For the best experience, open
https://m.hosakannada.com
on your mobile browser.
Advertisement

Puttur: ಸೋಮವಾರ ಸಂತೆ ರದ್ದು ಸ್ಪಷ್ಟನೆ: ಶಾಸಕ ಅಶೋಕ್ ರೈ

Puttur: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಿ ಅಧಿಕಾರಿಗಳು ಆದೇಶ ಮಾಡಿದ್ದು ಈ ಆದೇಶವನ್ನು ರದ್ದು ಮಾಡಿ ಸಂತೆ ಎಂದಿನಂತೆ ಅದೇ ಜಾಗದಲ್ಲಿ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ (Ashok Rai) ಸ್ಪಷ್ಟನೆ ನೀಡಿದ್ದಾರೆ.
12:23 PM Jun 02, 2024 IST | ಸುದರ್ಶನ್
UpdateAt: 12:23 PM Jun 02, 2024 IST
puttur  ಸೋಮವಾರ ಸಂತೆ ರದ್ದು ಸ್ಪಷ್ಟನೆ  ಶಾಸಕ ಅಶೋಕ್ ರೈ
Advertisement

Puttur: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಿ ಅಧಿಕಾರಿಗಳು ಆದೇಶ ಮಾಡಿದ್ದು ಈ ಆದೇಶವನ್ನು ರದ್ದು ಮಾಡಿ ಸಂತೆ ಎಂದಿನಂತೆ ಅದೇ ಜಾಗದಲ್ಲಿ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ (Ashok Rai) ಸ್ಪಷ್ಟನೆ ನೀಡಿದ್ದಾರೆ.

Advertisement

ಹೌದು, ಜೂ. 3 ರಂದು ನಡೆಯುವ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರಿನ (Puttur) ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಿ ಅಧಿಕಾರಿಗಳು ಆದೇಶ ಮಾಡಿದ್ದರು.
ಇದೀಗ ಈ ಆದೇಶವನ್ನು ಶಾಸಕರಾದ ಅಶೋಕ್ ರೈ ರದ್ದು ಮಾಡಿ ಸಂತೆ ಎಂದಿನಂತೆ ಅದೇ ಜಾಗದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಿರುವ ಬಗ್ಗೆ ವ್ಯಾಪಾರಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದರು. ಒಂದು ವೇಳೆ ವಾರದ ಸಂತೆ ರದ್ದು ಮಾಡಿದಲ್ಲಿ ಅನೇಕ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡ ಶಾಸಕರು ಪುತ್ತೂರು ಸಹಾಯಕ ಕಮಿಷನ‌ರ್ ಜೊತೆ ಮಾತುಕತೆ ನಡೆಸಿ ವಾರದ ಸಂತೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬೇಡಿ. ಚುನಾವಣೆ ನೆಪದಲ್ಲಿ ಸಂತೆ ರದ್ದು ಮಾಡಬೇಡಿ. ಸಂತೆ ವ್ಯಾಪಾರವನ್ನೇ ನಂಬಿ ಬದುಕು ಸಾಗಿಸುವ ಅನೇಕ ಕುಟುಂಬಗಳಿವೆ ಅವರಿಗೆ ತೊಂದರೆಯಾಗಬಾರದು ಎಂದು ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್! 

ಅದಲ್ಲದೆ ಸಂತೆಯಿಂದ ತರಕಾರಿ ಹಾಗೂ ಇತರ ಸಾಮಾಗ್ರಿ ಇತರ ಸಾಮಾಗ್ರಿ ಕೊಂಡೊಯ್ಯುವವರೂ ಇದ್ದಾರೆ ಅವರಿಗೂ ಸಂತೆ ಇಲ್ಲದೆ ತೊಂದರೆಯಾಗಬಹುದು ಈ ಕಾರಣಕ್ಕೆ ಸಂತೆಯನ್ನು ಅದೇ ಸ್ಥಳದಲ್ಲಿ ನಡೆಸುವಂತೆ ಮತ್ತು ರದ್ದು ಆದೇಶವನ್ನು ಹಿಂಪಡೆಯುವಂತೆಯೂ ಶಾಸಕರು ಸೂಚನೆ ನೀಡಿದ್ದಾರೆ.

Advertisement
Advertisement
Advertisement