ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Puppy Drink Alcohol: ಪುಟ್ಟ ನಾಯಿ ಮರಿಗೆ ಮದ್ಯ ಕುಡಿಸಿದ ಯುವಕರು; ವಿಕೃತ ಕೃತ್ಯಕ್ಕೆ ಛೀಮಾರಿ!!!

10:15 AM Jan 07, 2024 IST | ಮಲ್ಲಿಕಾ ಪುತ್ರನ್
UpdateAt: 10:23 AM Jan 07, 2024 IST
Advertisement

 

Advertisement

ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಇದೀಗ ವೈರಲ್‌ ಆಗಿದೆ. ಇಲ್ಲಿ ವ್ಯಕ್ತಿಯೋರ್ವ ಸಾಕು ಪ್ರಾಣಿಗಲಿಗೆ ಮದ್ಯ ಕುಡಿಸಿ ವೀಡಿಯೋ ಮಾಡಿರುವ ಕುರಿತು ವರದಿಯಾಗಿದೆ. ಈ ಕೃತ್ಯ ಎಸಗಿದ ಯುವಕರ ಗುಂಪೊಂದರ ವಿರುದ್ಧ ಇಂಟರ್‌ನೆಟ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕ ನಾಯಿ ಮರಿಗೆ ಮದ್ಯ ಕುಡಿಸಿದ್ದು ನಿಜಕ್ಕೂ ಶೋಚನೀಯ ಎನ್ನಲಾಗಿದೆ.

ಇದನ್ನೂ ಓದಿ: ಚಳಿ ಕಾಯಿಸಲು ರೈಲಲ್ಲಿ ಬೆಂಕಿ ಹಚ್ಚಿದ ಇಬ್ಬರು ವ್ಯಕ್ತಿಗಳು; ಮುಂದೇನಾಯ್ತು?

Advertisement

ಇದೀಗ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್‌ ಹೆಲ್ಪ್‌ ಡೆಸ್ಟ್‌ ಎಕ್ಸ್‌ನಲ್ಲಿ ಸವಾಯಿ ಮಾಧೋಪುರ ಪೊಲೀಸ್‌ ಠಾಣೆಯ ಖಾತೆಯನ್ನು ಟ್ಯಾಗ್‌ ಮಾಡಿದೆ. ಸ್ಥಳೀಯ ಪೊಲೀಸ್‌ ಠಾಣೆಯು ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪೆಟ್‌ ಪಾಯಿಸನ್‌ ಹೆಲ್ಪ್‌ಲೈನ್‌ ಪ್ರಕಾರ, ನಾಯಿಗಳಿಗೆ ಮದ್ಯ ಹಾನಿಕಾರಕ. ಸಾವಿಗೆ ಇದು ಕಾರಣವಾಗಬಹುದು. ವಾಂತಿ, ಹೈಪರ್ಸಲೈವೇಶನ್‌, ನಡುಕ, ಸೆಳೆತ, ಉಸಿರಾಟದ ತೊಂದರೆಗಳು, ನಿರ್ಜಲೀಕರಣ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳು ಇಲ್ಲಿ ನಾಯಿಗಳುಗೆ ಮದ್ಯಸೇವನೆಯಿಂದ ಕಾಣಿಸಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

 

Related News

Advertisement
Advertisement