ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rahul Gandhi: ಡಿಕೆ ಶಿವಕುಮಾರ್'ನನ್ನು ಮುಖ್ಯಮಂತ್ರಿ ಮಾಡಿ, ಸಿದ್ದರಾಮಯ್ಯನನ್ನು ಕಾಂಗ್ರೆಸ್ ಅಧ್ಯಕ್ಷ ಮಾಡಿದ ರಾಹುಲ್ ಗಾಂಧಿ!!

Rahul Gandhi: ಸಿಎಂ ಸಿದ್ದರಾಮಯ್ಯನವರ(CM Siddaramaiah) ನ್ನು ಕಾಂಗ್ರೆಸ್ ಅಧ್ಯಕ್ಷ ಎಂದು ಡಿ ಕೆ ಶಿವಕುಮಾರ್(DK Shivkumar) ಅವರನ್ನು ಮುಖ್ಯಮಂತ್ರಿ ಎಂದು ಎಡವವಟ್ಟು ಮಾಡಿಕೊಂಡಿದ್ದಾರೆ.
10:39 PM Apr 17, 2024 IST | ಸುದರ್ಶನ್
UpdateAt: 10:41 PM Apr 17, 2024 IST

Rahul Gandhi: ಲೋಕಸಭಾ ಚುನಾವಣೆಯ(Parliament Election) ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಮತ ಬೇಟೆಗೆಂದು ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೋಲಾರದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಬಾಯಿ ತಪ್ಪಿ ಸಿಎಂ ಸಿದ್ದರಾಮಯ್ಯನವರ(CM Siddaramaiah) ನ್ನು ಕಾಂಗ್ರೆಸ್ ಅಧ್ಯಕ್ಷ ಎಂದು ಡಿ ಕೆ ಶಿವಕುಮಾರ್(DK Shivkumar) ಅವರನ್ನು ಮುಖ್ಯಮಂತ್ರಿ ಎಂದು ಎಡವವಟ್ಟು ಮಾಡಿಕೊಂಡಿದ್ದಾರೆ.

Advertisement

ಮಂಡ್ಯ ಹಾಗೂ ಕೋಲಾರ(Kolara) ಜಿಲ್ಲೆಯ ಚಿಕ್ಕಗೊಂಡಹಳ್ಳಿ(Chikkagonda Halli) ಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಮಂಡ್ಯದಲ್ಲಿ ಸಮಾವೇಶದ ಉದ್ಘಾಟನೆ ವೇಳೆ ಯುವ ನೇತಾರ ರಾಹುಲ್(Rahul Gandhi) ಕ್ಯಾಂಡಲ್ ಹಿಡಿದು ದೀಪ ಹಚ್ಚಲು ತಮ್ಮ ಎಡಗೈಯನ್ನು ಬಳಸಿದ್ದಾರೆ. ಆಗ ಪಕ್ಕದಲ್ಲಿದ್ದ ಸಚಿವ ಕೃಷ್ಣ ಬೈರೇಗೌಡ(Krishna Byregowda) ಅವರು ತಕ್ಷಣ ಎಚ್ಚರಿಸಿ ಬಲಗೈಯಿಂದ ದೀಪ ಹಚ್ಚಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಬಳಿಕ ಕೋಲಾರದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಅವರು ಕರ್ನಾಟಕದ ಜನತೆಗೆ ನಮಸ್ಕಾರ, ಖರ್ಗೆಜೀ, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯಜೀ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೀ ’ ಎಂದು ರಾಹುಲ್ ಗಾಂಧಿ ಹೇಳುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಎಡವಟ್ಟು ನೋಡಿ ಪ್ರತಿಪಕ್ಷಗಳು ಕಾಲೆಯುತ್ತಿವೆ.

Advertisement

ಇನ್ನು ಮುಂದುವರೆದು ಮಾತನಾಡಿದ ರಾಹುಲ್, ಇಂದಿರಾ ಗಾಂಧಿ ಜೊತೆ ಕೆಜಿಎಫ್ ಗಣಿಗೆ ಹೋಗಿದ್ದ ವಿಚಾರವನ್ನು ನೆನಪಿಸಿಕೊಂಡರು. ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿಯ ಜೊತೆಗೆ KGF ಚಿನ್ನದ ಗಣಿಗೆ ಬಂದಿದ್ದೆ. ನಾನು ಬಂದಾಗ ಗಣಿಯ ಸುರಂಗದೊಳಗೆ ಬಿಸಿಯಲ್ಲಿ ಕಾರ್ಮಿಕರು ಕೆಲಸ ಮಾಡುವುದನ್ನ ನೋಡಿದ್ದೆ. ನಾನು ನೋಡಿದ್ದಾಗ ಅಲ್ಲೊಂದು ಚಿನ್ನದ ಇಟ್ಟಿಗೆಯಿತ್ತು. ಹಿಂದೆ ನೀವು ಚಿನ್ನದ ಗಣಿಯಲ್ಲಿ ಕೆಲಸ ಮಾಡಿ ದೇಶಕ್ಕೆ ಚಿನ್ನವನ್ನು ಅಗೆದು ಕೊಡುತ್ತಿದ್ರಿ, ಈಗ ರೈತರಾಗಿ ದುಡಿಮೆ ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡುತ್ತಿದ್ದೀರಿ. ನಾನು ನನ್ನ ಅಜ್ಜಿಯಿಂದ ಬಹಳಷ್ಟು ರಾಜಕೀಯವನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

Advertisement
Advertisement
Next Article