ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

RBI: ಬ್ಯಾಂಕ್ ಗ್ರಾಹಕರೇ ಗಮನಿಸಿ, ಈ ಬ್ಯಾಂಕ್ಗಳು ಇಂದಿನಿಂದ ಆಗಲಿವೆ ಬಂದ್: ಈ ಬ್ಯಾಂಕ್ ನಲ್ಲಿ ಖಾತೆ ಇದೆಯಾ ಚೆಕ್ ಮಾಡಿ!!

11:54 AM Jan 01, 2024 IST | ಅಶ್ವಿನಿ ಹೆಬ್ಬಾರ್
UpdateAt: 11:58 AM Jan 01, 2024 IST
Image source: Zee news
Advertisement

Reserve Bank Of India: ಆರ್ಬಿಐ(Reserve Bank Of India)ಹೊಸ ವರ್ಷದ ಮೊದಲ ದಿನವೇ ಮಹತ್ವದ ನಿರ್ಣಯ ಕೈಗೊಂಡಿದೆ.ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ(RBI)ನಾಲ್ಕು ಸಹಕಾರಿ ಬ್ಯಾಂಕ್ಗಳ ಪರವಾನಿಗೆಯನ್ನು ರದ್ದು(License Cancellation)ಮಾಡಿದೆ. ಆ ಬ್ಯಾಂಕ್ಗಳು ಯಾವುದೆಲ್ಲ ಗೊತ್ತಾ? ಈ ಬ್ಯಾಂಕಿನಲ್ಲಿ ನಿಮ್ಮ ಖಾತೆ ಇದೆಯೇ ಚೆಕ್ ಮಾಡಿ!!

Advertisement

ಆರ್ಬಿಐ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ನ ಪರವಾನಗಿಯನ್ನು ರದ್ದು ಮಾಡಿದೆ. ಇದು ಇನ್ನು ಮುಂದೆ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ. ಬ್ಯಾಂಕ್ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದ ಹಾಗೇ ಆರ್‌ಬಿಐ ಈಗಾಗಲೇ ಮಹಾರಾಷ್ಟ್ರದ ಸಹಕಾರ ಸಂಘಗಳ ಆಯುಕ್ತರು ಹಾಗೂ ರಿಜಿಸ್ಟ್ರಾರ್‌ಗೆ ಸೂಚನೆಗಳನ್ನು ನೀಡಿದೆ. ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ ಬಂಡವಾಳ ಕೊರತೆ ಎದುರಿಸಿದ ಹಿನ್ನೆಲೆ ಪರವಾನಿಗೆ ರದ್ದುಗೊಳಿಸಲಾಗಿದೆ ಎಂದು ಆರ್ಬಿಐ ಹೇಳಿದ್ದು, ಒಂದು ವೇಳೆ ಕಾರ್ಯಾಚರಣೆ ಮುಂದುವರಿಸಿದರೆ ಗ್ರಾಹಕರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಬಗ್ಗೆ ಆರ್ಬಿಐ ಮಾಹಿತಿ ನೀಡಿದೆ.

ಇದನ್ನು ಓದಿ: Bank Account: ರದ್ದಾಗಲಿದೆ ಇವರೆಲ್ಲರ ಬ್ಯಾಂಕ್ ಅಕೌಂಟ್ - ದುಡ್ಡು ಪಡೆಯಲು ಬೇಗ ಇದನ್ನು ಮಾಡಿ !!

Advertisement

ಡಿಐಸಿಜಿಸಿ ಯೋಜನೆಯಡಿ ಬ್ಯಾಂಕ್ ಗ್ರಾಹಕರು ಗರಿಷ್ಠ 5 ಲಕ್ಷ ರೂಪಾಯಿ ಪಡೆಯಬಹುದು. ಈ ವಿಮಾ ಯೋಜನೆ ಮೂಲಕ ಬ್ಯಾಂಕ್ ದಿವಾಳಿಯಾದರೆ, ಗ್ರಾಹಕರಿಗೆ ಗರಿಷ್ಠ ರೂ. 5 ಲಕ್ಷ ದೊರೆಯಲಿದೆ. ಆರ್‌ಬಿಐ ಬೋಟೆಡ್ ಪೀಪಲ್ಸ್ ಕೋ ಆಪರೇಟಿವ್ ಬ್ಯಾಂಕ್‌ನ ಪರವಾನಗಿಯನ್ನು ರದ್ದು ಮಾಡಿದೆ. ಇದನ್ನು ಬ್ಯಾಂಕಿಂಗ್ ಅಲ್ಲದ ಸಂಸ್ಥೆ ಎಂದು RBI ಗುರುತಿಸಿದೆ. ಹೀಗಾಗಿ, ಇನ್ಮುಂದೆ ಈ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ. ಬೋಟೆಡ್ ಪೀಪಲ್ಸ್ ಕೋ ಆಪರೇಟಿವ್ ಯಾವುದೇ ಠೇವಣಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಕ್ಕು ಪಡೆಯದ ಠೇವಣಿಗಳು ಮತ್ತು ಪಾವತಿಸದ ಠೇವಣಿಗಳನ್ನು ಈಗ ಸದಸ್ಯರಲ್ಲದವರು ಪಾವತಿ ಮಾಡಬಹುದು. ಇದರ ಜೊತೆಗೆ ಆರ್ಬಿಐ ಫೈಜ್ ಮರ್ಕೆಂಟೈಲ್ ಸಹಕಾರಿ ಬ್ಯಾಂಕ್‌, ಮುಸಿರಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ ಗಳ ಪರವಾನಿಗೆಯನ್ನು ರದ್ದು ಮಾಡಿದೆ.

Related News

Advertisement
Advertisement