For the best experience, open
https://m.hosakannada.com
on your mobile browser.
Advertisement

Ayodhya Ramalalla: ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯಿಂದ ರಾಮಲಲ್ಲನ ಕಣ್ಣುಗಳ ಕೆತ್ತನೆ! ಶಿಲ್ಪಿ ಅರುಣ್‌ ಕಣ್ಣುಗಳ ಕೆತ್ತನೆಗೆ ತೆಗೆದುಕೊಂಡ ಸಮಯವೆಷ್ಟು?

08:16 AM Feb 01, 2024 IST | ಹೊಸ ಕನ್ನಡ
UpdateAt: 08:41 AM Feb 01, 2024 IST
ayodhya ramalalla  ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯಿಂದ ರಾಮಲಲ್ಲನ ಕಣ್ಣುಗಳ ಕೆತ್ತನೆ  ಶಿಲ್ಪಿ ಅರುಣ್‌ ಕಣ್ಣುಗಳ ಕೆತ್ತನೆಗೆ ತೆಗೆದುಕೊಂಡ ಸಮಯವೆಷ್ಟು
Advertisement

Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುತ್ತಿರುವಂತಹ ಶ್ರೀ ರಾಮನ ಚಂದ್ರನ ಆ ಎರಡು ಕಣ್ಣುಗಳು ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿದೆ. ಕಣ್ಣಿನ ಮುಕ್ತತೆ ಮತ್ತು ದೈವತ್ವವನ್ನು ನೋಡಿದರೆ ಶ್ರೀರಾಮಚಂದ್ರನು ನಿಜವಾಗಿಯೂ ಇಲ್ಲಿ ನೆಲೆಸಿದ್ದಾನೆ ಎಂಬ ಭಾವನೆ ಹುಟ್ಟುತ್ತದೆ. ಈ ಕಣ್ಣಿನ ಬಗ್ಗೆ ಮಾತನಾಡುತ್ತ ಅವರು ಕೇವಲ 20 ನಿಮಿಷಗಳಲ್ಲಿ ಕಣ್ಣನ್ನು ಮಾಡಿದೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

Advertisement

ಇದನ್ನೂ ಓದಿ: Health Care: ಬಾದಾಮಿ ಒಳ್ಳೇದು ಅಂತ ಅತಿಯಾಗಿ ತಿನ್ನಬೇಡಿ, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ರಾಮಲಲ್ಲನ ಕಣ್ಣುಗಳ ಬಗ್ಗೆ ಏನಂದ್ರು ಶಿಲ್ಪಿ ಅರುಣ್?

Advertisement

ಅಯೋಧ್ಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಯೋಗಿರಾಜ್ ನಿರ್ಣಾಯಕವಾಗಿ ಮಾತನಾಡಿ, ನಾನು ಮೊದಲ ಎರಡು ತಿಂಗಳು ವಿಗ್ರಹದ ಮುಖವನ್ನು ಹೇಗೆ ಕೆತ್ತುವುದು ಎಂಬುದನ್ನು ಯೋಚಿಸುತ್ತಿದ್ದೆ. ಆ ಸಂದರ್ಭದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದ ಮಕ್ಕಳ ಮುಖವೇ ನನಗೆ ಮಾದರಿಯಾಯಿತು. ತಕ್ಷಣ ನಾನು ರಾಮಲಲ್ಲನ ಮುಖದ ಕೆತ್ತನೆಯನ್ನು ಆರಂಭ ಮಾಡಿದೆ ಎಂದರು.

ಇದರೊಂದಿಗೆ ಕಣ್ಣುಗಳ ಕೆತ್ತನೆಯ ಬಗ್ಗೆ ಹಲವು ವಿಧಿವಿಧಾನಗಳನ್ನು ವಿವರಿಸಿದರು. ಮೂರ್ತಿಗೆ ಕಣ್ಣುಗಳನ್ನು ಕೆತ್ತುವಾಗ ಸಂಪ್ರದಾಯವಾಗಿ ಒಂದು ಮುಹೂರ್ತವನ್ನು ನೋಡಲಾಗುತ್ತದೆ. ನನಗೆ 20 ನಿಮಿಷಗಳ ಶುಭ ಮುಹೂರ್ತ ನೀಡಿದ್ದರು. ಆ 20 ನಿಮಿಷಗಳಲ್ಲಿ ನಾನು ರಾಮನ ಕಣ್ಣನ್ನು ಕೆತ್ತಿದೆ ಎಂದರು.

ಕಣ್ಣುಗಳ ಕೆತ್ತನೆಗೆ ಮೊದಲು ಸರಯೂ ನದಿಯಲ್ಲಿ ಜಳಕ ಮಾಡಿ, ಕೆತ್ತನೆಯನ್ನು ಪ್ರಾರಂಭಿಸುವ ಮೊದಲು ಹನುಮಾನ್ ಗರ್ಹಿ ಮತ್ತು ಕನಕ ಭವನಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದೆ. ನಂತರ ಕಣ್ಣುಗಳನ್ನು ಚಿನ್ನದ ಉಳಿಯನ್ನು ಹಾಗೂ ಬೆಳ್ಳಿಯ ಸುತ್ತಿಗೆಯನ್ನು ಬಳಸಿ ಕೆತ್ತಲಾಗಿದೆ. ಇವೆರಡನ್ನೂ ಬಳಸಿಕೊಂಡು ನಾನು ಈ ಕೆಲಸ ಪೂರ್ಣಗೊಳಿಸಿದೆ ಎಂದು ದೇಶವನ್ನೇ ಆಶ್ಚರ್ಯಗೊಳಿಸಿದ ಕಣ್ಣಿನ ಕೆತ್ತನೆಯ ಬಗ್ಗೆ ವಿವರಿಸಿದರು.

ವಿಗ್ರಹಗಳಲ್ಲಿ ಕಣ್ಣುಗಳನ್ನು ಕೆತ್ತುವಾಗ ತುಂಬಾ ಭಯವಾಗುತ್ತದೆ. ಆದರೆ ರಾಮನು ಎಲ್ಲವನ್ನೂ ಸುಸೂತ್ರವಾಗಿ ನಡೆಸಿದನು ಎಂದು ಹೇಳಿದ್ದಾರೆ.

ಅಚ್ಚರಿಯ ಘಟನೆಯೊಂದನ್ನು ನೆನಪಿಸಿಕೊಂಡು ಶಿಲ್ಪಿ

ರಾಮ ಲಲ್ಲ ವಿಗ್ರಹ ಕೆತ್ತನೆಯ ಸಂದರ್ಭದಲ್ಲಿ ತಮಗಾದ ಕೆಲ ಅನುಭವಗಳನ್ನು ಶಿಲ್ಪಿ ಹಂಚಿಕೊಂಡಿದ್ದಾರೆ. "ನಾನು ಮೂರ್ತಿ ಕೆತ್ತುವಾಗ ನಿತ್ಯವೂ ಕೋತಿಯೊಂದು ರಾಮನ ದರ್ಶನಕ್ಕೆ ಬರುತಿತ್ತು ಎಂದು ಹೇಳಿ ಜನರಲ್ಲಿ ಕುತೂಹಲ ಮೂಡಿಸಿದ್ದಾರೆ. ನಿತ್ಯವೂ ಕೋತಿಯ ಸಂಜೆ 4 ರಿಂದ 5 ಗಂಟೆಯ ಸುಮಾರಿಗೆ ಬಂದು ಸ್ಟುಡಿಯೋ ಬಾಗಿಲನ್ನು ಬಡಿಯುತ್ತಿತ್ತು. ಎಂಬ ವಿಚಾರವನ್ನು ತಿಳಿಸಿದರು.

ರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ಗರ್ಭ ಗುಡಿಗೆ ಕೋತಿಯೊಂದು ಬಂದು ಕೆಲ ಕಾಲ ಇದ್ದು ಹೊರಟು ಹೋಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ನನಗೆ ಹೇಳಿದರು, ಎಂದು ಯೋಗಿರಾಜ್‌ ನೆನಪಿಸಿಕೊಂಡರು.

ವಿಗ್ರಹವು ನೋಡುಗರನ್ನು ಹಾಗೂ ಭಕ್ತಾದಿಗಳನ್ನು ತನ್ನತ್ತ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಷ್ಠಾಪನೆಯಾದ ರಾಮನ ಮೂರ್ತಿಯ ಮುಖದ ಕಾಂತೀಯ ಬದಲಾಯಿತು. ಪ್ರಾಣ ಪ್ರತಿಷ್ಠಾಪನೆಯ ನಂತರ ಗರ್ಭಗುಡಿಯಲ್ಲಿ ಕುಳಿತು ವಿಗ್ರಹವನ್ನು ನೋಡುತ್ತಿದ್ದೆ. ನಾನು ವಿಗ್ರಹವನ್ನು ಕೆಟ್ಟುವಾಗ ಇದ್ದ ಕಾಂತಿ ಹೋಗಿ ಹೊಸದೊಂದ ಕಾಂತಿ ಬಂದಿತ್ತು. ಶ್ರೀ ರಾಮನೇ ನನ್ನ ಕೈ ಯಿಂದ ಈ ಕೆಲಸವನ್ನು ಮಾಡಿಸಿ ಕೊಂಡಿದ್ದಾನೆ ಎಂದು ಅರುಣ್ ಯೋಗರಾಜ್ ಹೇಳಿದರು.

Advertisement
Advertisement
Advertisement