ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Puttur: ಗಂಡನ ಮನೆಯಲ್ಲಿ ತಾಳಿ ಬಿಚ್ಚಿಟ್ಟು ಮಹಿಳೆ ನಾಪತ್ತೆ! ಪುತ್ತೂರು ಪೊಲೀಸ್ ಠಾಣೆಗೆ ದೂರು ದಾಖಲು!

Puttur: ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವಿವಾಹಿತೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ.
04:27 PM Jun 15, 2024 IST | ಕಾವ್ಯ ವಾಣಿ
UpdateAt: 04:27 PM Jun 15, 2024 IST
Advertisement

Puttur: ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವಿವಾಹಿತೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಕಾಣೆಯಾದ ಮಹಿಳೆ ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಲಗುಡ್ಡೆ, ಭಕ್ತಕೋಡಿಯ ಹರೀಶ (28) ರವರ ಪತ್ನಿಯಾದ ದೀಪಿಕಾ(23) ಎಂಬವರಾಗಿದ್ದಾರೆ.

Advertisement

ಈಗಾಗಲೇ ಪುತ್ತೂರು (Puttur)  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪತಿ ಹರೀಶ್‌ರವರು ನೀಡಿದ ದೂರಿನಲ್ಲಿ ತನ್ನ ಪತ್ನಿ ತಾನು ಕಟ್ಟಿದ ತಾಳಿಯನ್ನು ಮನೆಯಲ್ಲಿ ಬಿಚ್ಚಿಟ್ಟು ಹೇಳದೆ ಕೇಳದೆ ಜೂ. 13ರಂದು ಬೆಳಿಗ್ಗೆ 05 ಗಂಟೆಗೆ ಮನೆಯಿಂದ ಹೋಗಿದ್ದು ಹಿಂದಿರುಗಿ ಬಂದಿರುವುದಿಲ್ಲ. ಮತ್ತು ಯಾವುದೇ ದೂರವಾಣಿ ಸಂಪರ್ಕ ಮಾಡಲಿಲ್ಲ. ಅದಲ್ಲದೆ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಇಲ್ಲಿವರೆಗೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement