ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Puttur: ಎರಡನೇ ಹಂತದ ಲೋಕಸಭಾ ಚುನಾವಣೆ; ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಶಾಸಕ ಅಶೋಕ್‌ ಕುಮಾರ್ ರೈ ನೇಮಕ

Puttur: ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಪುತ್ತೂರು ಶಾಸಕರಾದ ಅಶೋಕ್‌ ರೈ ಅವರನ್ನು ನೇಮಕ
11:21 AM Apr 29, 2024 IST | ಸುದರ್ಶನ್
UpdateAt: 11:30 AM Apr 29, 2024 IST

Puttur: ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಪುತ್ತೂರು ಶಾಸಕರಾದ ಅಶೋಕ್‌ ರೈ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ.

Advertisement

ಇದನ್ನೂ ಓದಿ:  IPL-2024: ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ : ರನ್ ಚೆಸ್ ನಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ ಎರಡನೇ ಆಟಗಾರ

ಆಡಳಿತಾರೂಢ ಕಾಂಗ್ರೆಸ್ ದಕ್ಷಿಣ ಕರ್ನಾಟಕದ ತನ್ನ 49 ಶಾಸಕರನ್ನು 2ನೇ ಹಂತದಲ್ಲಿ ಉತ್ತರದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಕೆಲಸಕ್ಕೆ ನಿಯೋಜನೆ ಮಾಡಿದೆ.

Advertisement

ಹಿರಿಯ ಸಚಿವರಿಗೆ ಲೋಕಸಭೆ ಕ್ಷೇತ್ರವಾರು ಹೆಚ್ಚುವರಿ ಉಸ್ತುವಾರಿ ನೀಡಿದ ಬೆನ್ನಲ್ಲೇ, ಪಕ್ಷದ ಶಾಸಕರನ್ನೂ ವಿಧಾನಸಭಾ ಕ್ಷೇತ್ರವಾರು ವೀಕ್ಷಕರಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ:  IPL-2024: ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಭಟಿಸಿದ RCB : ವಿಲ್ ಜ್ಯಾಕ್ಸ್ ವರ್ಲ್ವಿಂಡ್ ಶತಕ : RCBಗೆ 9 ವಿಕೆಟ್ಗಳ ಭರ್ಜರಿ ಜಯ

ಮೊದಲ ಹಂತದ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ವ್ಯಾಪ್ತಿಯ 49 ಶಾಸಕರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಜವಾಬ್ದಾರಿಗಳನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಹಂಚಿಕೆ ಮಾಡಿದ್ದಾರೆ. ಸಂಬಂಧಿತ ಕ್ಷೇತ್ರ ವ್ಯಾಪ್ತಿಯಲ್ಲಿ ಉಳಿದು ಸ್ಥಳೀಯ ನಾಯಕರೊಂದಿಗೆ ಸಮನ್ವಯ ಕಾಯ್ದುಕೊಂಡು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಅವರು ಸೂಚಿಸಿದ್ದಾರೆ.

Advertisement
Advertisement
Next Article