Putturu: ಪುತ್ತೂರಿನಲ್ಲಿ ಫ್ರಿಡ್ಜ್ ಸ್ಫೋಟ; ಸುಟ್ಟುಕರಕಲಾದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಅಗ್ನಿ
Putturu: ದೈವಾರಾಧನೆ ಎನ್ನುವುದು ಕರಾವಳಿ ಜನತೆಯ ಶಕ್ತಿಯ ಮೂಲ. ಇಲ್ಲಿನ ಜನರ ನಂಬಿಕೆಯ ಪ್ರಕಾರ ಕಷ್ಟದ ಕಾಲದಲ್ಲಿ ನಮ್ಮನ್ನು ನಂಬಿದ್ದ ದೈವ ಕೈ ಬಿಡಲ್ಲ ಎಂದು ಬಲವಾದ ನಂಬಿಕೆಯ ಜೊತೆ ಅಚಲ ಭಕ್ತಿಯನ್ನು ಕೂಡಾ ಜನ ಹೊಂದಿದ್ದಾರೆ. ಜನರ ರಕ್ಷಣೆ ಮಾಡಿದ, ಕಷ್ಟದಿಂದ ನಿವಾರಣೆ ಮಾಡಿದ ಅನೇಕ ನಿದರ್ಶನಗಳು ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಅಂತಹುದೇ ಒಂದು ಘಟನೆ ಈಗ ನಡೆದಿದೆ.
Uppinangady: ಸಾಕು ನಾಯಿಯಿಂದ ತಪ್ಪಿತು ಮನೆಯೊಡತಿಯ ಆತ್ಮಹತ್ಯೆ; ಕುತೂಹಲಕಾರಿ ಘಟನೆ ವಿವರ ಇಲ್ಲಿದೆ
ಪುತ್ತೂರಿನ ಜಿಡೆಕಲ್ಲು ಕಾಲೇಜು ಬಳಿ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ ರೆಫ್ರಿಜರೇಟ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದ್ದು, ಮನೆ ಸುಟ್ಟು ಕರಕಲಾದರೂ ಕಲ್ಲುರ್ಟಿ ದೈವದ ಪೀಠಕ್ಕೆ ಮಾತ್ರ ಏನೂ ಆಗದೇ ಇರುವುದು ಅಗೋಚರ ಶಕ್ತಿಯ ಇರುವಿಕೆಯನ್ನು ತೋರಿಸಿಕೊಟ್ಟಿದೆ.
ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಕೂಡಲೇ ಕಾಲೇಜಿನ ವಿದ್ಯಾರ್ಥಿಗಳಾದ ಎಡ್ವರ್ಡ್, ವಿಖ್ಯಾತ್, ಪ್ರೀತೇಶ್ ಸೇರಿ ಸ್ಥಳೀಯರಾದ ಅಶೋಕ್ ಅವರ ಸಹಾಯದ ಮೂಲಕ ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ನಂತರ ಅಗ್ನಿಶಾಮಕದಳದ ಸಿಬ್ಬಂದಿಗಳು ಬಂದಿದ್ದು, ಬೆಂಕಿ ಸಂಪೂರ್ಣ ನಂದಿಸುವಲ್ಲಿ ಸಹಾಯ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಮನೆ ಸಂಪೂರ್ಣ ಅಗ್ನಿಗಾಹುತಿಯಾಗಿದ್ದರೂ ಕಲ್ಲುರ್ಟಿ ದೈವದ ಮಂಚಕ್ಕೆ ಏನೂ ಆಗದೇ ಉಳಿದುಕೊಂಡಿದೆ. ಈ ಮೂಲಕ ತುಳುನಾಡಿದ ದೈವ ಕಲ್ಲುರ್ಟಿ ತನ್ನ ಕಾರ್ಣಿಕವನ್ನು ತೋರಿಸಿದೆ.
Karkala: ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ನಾಯಿ; ಎರಡು ತಿಂಗಳ ಹಿಂದಷ್ಟೇ ಮದುವೆಯಾದ ಯುವತಿ ಸಾವು