ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ram Mandir Event: ರಾಮಮಂದಿರ ಉದ್ಘಾಟನೆ ಹಿನ್ನೆಲೆ, ರಜೆ ಕ್ಯಾನ್ಸಲ್‌ ಮಾಡಿದ ಏಮ್ಸ್‌!!

02:27 PM Jan 21, 2024 IST | ಅಶ್ವಿನಿ ಹೆಬ್ಬಾರ್
UpdateAt: 02:27 PM Jan 21, 2024 IST
Advertisement

AIIMS Delhi: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir)ಜನವರಿ 22 ರಂದು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ (Pran Pratishtha) ನಡೆಯಲಿರುವ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ(Holiday)ಮಾಡಲಾಗಿದೆ.

Advertisement

 

ಕೇಂದ್ರ ಸರ್ಕಾರವೂ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ್ದು, ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ಏಮ್ಸ್‌ (AIIMS Delhi) ಆಸ್ಪತ್ರೆ ಕೂಡ ಸೋಮವಾರ ಮಧ್ಯಾಹ್ನ 2.30ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆದರೆ, ಇದು ಭಾರೀ ಚರ್ಚೆಗೆ ಕಾರಣವಾದ ಹಿನ್ನೆಲೆ ಏಮ್ಸ್‌ ಅರ್ಧ ದಿನ ರಜೆಯನ್ನು ಸ್ಥಗಿತಗೊಳಿಸಿದೆ.

Advertisement

 

ಏಮ್ಸ್‌ ಆಡಳಿತ ಮಂಡಳಿಯು ರಜೆ ರದ್ದುಗೊಳಿಸಿರುವ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. “ಅಪಾಯಿಂಟ್‌ಮೆಂಟ್‌ ಪಡೆದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂದು ಜನವರಿ 22ರಂದು ಹೊರರೋಗಿಗಳ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಎಲ್ಲ ಅವಶ್ಯಕ ಚಿಕಿತ್ಸೆಗಳನ್ನೂ ನೀಡಲಾಗುತ್ತದೆ. ಎಲ್ಲ ವಿಭಾಗಗಳ ಮುಖ್ಯಸ್ಥರು, ಬ್ರಾಂಚ್‌ ಆಫೀಸರ್‌ಗಳು ಹೊಸ ಆದೇಶದ ಮಾಹಿತಿಯನ್ನು ಸಿಬ್ಬಂದಿಗೆ, ವೈದ್ಯರಿಗೆ ರವಾನಿಸಬೇಕು” ಎಂದು ಏಮ್ಸ್‌ ಮನವಿ ಸಲ್ಲಿಸಿದೆ.

Related News

Advertisement
Advertisement