ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Puri Jagannath Temple: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥನ ‘ರತ್ನ ಭಂಡಾರ’ದ ಬಾಗಿಲು - ಅಬ್ಬಾಬ್ಬಾ.. ಏನೇನಿತ್ತು ಗೊತ್ತಾ ಅದ್ರಲ್ಲಿ?

Puri Jagannath Temple: ವಿಶ್ವವಿಖ್ಯಾತ ಪುರಿ ಜಗನ್ನಾಥ ಯಾತ್ರೆಯ ಬಗ್ಗೆ ಎಲ್ಲರಿಗೂ ಗೊತ್ತು. ಅಲ್ಲಿನ ವಿಶೇಷತೆಗಳ ಬಗ್ಗೆ, ಅಚ್ಚರಿ ಬಗ್ಗೆ ಈಗೀಗ ಎಲ್ಲರಿಗೂ ತಿಳಿಯುತ್ತಿದೆ.
07:53 AM Jul 15, 2024 IST | ಸುದರ್ಶನ್
UpdateAt: 07:53 AM Jul 15, 2024 IST
Advertisement

Puri Jagannath Temple: ವಿಶ್ವವಿಖ್ಯಾತ ಪುರಿ ಜಗನ್ನಾಥ ಯಾತ್ರೆಯ ಬಗ್ಗೆ ಎಲ್ಲರಿಗೂ ಗೊತ್ತು. ಅಲ್ಲಿನ ವಿಶೇಷತೆಗಳ ಬಗ್ಗೆ, ಅಚ್ಚರಿ ಬಗ್ಗೆ ಈಗೀಗ ಎಲ್ಲರಿಗೂ ತಿಳಿಯುತ್ತಿದೆ. ಆದರೀಗ ಇದರೆಲ್ಲದರ ನಡುವೆ ಬರೋಬ್ಬರಿ 46 ವರ್ಷಗಳ ನಂತರ, ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ರತ್ನ ಭಂಡಾರ ಬಾಗಿಲನ್ನು ತೆರೆಯಲಾಗಿದೆ.

Advertisement

Dairymilk Chocolates: ಚಪ್ಪರಿಸಿ ಡೈರಿ ಮಿಲ್ಕ್​ ಚಾಕೋಲೇಟ್​ ತಿನ್ನೋರು ಇಲ್ನೋಡಿ!

Advertisement

ಹೌದು, ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ(Puri Kagannath Temple) ರತ್ನ ಭಂಡಾರ ಬಾಗಿಲ ಒಳಗಿನ ಕೋಣೆ (ಭಿತರ್ ಭಂಡಾರ್) ಆವಿಷ್ಕಾರ ಮತ್ತು ಸಂರಕ್ಷಣೆಗಾಗಿ ನಿನ್ನೆ (ಜು 14 ಭಾನುವಾರ) ತೆರೆಯಲಾಗಿದೆ. ಭಾನುವಾರ ಮಧ್ಯಾಹ್ನ 1:28 ರತ್ನ ಭಂಡಾರ ತೆರೆಯಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಹೀಗಾಗಿ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳಲಿವೆ.

ಒರಿಸ್ಸಾ ಹೈಕೋರ್ಟ್‌ನ ನ್ಯಾಯಮೂರ್ತಿ ಬಿಸ್ವನಾಥ್ ರಾತ್(High Court Judge Biswanath Rat)ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದು, ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಸ್ಥಾಪಿಸಲಾಯಿತು. ಜಗನ್ನಾಥ ದೇವಸ್ಥಾನದ ಆಡಳಿತವು ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.

ಭಂಢಾರದಲ್ಲಿ ಏನೇನಿದೆ?
12ನೇ ಶತಮಾನದ ಪುರಿ ಜಗನ್ನಾಥ ದೇವಾಲಯದಲ್ಲಿರುವ ರತ್ನ ಭಂಡಾರವು (Ratna Bhandar) ಆಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಒಳಗೊಂಡಿದೆ. ಕೇರಳದ ಅನಂತ ಪದ್ಮನಾಭನ(Ananatha Padmanabha) ಸಂಪತ್ತಿನ ರೀತಿಯಲ್ಲೇ ಪುರಿ ಜಗನ್ನಾಥ ದೇವಸ್ಥಾನದ ಸಂಪತ್ತು ಇದೆ ಎಂಬ ಮಾತಿದೆ. ಸೀಕ್ರೆಟ್ ಕೋಣೆಯಲ್ಲಿ ಸಾವಿರಾರು ಕೆಜಿ ಚಿನ್ನಾಭರಣ, ಮುತ್ತು, ರತ್ನ, ಹವಳ ಮತ್ತು ಬೆಳ್ಳಿ ಸಾಮಗ್ರಿಗಳಿವೆ ಎನ್ನಲಾಗಿದೆ.

ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಬಳಸುವ ಆಭರಣಗಳು ಹೊರ ಭಂಡಾರದಲ್ಲಿದ್ದು ಒಳ ರತ್ನ ಭಂಡಾರದ 3 ಚೇಂಬರ್‌ಗಳಲ್ಲಿ 15 ಮರದ ಪೆಟ್ಟಿಗೆಗಳ ತುಂಬ ಬರೀ ಬೆಳ್ಳಿ, ಬಂಗಾರ, ರೂಬಿ, ವಜ್ರ ಇತ್ಯಾದಿಗಳ ಅಪರೂಪದ ವಸ್ತುಗಳೇ ತುಂಬಿವೆ ಎನ್ನಲಾಗಿದೆ. ಪುರಿ ರಾಜರು, ಒಡಿಶಾವನ್ನು ಆಳಿದ ರಾಜಮನೆತನಗಳು, ನೇಪಾಲದ ದೊರೆಗಳು ಶ್ರೀ ಜಗನ್ನಾಥನ ಭಕ್ತರಾಗಿದ್ದು ಅವರು ದೇವರಿಗೆ, ದೇವಸ್ಥಾನಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನು ಇಲ್ಲಿಡಲಾಗಿದೆ ಎನ್ನಲಾಗಿದೆ

ದಾಖಲೆಗಳ ಪ್ರಕಾರ, ದೇವಾಲಯದ ರತ್ನದ ಭಂಡಾರದಲ್ಲಿ ಒಟ್ಟು 454 ಚಿನ್ನದ ವಸ್ತುಗಳಿದ್ದು, ಅದರ ಒಟ್ಟು ತೂಕ 12,838 ಗ್ರಾಂ. ಕಿಲೋಗ್ರಾಂ ರೂಪದಲ್ಲಿ ಇದು ಸರಿಸುಮಾರು 128.38 ಕೆ.ಜಿ. ಅದೇ ಸಮಯದಲ್ಲಿ, 293 ಬೆಳ್ಳಿ ವಸ್ತುಗಳು ಇವೆ, ಅದರ ತೂಕ 22,153 ಭಾರಿ ಅಂದರೆ 221.53 ಕೆಜಿ.

ಅಂದಹಾಗೆ ನಕಲಿ ಕೀ ಬಳಸಿ ರತ್ನ ಭಂಡಾರ ತೆರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುರಿಯ ಜಗನ್ನಾಥ ದೇವಾಲಯದ ರತ್ನದ ಭಂಡಾರದಲ್ಲಿ ಸಂಗ್ರಹವಾಗಿರುವ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ದಾಖಲೆಯನ್ನು ತಯಾರಿಸಲು ಒರಿಸ್ಸಾ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿಶ್ವನಾಥ್ ರಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಅದರ ಮೂಲಕವೇ ಎಲ್ಲಾ ವಿಧಾನಗಳು ನಡೆಯಲಿವೆ.

ಎಲ್ಲವನ್ನೂ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ ನಡೆಸಲಾಗುತ್ತಿದೆ. ಉನ್ನತ ಮಟ್ಟದ ಸಮಿತಿ ಮತ್ತು ಅದರ ಸದಸ್ಯರು ಹೊರಬಂದ ನಂತರ ವಿವರಗಳನ್ನು ನೀಡುತ್ತಾರೆ ಎಂದು ಪುರಿ ಎಸ್‌ಪಿ ಪಿನಾಕ್ ಮಿಶ್ರಾ ತಿಳಿಸಿದ್ದಾರೆ. ಅಲ್ಲದೆ ಪುರಿ ಜಿಲ್ಲಾಡಳಿತದ ಬಳಿಯಿದ್ದ ನಕಲಿ ಕೀ ಬಳಸಿ ಖಜಾನೆ ತೆರೆಯಲಾಗಿದೆ. ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ವೈದ್ಯಕೀಯ ತಂಡ ಮತ್ತು ಉರಗ ತಜ್ಞರ ತಂಡದ ಸದಸ್ಯರು ಸಹ ಸ್ಟ್ಯಾಂಡ್‌ಬೈನಲ್ಲಿ ಇದ್ದರು ಎಂದು ತಿಳಿದುಬಂದಿದೆ.

KSRTC ಪ್ರಯಾಣಿಕರಿಗೆ ಊಹಿಸದ ಅಘಾತ, ಬಸ್ ಟಿಕೆಟ್ ದರ 20% ಹೆಚ್ಚಳ !!

Related News

Advertisement
Advertisement