For the best experience, open
https://m.hosakannada.com
on your mobile browser.
Advertisement

Rajyasabha election: ರಾಜ್ಯಸಭಾ ಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !! ಕೊನೆಗೂ ವಿ. ಸೋಮಣ್ಣಗೆ ಶಾಕ್ ಕೊಟ್ಟ ಹೈಕಮಾಂಡ್

10:53 PM Feb 11, 2024 IST | ಹೊಸ ಕನ್ನಡ
UpdateAt: 10:53 PM Feb 11, 2024 IST
rajyasabha election  ರಾಜ್ಯಸಭಾ ಚುನಾವಣೆ   ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ    ಕೊನೆಗೂ ವಿ  ಸೋಮಣ್ಣಗೆ ಶಾಕ್ ಕೊಟ್ಟ ಹೈಕಮಾಂಡ್

Rajyasabha election: ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದಿಂದ ಬಾಗಲಕೋಟೆಯ ನಾರಾಯಣ ಕೃಷ್ಣಸಾ ಭಾಂಡಗೆ(Narayana Krishnasa bhanda) ಒಬ್ಬರಿಗೆ ಟಿಕೆಟ್ ನೀಡಿದ್ದು, ಆಕಾಂಕ್ಷಿ ಸೋಮಣ್ಣಗೆ(V Somanna) ಬಿಗ್ ಶಾಕ್ ನೀಡಿದೆ.

Advertisement

ಹೌದು, ರಾಜ್ಯಸಭಾ ಚುನಾವಣೆ(Rajyasabha Election)ಹಿನ್ನೆಲೆಯಲ್ಲಿ ಬಿಜೆಪಿ(BJP) ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ ಬಿಡುಗಡೆ ಮಾಡಿದೆ. ರಾಜ್ಯದ ಒಬ್ಬರಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಟಿಕೆಟ್ ಪಡೆಯಲು ಶತಾಯಗತಾಯ ಪ್ರಯತ್ನ ಮಾಡಿದ ಸೋಮಣ್ಣಗೆ ಕೊಕ್ ನೀಡಿದ್ದು, ಲೋಕಸಭಾ ಟಿಕೆಟ್(Parliament ticket)ಆದರೂ ಸಿಗುತ್ತದೆಯಾ ಎಂದು ನೋಡಬೇಕಿದೆ.

Advertisement

ಅಂದಹಾಗೆ ಒಟ್ಟು 14 ಮಂದಿಯ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಬಿಹಾರಕ್ಕೆ 2, ಛತ್ತೀಸಗಢ, ಹರಿಯಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರಾಖಂಡಕ್ಕೆ ತಲಾ 1 ಟಿಕೆಟ್‌ ನೀಡಿದೆ. ಉತ್ತರ ಪ್ರದೇಶದ 7 ಮಂದಿಯ ಹೆಸರು ಘೋಷಣೆಯಾಗಿದೆ. ಆ ಮೂಲಕ ಹೈಕಮಾಂಡ್‌ ರಾಜ್ಯ ಬಿಜೆಪಿಗೆ ರಾಜ್ಯಸಭೆ ಚುನಾವಣೆ ಶಾಕ್ ಕೊಟ್ಟಿದೆ. ಬಿಜೆಪಿ ಗೆಲ್ಲಲು ಅವಕಾಶ ಇರುವ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಯಾರು ಈ ನಾರಾಯಣ ಕೃಷ್ಣಸಾ ಭಾಂಡ?
ನಾರಾಯಣ ಕೃಷ್ಣಸಾ ಭಾಂಡಗೆ ಬಾಗಲಕೋಟೆಯ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದಾರೆ. ರಾಮ ಮಂದಿರ ಹೋರಾಟ, ಕಾಶ್ಮೀರ ತಿರಂಗ ಹೋರಾಟ ಸೇರಿ ಬಿಜೆಪಿಯ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ :
1.ಧರ್ಮಶೀಲಾ ಗುಪ್ತಾ: ಬಿಹಾರ
2.ಡಾ.ಭೀಮ್ ಸಿಂಗ್: ಬಿಹಾರ
3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
4.ಸುಭಾಷ್ ಬರಲಾ: ಹರಿಯಾಣ
5.ನಾರಾಯಾಣ ಭಾಂಡಗೆ: ಕರ್ನಾಟಕ
6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ
7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ
9.ಸಾಧನಾ ಸಿಂಗ್: ಉತ್ತರ ಪ್ರದೇಶ
10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
12.ನವೀನ್ ಜೈನ್: ಉತ್ತರ ಪ್ರದೇಶ
13.ಮಹೇಂದ್ರ ಭಟ್: ಉತ್ತರಾಖಂಡ್
14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

Advertisement
Advertisement