ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bank Account: ರದ್ದಾಗಲಿದೆ ಇವರೆಲ್ಲರ ಬ್ಯಾಂಕ್ ಅಕೌಂಟ್ - ದುಡ್ಡು ಪಡೆಯಲು ಬೇಗ ಇದನ್ನು ಮಾಡಿ !!

11:38 AM Jan 01, 2024 IST | ಅಶ್ವಿನಿ ಹೆಬ್ಬಾರ್
UpdateAt: 11:40 AM Jan 01, 2024 IST
Advertisement

Bank Account: ಬ್ಯಾಂಕ್ ಖಾತೆಗಳ ಕುರಿತು ಆರ್ ಬಿ ಐ ಆಗಾಗ ಕೆಲವೊಂದ ನಿಯಮಗಳನ್ನು ಹೊರಡಿಸುತ್ತಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಬೇಕು ಅದನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರಗಳನ್ನು ಕೂಡ ಅದು ಒಳಗೊಂಡಿರುತ್ತದೆ. ಕೆಲವರು ಎರಡು ಮೂರು ಖಾತೆಗಳನ್ನು ಹೊಂದಿದ್ದು ಅದರಲ್ಲಿ ಒಂದನ್ನು ಮಾತ್ರ ನಿರಂತರವಾಗಿ ಬಳಕೆ ಮಾಡುತ್ತಾರೆ. ಉಳಿದವು ಬಳಕೆಯಾಗುವುದೇ ಇಲ್ಲ. ಇದೀಗ ಅಂತವರಿಗೆ ಬಿಸಿ ಮುಟ್ಟಿಸಲು ಬ್ಯಾಂಕ್ ಮುಂದಾಗಿವೆ.

Advertisement

ಹೌದು, ಕೆಲವರು ಹಲವು ಬ್ಯಾಂಕ್ ಖಾತೆಗಳನ್ನು(Bank Account)ಹೊಂದಿದ್ದು ಒಂದು ಖಾತೆಯ ಮೂಲಕ ವ್ಯವಹರಿಸುತ್ತಿದ್ದಾರೆ ಹೀಗಾಗಿ ಇಂಥವರ ಉಳಿದ ಖಾತೆಗಳನ್ನು ರದ್ದು ಮಾಡಲು ಬ್ಯಾಂಕ್ ಗಳು ಮುಂದಾಗಿವೆ. ಹಾಗಿದ್ದರೆ ಯಾವೆಲ್ಲಾ ಖಾತೆಗಳು ರದ್ಧಾಗುತ್ತವೆ, ಮರಳಿ ಅದನ್ಧು ಆಕ್ಟಿವೇಟ್ ಮಾಡುವುದು ಹೇಗೆ? ಎಂಬುದನ್ನು ನೋಡೋಣ.

ಇದನ್ನು ಓದಿ: ISRO: ಹೊಸ ವರ್ಷದ ಮೊದಲ ದಿನವೇ ಇಸ್ರೋ ಹೊಸ ಸಾಹಸ - 'ಎಕ್ಸ್‌ಪೋಸ್ಯಾಟ್‌' ಉಡ್ಡಯನ ಯಶಸ್ವಿ

Advertisement

ಯಾವ ಖಾತೆ ರದ್ಧಾಗುತ್ತದೆ?
ಕನಿಷ್ಠ ಎರಡು ವರ್ಷಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಉಳಿತಾಯ ಖಾತೆಯಾಗಲಿ ಅಥವಾ ಚಾಲ್ತಿ ಖಾತೆಯಾಗಲಿ, ಒಂದೇ ರೀತಿಯಲ್ಲಿ ಮಾಡಲಾಗುತ್ತದೆ. ವಂಚನೆಗಳನ್ನು ತಪ್ಪಿಸಲು ಮತ್ತು ಆರ್‌ಬಿಐ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ವೆಚ್ಚವನ್ನು ಕಡಿಮೆ ಮಾಡಲು ಬ್ಯಾಂಕರ್‌ಗಳು ಈ ಕ್ರಮವನ್ನು ತೆಗೆದುಕೊಳ್ಳುತ್ತಾರೆ.

ಮರು ಸಕ್ರಿಯಗೊಳಿಸುವುದು ಹೇಗೆ?
ಗ್ರಾಹಕರು ಸಾಮಾನ್ಯವಾಗಿ 90 ದಿನಗಳ ನಿರ್ದಿಷ್ಟ ಅವಧಿಯೊಳಗೆ ವಹಿವಾಟು ನಡೆಸುವ ಮೂಲಕ ಖಾತೆಯನ್ನು ಮರುಸಕ್ರಿಯಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ವೇಳೆ ನೀವು ವಹಿವಾಟು ಮಾಡುವ ಮೂಲಕ ಅಥವಾ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸುವ ಮೂಲಕ ನಿಮ್ಮ ಖಾತೆಯನ್ನು ಮರುಸಕ್ರಿಯಗೊಳಿಸಬಹುದು. ಈ ನಿಗದಿತ ಅವಧಿಯೊಳಗೆ ಗ್ರಾಹಕರು ಖಾತೆಯನ್ನು ನವೀಕರಿಸದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಿಧಿಸುವ ಅಥವಾ ಖಾತೆಯನ್ನು ಮುಚ್ಚುವ ಹಕ್ಕನ್ನು ಬ್ಯಾಂಕ್‌ ಕಾಯ್ದಿರಿಸುತ್ತದೆ.

Advertisement
Advertisement