Puttur: ಉದ್ಯೋಗ ನೀಡುವುದಾಗಿ ಯುವತಿಯಿಂದ 2 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ : ದೂರು ದಾಖಲು
10:39 AM Jan 25, 2024 IST
|
Praveen Chennavara
UpdateAt: 10:52 AM Jan 25, 2024 IST
Advertisement
ಪುತ್ತೂರು: ಉದ್ಯೋಗ ನೀಡುವುದಾಗಿ ಆರ್ಯಾಪು ಗ್ರಾಮದ ಒಳತ್ತಡ್ಕ ದ ಯುವತಿಯೊಬ್ಬರಿಂದ 7 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿರುವ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ.
Advertisement
ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೊಳಗಾಗಿದ್ದು. ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 2023 ರ ಜೂ. 12 ರಂದು ಪತ್ರಿಕೆಯೊಂದರಲ್ಲಿ ಪರಿಶೀಲಿಸಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆಮಾಡಿ ವಿಚಾರಿಸಿ, ಬಳಿಕ ಅವರುಗಳು ಸೂಚಿಸಿದಂತೆ 2023 ರ ಜೂ.28 ರಿಂದ 2024 ರ ಜ.12 ರ ತನಕ ಹಂತ ಹಂತವಾಗಿ ಅಪರಿಚಿತ ಆರೋಪಿ ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 2,25,001 ರೂ ಹಣವನ್ನು ಪಾವತಿ ಮಾಡಿದ್ದು, ಈವರೆಗೂ ನಿಶ್ಮಿತಾ ಅವರಿಗೆ ಉದ್ಯೋಗವನ್ನೂ ನೀಡದೇ, ಹಣವನ್ನು ಮೋಸದಿಂದ ಪಡೆದು ವಂಚಿಸಿರುತ್ತಾರೆ. ಈ ಕುರಿತು ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 18-2024 ಕಲಂ:417, 420 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Advertisement
Advertisement