ಎಂದಿಗೂ ಖರೀದಿಸಲೇ ಇಲ್ಲ. ಬ್ಯಾಟಿಂಗ್ ನಲ್ಲಿಯೂ ಸಹ, ಕೊಹ್ಲಿ ಅವರು ಮಾತ್ರ ಅತಿ ಹೆಚ್ಚು ರನ್ ಗಳನ್ನು ಸಿಡಿಸಿದ್ದಾರೆ ಅವರ ಹೊರತಾಗಿ ಬೇರೆ ಇನ್ಯಾವ ಆಟಗಾರರು ಸಹ ಆ ರೀತಿಯ ಸ್ಪರ್ಧೆಯನ್ನು ನೀಡಿಯೇ ಇಲ್ಲ ಎಂದು ತಿಳಿಸಿದ್ದಾರೆ.
ದುರಂತವೆಂದರೆ ಆರ್‌ಸಿಬಿ ಕೈ ಬಿಟ್ಟ ಆಟಗಾರರು ಇತರ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ತಂಡದಲ್ಲಿ ನಾಯಕನಾಗಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಸಹ ದೂರಿದ್ದಾರೆ.