For the best experience, open
https://m.hosakannada.com
on your mobile browser.
Advertisement

Railways: ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೆ ಹೊಸ ಸೇವೆ ಲಭ್ಯ! ರೈಲ್ವೆ ಸಚಿವರ ಅಧಿಕೃತ ಘೋಷಣೆ!

Railways: ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವ ಹೊಸ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.
04:21 PM Jun 16, 2024 IST | ಕಾವ್ಯ ವಾಣಿ
UpdateAt: 04:21 PM Jun 16, 2024 IST
railways  ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೆ ಹೊಸ ಸೇವೆ ಲಭ್ಯ  ರೈಲ್ವೆ ಸಚಿವರ ಅಧಿಕೃತ ಘೋಷಣೆ
Advertisement

Railways: ಇನ್ಮೇಲೆ ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೆ ಹೊಸ ಸೇವೆ ಆರಂಭವಾಗಲಿದೆ. ಹೌದು, ಹಲವು ಕಾರಣಗಳಿಗಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಜನರು ಪ್ರಯಾಣಿಸುತ್ತಾರೆ. ಹೀಗಾಗಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವ ಹೊಸ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಮುಖ್ಯವಾಗಿ ರೈಲ್ವೇ (Railways)  ಸಚಿವರು ರೈಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಇನ್ಮುಂದೆ  ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುವ ಅಗತ್ಯವಿಲ್ಲ ಬದಲಾಗಿ ಯುಟಿಎಸ್ ಅಪ್ಲಿಕೇಶನ್ ಮೂಲಕ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿ ಟಿಕೆಟ್ ಖರೀದಿಸಬಹುದು ಎಂದಿದ್ದಾರೆ.

Advertisement

ಹೌದು, ಇನ್ಮೇಲೆ ರೈಲಿನಲ್ಲಿ ಪ್ರಯಾಣಿಸಲು ಯುಟಿಎಸ್‌ ಮೂಲಕ ಕೇವಲ ಮೂರು ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಸಾಮಾನ್ಯ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ (ಜನರಲ್ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್) ಅನ್ನು ಸುಲಭವಾಗಿ ಖರೀದಿಸಬಹುದು ಎಂದು ರೈಲ್ವೆ ಸಂಸ್ಥೆ ತಿಳಿಸಿದೆ.

ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ ವಿಧಾನ:

Advertisement

ಮೊದಲು ಪ್ಲೇ ಸ್ಟೋರ್‌ನಿಂದ ಯುಟಿಎಸ್‌ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ. ನಂತರ, ಅದನ್ನು ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಹೆಸರಿನೊಂದಿಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ನಂತರ UTS ಅಪ್ಲಿಕೇಶನ್‌ಗೆ ಲಾಗಿನ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ. ನಂತ್ರ ನೀವು ಎಲ್ಲಿಂದ ಪ್ರಯಾಣಿಸುತ್ತಿದ್ದೀರಿ ಮತ್ತು ಎಲ್ಲಿಗೆ ಪ್ರಯಾಣಿಸುತ್ತಿದ್ದೀರಿ ಎಂಬ ವಿವರಗಳನ್ನು ನಮೂದಿಸಿ. ನಂತರ ಆನ್‌ಲೈನ್ ಪಾವತಿ ಮಾಡಿದರೆ, ನಿಮ್ಮ ಟಿಕೆಟ್ ಲಭ್ಯವಾಗುತ್ತದೆ.

Advertisement
Advertisement
Advertisement