ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rameshwaram Cafe Blast Case NIA: ಬಿಜೆಪಿ ಕಾರ್ಯಕರ್ತ ಆರೋಪಿಯಲ್ಲ, ಸಾಕ್ಷಿಯಾಗಿ ವಿಚಾರಣೆ- NIA

Rameshwaram Cafe Blast Case NIA: ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ರನ್ನು ಬಂಧಿಸಿರುವ ಕುರಿತು ವರದಿಯಾಗಿತ್ತು. ಇದೀಗ ಈ ಗೊಂಲವನ್ನು ಎನ್‌ಐಎ ಸ್ಪಷ್ಟಪಡಿಸಿದೆ.
08:01 PM Apr 05, 2024 IST | ಮಲ್ಲಿಕಾ ಪುತ್ರನ್
UpdateAt: 08:01 PM Apr 05, 2024 IST
Image Source: Business Today
Advertisement

Rameshwaram Cafe Blast Case NIA: ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ರನ್ನು ಬಂಧಿಸಿರುವ ಕುರಿತು ವರದಿಯಾಗಿತ್ತು. ಇದೀಗ ಈ ಗೊಂಲವನ್ನು ಎನ್‌ಐಎ ಸ್ಪಷ್ಟಪಡಿಸಿದೆ.

Advertisement

ಕಾಂಗ್ರೆಸ್‌ ಸಚಿವ ದಿನೇಶ್‌ ಗುಂಡೂರಾವ್‌ ಸೇರಿ ಹಲವು ಕಾಂಗ್ರೆಸ್‌ನ ಹ್ಯಾಂಡಲ್‌ಗಳು ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ಪಾತ್ರವಿದೆ ಎಂದು ಟ್ವೀಟ್‌ ಮಾಡಿದ್ದರು. ಇದೀಗ ಎನ್‌ಐಎ ಪತ್ರಿಕಾ ಪ್ರಕಟಣೆ ನೀಡಿ ಸ್ಪಷ್ಟೀಕರಣ ನೀಡಿದ್ದು, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ ಹಾಗೂ ಮೊಬೈಲ್‌ ಅಂಗಡಿ ಮಾಲೀಕನನ್ನು ಈಗಾಗಲೇ ಎನ್‌ಐಎ ವಿಚಾರಣೆ ಮಾಡಿದೆ. ಇಬ್ಬರನ್ನು ಈ ಪ್ರಕರಣದ ಸಾಕ್ಷಿಯನ್ನಾಗಿ ಮಾಡಲು ಎನ್‌ಐಎ ವಿಚಾರಣೆ ನಡೆಸಿದೆ.

Advertisement

ಸಾಯಿ ಪ್ರಸಾದ್‌ ಹಳೆಯ ಮೊಬೈಲ್‌ ಒಂದನ್ನು ಮೊಬೈಲ್‌ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮಝಮ್ಮಿಲ್‌ ಷರೀಫ್‌ಗೆ ಮಾರಾಟ ಮಾಡಿದ್ದ. ಈ ಮೊಬೈಲ್‌ನಲ್ಲಿ ಮುಜಾಮಿಲ್‌ ತಲೆ ಮರೆಸಿಕೊಂಡ ಆರೋಪಿಗಳ ಸಂಪರ್ಕ ಮಾಡಿದ್ದ ಎಂದು ಎನ್‌ಐಎ ತಿಳಿಸಿದೆ.

ಈತ ಇದೇ ಮೊಬೈಲ್‌ ಮೂಲಕ ಅಬ್ದುಲ್‌ ಮತೀನ್‌ ತಾಹ ಹಾಗೂ ಮುಸಾವೀರ್‌ ಹುಸೇನ್‌ ಜೊತೆ ಸಂಪರ್ಕ ಮಾಡಿದ್ದ. ಮುಜಾಮಿಲ್‌ ಬಂಧನದ ನಂತರ ಎನ್‌ಐಎ ಈ ಮೊಬೈಲನ್ನು ವಶಪಡಿಸಿತ್ತು. ಈ ಮೊಬೈಲ್‌ ಜಾಡು ಹುಡುಕಿಕೊಂಡು ಹೋದಾಗ ಇದು ಸಾಯಿ ಪ್ರಸಾದ್‌ ಅವರ ಮೊಬೈಲ್‌ ಎನ್ನುವ ಮಾಹಿತಿ ದೊರಕಿದ್ದು, ಇದಕ್ಕೆ ಇಬ್ಬರನ್ನೂ ಸಾಕ್ಷಿ ಮಾಡಲು ಎನ್‌ಐಎನಿಂದ ಇಬ್ಬರ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದೆ.

ತೀರ್ಥಹಳ್ಳಿಯವರೇ ಆದ ಮುಸಾವೀರ್‌ ಬಾಂಬ್‌ ಇಟ್ಟದ್ದು, ಇದಕ್ಕೆ ಪ್ಲ್ಯಾನಿಂಗ್‌ ಮಾಡಿದ್ದು ಅಬ್ದುಲ್‌ ಮತೀನ್‌ ತಾಹ ಇಬ್ಬರು. ಇವರಿಗೆ ಸಹಾಯ ಮಾಡಿದ ಮುಜಾಮಿನ್‌ ಷರೀಪ್‌ ಬಂಧನವಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದ್ದು ತೀರ್ಥಹಳ್ಳಿಯ ಮುಸ್ಸಾವಿರ್‌ ಹುಸೇನ್‌; NIA ಪತ್ರಿಕಾ ಪ್ರಕಟಣೆ ಬಿಡುಗಡೆ

Related News

Advertisement
Advertisement