For the best experience, open
https://m.hosakannada.com
on your mobile browser.
Advertisement

SBIನಲ್ಲಿ ಖಾತೆ ಹೊಂದಿರುವವರು ಗಮನಿಸಿ- ಇಂದೇ ಬ್ಯಾಂಕಿಗೆ ತೆರಳಿ ಈ ಕೆಲಸ ಮಾಡಿ, RBIನಿಂದ ಬಂತು ಹೊಸ ನಿಯಮ !!

10:43 PM Dec 20, 2023 IST | ಹೊಸ ಕನ್ನಡ
UpdateAt: 10:43 PM Dec 20, 2023 IST
sbiನಲ್ಲಿ ಖಾತೆ ಹೊಂದಿರುವವರು ಗಮನಿಸಿ  ಇಂದೇ ಬ್ಯಾಂಕಿಗೆ ತೆರಳಿ ಈ ಕೆಲಸ ಮಾಡಿ  rbiನಿಂದ ಬಂತು ಹೊಸ ನಿಯಮ
Advertisement

SBI Bank: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಈ ಬ್ಯಾಂಕಿನಲ್ಲಿ ನೀವೇನದರೂ ಖಾತೆ ಹೊಂದಿದ್ದರೆ ಇಂದೇ ಬ್ಯಾಂಕಿಗೆ ತೆರಳಿ ಇದೊಂದು ಕೆಸಲ ಮಾಡಿ. ಯಾಕೆಂದರೆ RBI ಹೊಸ ನಿಯಮ ಘೋಷಿಸಿದೆ. ಮಾಡಲಿಲ್ಲವೆಂದರೆ ಇನ್ನು ಬ್ಯಾಂಕಿನಲ್ಲಿ ನೀವು ಯಾವುದೇ ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ.

Advertisement

ಹೌದು, ನೀವು SBIನಲ್ಲಿ ಖಾತೆ ಹೊಂದಿದ್ದರೆ ಡಿಸೆಂಬರ್ 31 ರೊಳಗೆ ಬ್ಯಾಂಕಿಗೆ ತೆರಳಿ ಬ್ಯಾಂಕ್ ಲಾಕರ್ ನಿಯಮಕ್ಕೆ ಸಹಿ ಹಾಕಬೇಕು. ಡಿಸೆಂಬರ್ 31 ರ ತನಕ ಕಾಯುವ ಅಗತ್ಯವೂ ಇಲ್ಲ. ಇಂದೇ ಹೋಗಿ ಮಾಡಿದರೂ ಉತ್ತಮ. ಹೀಗಾಗಿ ತಡಮಾಡದೆ ಇಂದೇ ಬ್ಯಾಂಕಿಗೆ ಭೇಟಿ ನೀಡಿ, ನಿಯಮಾನುಸಾರವಾಗಿ ಸಹಿ ಮಾಡಿ.

Advertisement

ನಿಯಮವು ಮುಖ್ಯವಾಗಿ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿರುವವರಿಗೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿರುವ ಚಿನ್ನ, ಆಸ್ತಿ ಪತ್ರ, ಹಣ ಮೊದಲಾದವುಗಳನ್ನು ನಾವು ಬ್ಯಾಂಕ್‌ನಲ್ಲಿ ಇರಿಸುತ್ತೇವೆ. ಇದು ನಮ್ಮ ಆಸ್ತಿಯ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮವಾಗಿದೆ.

ಏನಿದು ನಿಯಮ?

ಸಾಮಾನ್ಯವಾಗಿ ಬೆಲೆಬಾಳುವ ವಸ್ತುಗಳಾದ ಚಿನ್ನಾಭರಣಗಳು (Jewellery), ಆಸ್ತಿ ಪತ್ರ, (Property Documents) ಮೊದಲಾದ ವಸ್ತುಗಳನ್ನು ಸೇಫ್ ಆಗಿ ಇಡಬೇಕು ಅಂದ್ರೆ ಬ್ಯಾಂಕ್ ಲಾಕ‌ರ್ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಈ ನಿಯಮವು ಮುಖ್ಯವಾಗಿ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿರುವವರಿಗೆ ಅನ್ವಯವಾಗುತ್ತದೆ. ಆದ್ದರಿಂದ ಈಗಾಗಲೇ ತಿಳಿಸಿರುವಂತೆ ಡಿಸೆಂಬರ್ 31ರ ಒಳಗೆ ಪರಿಷ್ಕೃತ ಲಾಕ‌ರ್ ನಿಯಮಕ್ಕೆ ಲಾಕರ್ ಪಡೆದುಕೊಂಡವರು ಸಹಿ ಹಾಕಬೇಕು.

ಹಲವಾರು ವರ್ಷಗಳಿಂದ ಲಾಕರ್ ನಿಯಮ ಬದಲಾವಣೆ ಮಾಡಲಾಗಿರಲಿಲ್ಲ. ಆದರೆ ಈಗ ಪರಿಷ್ಕರಣೆ ಮಾಡಲಾಗಿದೆ. ಈ ಕಾರಣ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿರುವವರು ಕೂಡಲೇ ಅಲರ್ಟ್ ಆಗಬೇಕಾಗುತ್ತದೆ. ನೀವು ಎಸ್‌ಬಿಐನ ಗ್ರಾಹಕರಾಗಿದ್ದರೆ, ಡಿಸೆಂಬರ್ 31 ರ ಒಳಗಾಗಿ ಬ್ಯಾಂಕ್‌ನ ನಿಯಮಕ್ಕೆ ಅನುಗುಣವಾಗಿ ಸಹಕಾರ ಮಾಡಬೇಕು ಎಂದು ಆರ್‌ಬಿಐ ಮನವಿ ಮಾಡಿದೆ.

Advertisement
Advertisement
Advertisement