For the best experience, open
https://m.hosakannada.com
on your mobile browser.
Advertisement

Vishweshwara Teertha Swamiji: ಪ್ರಾಣ ಪ್ರತಿಷ್ಠೆ ನೆರವೇರುತ್ತಿದ್ದಂತೆ ಬಡವರಿಗೂ ಮನೆ ಕಟ್ಟಿಕೊಡು ಎಂದರು ಶ್ರೀರಾಮ ದೇವರು - ಪೇಜಾವರ ಶ್ರೀ

Vishweshwara Teertha Swamiji: ಶ್ರೀರಾಮ ನನಗೇನೋ ಮನೆ ಆಯಿತು, ಊರಲ್ಲಿ ಅನೇಕ ಮಂದಿ ಬಡವರು ಮನೆ ಇಲ್ಲದೆ ಇದ್ದಾರೆ. ಅವರಿಗೇನು ಮಾಡುತ್ತೀಯಾ? ಎಂದು ನಮ್ಮಲ್ಲಿ ಕೇಳಿದರು
12:42 PM Mar 24, 2024 IST | ಸುದರ್ಶನ್
UpdateAt: 08:55 PM Mar 24, 2024 IST
vishweshwara teertha swamiji  ಪ್ರಾಣ ಪ್ರತಿಷ್ಠೆ ನೆರವೇರುತ್ತಿದ್ದಂತೆ ಬಡವರಿಗೂ ಮನೆ ಕಟ್ಟಿಕೊಡು ಎಂದರು ಶ್ರೀರಾಮ ದೇವರು   ಪೇಜಾವರ ಶ್ರೀ
Image Credit: OneIndia

Vishweshwara Teertha Swamiji: ಅಯೋಧ್ಯೆಯಲ್ಲಿ(Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿ ಎರಡು ತಿಂಗಳು ಸಂಧಿವೆ. ದಿನ ನಿತ್ಯವೂ ಲಕ್ಷಾಂತರ ಭಕ್ತರು ಫ್ರಭು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠೆಯಲ್ಲಿ ನಮ್ಮ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು(Vishweshwara Tgreetha Swamiji) ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಪ್ರಾಣ ಪ್ರತಿಷ್ಠೆಯ ಮಂಡಲೋತ್ಸವವು ಕೂಡ ನಮ್ಮ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಶ್ರೀಗಳು ಉಡುಪಿಗೆ ಮರಳಿದ್ದಾರೆ.

Advertisement

Interesting Fact: ಭರ್ತಿ 100 ವರ್ಷ ಬದುಕಬೇಕೆಂಬ ಬಯಕೆಯೇ ?! ಕೊನೆಗೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ…

ಮಂಡಲೋತ್ಸವವನ್ನು(Mandalotsava) ಯಶಸ್ವಿಯಾಗಿ ಆಚರಿಸಿ, ನೆರವೇರಿಸಿ ಉಡುಪಿಗೆ ಬಂದ ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಉಡುಪಿ ರಾಜಾಂಗಣದಲ್ಲಿ ಪುತ್ತಿಗೆ ಶ್ರಿಗಳು ಅಭಿನಂದನೆ ಕಾರ್ಯಕ್ರಮ ನಡೆಸಿ 'ಅಭಿನವ ಆಂಜನೇಯ' ಎಂಬ ಬಿರುದನ್ನೂ ನೀಡಿದ್ದಾರೆ. ಅಲ್ಲದೆ ಹಲವಾರು ಕಡೆ ಶ್ರೀಗಳಿಗೆ ಗೌರವ ಸಮರ್ಪಿಸಲಾಗಿದೆ. ಬಳಿಕ ಅವರು ದಾನಿ ಎಚ್ ಎಸ್ ಶೆಟ್ಟಿ (H S Shetty)ಅವರು 15 ಬಡ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಲು ಶಿಲಾನ್ಯಾಸ ನಡೆಸಿದರು. ಈ ವೇಳೆ ಪೇಜಾವರ ಶ್ರೀಗಳು ಗೌರವ ಸ್ವೀಕರಿಸಿ ಮಾತನಾಡಿ ಪ್ರಾಣ ಪ್ರತಿಷ್ಠೆ ವೇಳೆ ಶ್ರೀರಾಮ ದೇವರು ತಮಗೆ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸೆದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು 'ಪ್ರಾಣ ಪ್ರತಿಷ್ಠೆ ಸಮಯದಲ್ಲಿ ನಾವು ಗರ್ಭಗುಡಿಯೊಳಗೆ ರಾಮ ದೇವರ ಪಕ್ಕದಲ್ಲೇ ಇದ್ದೆವು. ಆಗ ಶ್ರೀರಾಮನು ನಮ್ಮ ಬಳಿ ನನಗೇನೋ ಮನೆ ಆಯಿತು, ಇನ್ನು ನನ್ನ ಊರಲ್ಲಿ ಅನೇಕ ಮಂದಿ ಬಡವರು ಮನೆ ಇಲ್ಲದೆ ಇದ್ದಾರೆ. ಅವರಿಗೇನು ಮಾಡುತ್ತೀಯಾ? ಎಂದು ಕೇಳಿದರು. ಆಗ ಆಯ್ತು ಪ್ರಭುಗಳೇ, ನಮ್ಮಿಂದಾಗೋ ಸಹಾಯ, ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದೆವು'

Advertisement

ಬಳಿಕ ಅನೇಕರಲ್ಲಿ ನಾವು ಈ ವಿಚಾರನ್ನು ರಾಮ ದೇವರು ಹೀಗೆ ಹೇಳಿದ್ದಾರೆ, ಏನು ಮಾಡೋಣ ಎಂದಾಗ ಹಲವು ತಮ್ಮ ಸ್ವ ಇಚ್ಚೆಯಿಂದ ಮುಂದೆ ಬಂದು ಟ್ರಸ್ಟ್ ಗೆ ದಾನ ನೀಡಿದರು. ಹೀಗಾಗಿ ಕೆಲವು ಮನೆಗಳಿಗೆ ನಾವು ಶಿಲಾನ್ಯಾಸ ನೇರವೇರಿಸಿ ಬಂದೆವು. ಇದೀಗ ದಾನಿ ಎಚ್ ಎಸ್ ಶೆಟ್ಟಿ ಅವರು 15 ಬಡ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಲು ಮುಂದಾಗಿರುವುದು ಸಂತೋಷ ನೀಡುತ್ತಿದೆ. ಈ ಕಾರ್ಯ ಇನ್ನೂ ಮುಂದುವರೆಯಲಿ ಎಂದು ಹೇಳಿದರು.

Advertisement
Advertisement