Rama Temple: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸಿಎಂಗೆ ಹೊರತುಪಡಿಸಿ ಬೇರೆ ಯಾವ ಸಿಎಂಗಳಿಗೂ ಆಹ್ವಾನಿವಿಲ್ಲ...
Rama Mandir: ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದೇಶದ ವಿವಿಧ ಮೂಲೆಗಳಿಂದ ಅನೇಕರು ಬರುತ್ತಿದ್ದಾರೆ. ಇದರಲ್ಲಿ ಕರಸೇವಕರು, ಸಾಧು ಸಂತರು, ದಲಿತ ಮುಖಂಡರು ಸೇರಿ ಅನೇಕ ಗಣ್ಯರು ಇದ್ದಾರೆ.
ಆದರೆ ಮೂಲಗಳ ಪ್ರಕಾರ ಕೇಂದ್ರ ಸರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಟ್ಟು ರಾಜ್ಯದ ಯಾವ ಮುಖ್ಯಮಂತ್ರಿಯನ್ನೂ ಆಹ್ವಾನಿಸಿಲ್ಲ ಎಂದು ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Killer CEO: ಟಿಶ್ಯೂ ಪೇಪರ್ ಮೇಲೆ ಐ ಲೈನಲರ್‌ನಲ್ಲಿ ಹತ್ಯೆಯ ಸಂಚು ಬರೆದಿದ್ದಳಾ ಹಂತಕಿ ಸುಚನಾ ಸೇಠ್???
ಕೇಂದ್ರ ಸಚಿವರು, ರಾಜ್ಯ ಸಚಿವರು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಿದಲ್ಲ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ಮುಖ್ಯ ನ್ಯಾಯಾಧೀಶರು, ಭೂ ನೌಕಾಪಡೆ ಮತ್ತು ವೈಮಾನಿಕ ಪಡೆಯ ನಿವೃತ್ತ ಮುಖ್ಯಸ್ಥರು, ಮಾಜಿ ರಾಯಭಾರಿಗಳು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು, ನೋಬೆಲ್ ಪ್ರಶಸ್ತಿ ವಿಜೇತ ಕುಟುಂಬದ ಸಹೋದರ, ಸಹೋದರಿಯರಿಗೆ ಆಹ್ವಾನ ನೀಡಲಾಗಿದೆ.
ರಾಮಜನ್ಮ ಭೂಮಿ ಚಳವಳಿ ಸಂದರ್ಭದಲ್ಲಿ ಮಡಿದ ಕರಸೇವಕರ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದೆ. ಜಗಜೀವನ್ ರಾಮ್, ಕಾನ್ಶಿ ರಾಮ್ ಕುಟುಂಬ ಬಿಆರ್ ಅಂಬೇಡ್ಕರ್ ಕುಟುಂಬ ಇವರನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.