Putturu: ಪುತ್ತೂರು ವ್ಯಕ್ತಿಯಿಂದ ಅಯೋಧ್ಯೆಯಲ್ಲಿ ಸೋಲುಂಡ ಬಿಜೆಪಿ ಅಭ್ಯರ್ಥಿಗೆ ಹಿಗ್ಗಾ ಮುಗ್ಗಾ ಕ್ಲಾಸ್ - ಆಡಿಯೋ ವೈರಲ್ !!
Putturu: ಬಿಜೆಪಿ ಭದ್ರಕೋಟೆ ಉತ್ತರ ಪ್ರದೇಶದ (Uttar Pradesh) ಹೈವೋಲ್ಟೇಜ್ ಕ್ಷೇತ್ರವಾದ ಅಯೋಧ್ಯೆಯ (Ayodhya) ಫೈಝಾಬಾದ ಸೋಲುಂಡು ಬಿಜೆಪಿ ಅಭ್ಯರ್ಥಿಗೆ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕುರಿತು ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಬ್ಯಾಂಕ್ ಉದ್ಯೋಗ ಪಡೆಯಲು ಸುವರ್ಣ ಅವಕಾಶ!9,995 ಐಬಿಪಿಎಸ್ ಆರ್‌ಆರ್‌ಬಿ ಬ್ಯಾಂಕ್ ಹುದ್ದೆಗೆ ಅರ್ಜಿ ಆಹ್ವಾನ!
ಹೌದು, 3ನೇ ಬಾರಿಗೂ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ(BJP) 240 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿನ ಹಿನ್ನಡೆ ಬಿಜೆಪಿಗೆ ಭಾರಿ ಹೊಡೆತ ನೀಡಿದೆ. ಇದರ ನಡುವೆ ಅಚ್ಚರಿ ಏನಂದ್ರೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ(Rama Mandira) ನಿರ್ಮಿಸಿ ಶತಶತಮಾನಗಳ ಕನಸನ್ನು ಬಿಜೆಪಿ ಈಡೇರಿಸಿದರೂ, ಅಯೋಧ್ಯೆಯ ಫೈಝಾಬಾದ್(Faizabad) ಲೋಕಸಭಾ ಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹೀನಾಯವಾಗಿ ಸೋತಿದ್ದಾರೆ. ಇದರ ಬೆನ್ನಲ್ಲೇ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪುತ್ತೂರಿನ ಜಗದೀಶ್ ರೈ(Jagadush Rai) ಎಂಬುವವರು ಲಲ್ಲುಸಿಂಗ್ ಗೆ ಕರೆಮಾಡಿ ಸಖತ್ತಾಗಿ ತರಾತೆಗೆ ತೆಗೆದುಕೊಂಡಿದ್ದಾರೆ. ಹಾಗಿದ್ರೆ ಆ ವ್ಯಕ್ತಿ ಲಲ್ಲುಸಿಂಗ್ ಹೇಗೆಲ್ಲಾ ಜಾಡಿಸಿದ್ದಾರೆ ಎಂದು ನೋಡೋಣ.
ಪುತ್ತೂರಿನ ಜಗದೀಶ್ ರೈ ಎಂದು ಹೇಳಿಕೊಂಡಿರುವ ವ್ಯಕ್ತಿ ಲಲ್ಲುಸಿಂಗ್ ಅವರಿಗೆ ಕರೆ ಮಾಡಿ 'ಲೋಕಸಭಾ ಸದಸ್ಯರಾಗಿ ನೀವು ಒಂದು ಬಾರಿಯೂ ನಿಮ್ಮ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಯೋಗಿ ಅವರು ನಿಮ್ಮನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆದಿದ್ದರು. ಆದರೂ ನಿಮಗೆ ಟಿಕೆಟ್ ನೀಡಲಾಗಿತ್ತು. ಅಯೋಧ್ಯೆಯ ಜನ ನಿಮ್ಮನ್ನು ತಿರಸ್ಕರಿಸಿದ್ದರೂ ಮತ್ತೆ ಮತ್ತೆ ಯಾಕೆ ಚುನಾವಣೆಗೆ ಸ್ಪರ್ಧಿಸಿದಿರಿ. ನೀವು ಸೋಲಲು ಏನು ಕಾರಣ ಎಂದು ತಿಳಿಸುವಿರಾ? ಎಂದು ನಯವಾಗಿ ಜಾಡಿಸಿದ್ದಾರೆ.
ಅಲ್ಲದೆ 'ಅಯೋಧ್ಯೆಯಲ್ಲಿ ನಿಮ್ಮ ಸೋಲಿನಿಂದಾಗಿ ನಮ್ಮಂಥ ಬಿಜೆಪಿ ಕಾರ್ಯಕರ್ತರಿಗೆ ಅವಮಾನವಾಗಿದೆ. ರಾಮಮಂದಿರ ಇರುವ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ ಎನ್ನುವ ಕುಹಕ ಕೇಳುವಂತಾಗಿದೆ. ಇದರಿಂದಾಗಿ ಪ್ರಧಾನಿ ಮೋದಿಜಿಯವರ ವರ್ಚಸ್ಸಿಗೂ ಧಕ್ಕೆಯಾಗಿದೆ ಎಂದು ಅಬ್ಬರಿಸಿದ್ದಾರೆ. ಇವರಿಬ್ಬರ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Mangaluru: ಯಾರೋ ರಾಜೀನಾಮೆ ಕೇಳಿದ್ರು ಅಂತ ಕೊಡೋಕ್ಕಾಗಲ್ಲ- ಹರೀಶ್ ಕುಮಾರ್