For the best experience, open
https://m.hosakannada.com
on your mobile browser.
Advertisement

Porsche Car Accident Case: ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನಿರ್ನಾಮ!

Porsche Car Accident Case: ವೇದಾಂತ್​ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್​ಗೆ ಸೇರಿರುವ ಮಹಾಬಲೇಶ್ವರದಲ್ಲಿರುವ ರೆಸಾರ್ಟ್‌ನ ಅಕ್ರಮ ಭಾಗಗಳನ್ನು ನೆಲಸಮಗೊಳಿಸಿದೆ.
10:42 AM Jun 09, 2024 IST | ಸುದರ್ಶನ್
UpdateAt: 10:42 AM Jun 09, 2024 IST
porsche car accident case  ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನಿರ್ನಾಮ
Advertisement

Porsche Car Accident Case: ಕೆಲವು ವಾರದ ಹಿಂದೆ ಮೇ 19ರಂದು ಪುಣೆಯ ಕಲ್ಯಾಣನಗರದಲ್ಲಿ ಕುಡಿದ ಮತ್ತಿನಲ್ಲಿದ್ದ 17 ವರ್ಷದ ವೇದಾಂತ್ ಅಗರ್ವಾಲ್​ ಐಷಾರಾಮಿ ಪೋರ್ಷೆ ಕಾರನ್ನು ಬೈಕ್​ಗೆ ಭೀಕರವಾಗಿ ಗುದ್ದಿದ (Porsche Car Accident) ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಬಳಿಕ ವೇದಾಂತ್​ನನ್ನು ಪೊಲೀಸರು ಬಂಧಿಸಿದ್ದರು, ಇದೀಗ ವೇದಾಂತ್​ ತಂದೆ ವಿಶಾಲ್ ಅಗರ್ವಾಲ್​ರನ್ನು ಕೂಡ ಬಂಧಿಸಲಾಗಿದೆ.

Advertisement

JEE Advanced ಫಲಿತಾಂಶ 2024 ಪ್ರಕಟ: ದಾಖಲೆ 48,248 ಅಭ್ಯರ್ಥಿಗಳು ಅರ್ಹತೆ, ದೆಹಲಿಯ ವೇದ್ ಲಹೋಟಿ ಟಾಪರ್ !

ಇನ್ನು ಕಾರಿನ ಚಾಲಕನನ್ನು ಬೆದರಿಸಿ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ವೇದಾಂತ್​ ಅಜ್ಜನನ್ನು ಕೂಡ ಬಂಧಿಸಲಾಗಿದೆ. ಹಾಗೆಯೇ ವೇದಾಂತ್ ರಕ್ತದ ಮಾದರಿಯನ್ನು ಬದಲಾಯಿಸುವಲ್ಲಿ ಕೈವಾಡವಿದ್ದ ವೇದಾಂತ್​ ತಾಯಿಯನ್ನು ಕೂಡ ಬಂಧಿಸಲಾಗಿದೆ.

Advertisement

ಈ ಅಪಘಾತ ಪರಿಣಾಮ ಇದೀಗ ಮತ್ತೆ ಹೊಸ ರೂಪ ತಾಳಿದೆ. ಹೌದು, ಕಾರು ಅಪಘಾತದ (Car Accident) ಆರೋಪಿಯಾಗಿರುವ ವೇದಾಂತ್​ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್​ಗೆ ಸೇರಿರುವ ಮಹಾಬಲೇಶ್ವರದಲ್ಲಿರುವ ರೆಸಾರ್ಟ್‌ನ ಅಕ್ರಮ ಭಾಗಗಳನ್ನು ನೆಲಸಮಗೊಳಿಸಿದೆ.

ಮಹಾಬಲೇಶ್ವರದ ಮಲ್ಕಾಮ್ ಪೇಠ್ ಪ್ರದೇಶದಲ್ಲಿನ ಮಹಾಬಲೇಶ್ವರ ಪಾರ್ಸಿ ಜಿಮ್ಖಾನಾ (ಎಂಪಿಜಿ) ಕ್ಲಬ್‌ನಲ್ಲಿ ಅನಧಿಕೃತ ನಿರ್ಮಾಣವನ್ನು ಜಿಲ್ಲಾಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾ ಕಲೆಕ್ಟರ್ ಜಿತೇಂದ್ರ ದುಡಿ ಅವರಿಗೆ ರೆಸಾರ್ಟ್ ಅಕ್ರಮವಾಗಿರುವುದು ಕಂಡುಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ಆದೇಶದಂತೆ ರೆಸಾರ್ಟ್ ನ್ನು ನೆಲಸಮಗೊಳಿಸಲಾಗಿದೆ.

ಇಂದು ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ; ಉಡುಪಿ ಪೇಜಾವರಶ್ರೀಗೆ ಆಹ್ವಾನ

Advertisement
Advertisement
Advertisement