For the best experience, open
https://m.hosakannada.com
on your mobile browser.
Advertisement

Kerala governor : SFI ನಿಂದ ಪ್ರತಿಭಟನೆ, ಬನ್ನಿ ಬನ್ನಿ ಎನ್ನುತ್ತ ರೋಷಾವೇಷದಿಂದ ನುಗ್ಗಿ ನಡು ರಸ್ತೆಯಲ್ಲೇ ಧರಣಿಗೆ ಕುಳಿತ ಕೇರಳ ರಾಜ್ಯಪಾಲ !!

11:20 PM Jan 27, 2024 IST | ಹೊಸ ಕನ್ನಡ
UpdateAt: 11:20 PM Jan 27, 2024 IST
kerala governor   sfi ನಿಂದ ಪ್ರತಿಭಟನೆ  ಬನ್ನಿ ಬನ್ನಿ ಎನ್ನುತ್ತ ರೋಷಾವೇಷದಿಂದ ನುಗ್ಗಿ ನಡು ರಸ್ತೆಯಲ್ಲೇ ಧರಣಿಗೆ ಕುಳಿತ ಕೇರಳ ರಾಜ್ಯಪಾಲ

Advertisement

Kerala governor: ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಅವರು ನಡು ರಸ್ತೆಯಲ್ಲಿ ಧರಣಿ ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಕೇರಳ ರಾಜ್ಯಪಾಲ(Kerala governor)ಆರೀಫ್ ಮೊಹಮ್ಮದ್ ಖಾನ್(Arif Mohammed khan)ಹಾಗೂ ಪಿಣರಾಯಿ ಸರ್ಕಾರದ ನಡುವಿನ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಹೌದು, ಕೇರಳದಲ್ಲಿ(Kerala) ಕಾರ್ಯಕ್ರಮವೊಂದರಲ್ಲಿ ಎಸ್‌ಎಫ್‌ಐ(SFI) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ರೊಚ್ಚೆಗ್ದದ ರಾಜ್ಯಪಾಲ ಆರಿಫ್ ಮೊಹಮ್ಮದ್ ರಸ್ತೆಯಲ್ಲಿ ಧರಣಿ ಕುಳಿತರು. ಬಳಿಕ ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಛೀಮಾರಿ ಹಾಕಿ ತನ್ನ ಸಹೋದ್ಯೋಗಿಗೆ ಪ್ರಧಾನಿಗೆ ಕರೆ ಮಾಡಿ ಮಾತನಾಡುವಂತೆ ಹೇಳಿದ್ದಾರೆ. ಅಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ನಾನು ಇಲ್ಲಿಂದ ತೆರಳುವುದಿಲ್ಲ ಎಂದು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆರಾಜ್ಯಪಾಲರು ಹೀಗೆ ನಡು ರಸ್ತೆಯಲ್ಲಿ ಧರಣಿ ಕುಳಿತಿದ್ದು, ಕೇರಳ ಸರ್ಕಾರ ತೀವ್ರ ಹಿನ್ನಡೆ ಅನುಭವಿಸಿದೆ.

Advertisement

ಅಂದಹಾಗೆ ಸದಾನಂದ ಆಶ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಲು ರಾಜ್ಯಪಾಲರು ತಿರುವನಂತಪುರದಿಂದ ನಿಲಮೇಲ್ ಮೂಲಕ ಸದಾನಂದಪುರಕ್ಕೆ ಹೋಗುತ್ತಿದ್ದರು. ಪ್ರಯಾಣದ ವೇಳೆ ಎಸ್‌ಎಫ್‌ಐ ಸದಸ್ಯರು ರಾಜ್ಯಪಾಲರ ವಾಹನದ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕುಪಿತಗೊಂಡ ರಾಜ್ಯಪಾಲರು ಕಾರಿನಿಂದ ಇಳಿದು ಪ್ರತಿಭಟನಾಕಾರರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

https://x.com/ANI/status/1751123764824432991?t=lNJsEffGr-LXxJKjhjj-BQ&s=08

ಬಳಿಕ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಐಪಿಎಸ್ ಅಧಿಕಾರಿಯೊಬ್ಬರಿಗೆ ಛೀಮಾರಿ ಹಾಕುತ್ತಾ ಇಂಗ್ಲಿಷ್‌ನಲ್ಲಿ, 'ಇಲ್ಲ ನಾನು ಇಲ್ಲಿಂದ ಹಿಂತಿರುಗುವುದಿಲ್ಲ. ನೀವು (ಪೊಲೀಸರು) ಅವರಿಗೆ ಇಲ್ಲಿ ಭದ್ರತೆ ನೀಡಿದ್ದೀರಿ, ಎಸ್‌ಎಫ್‌ಐ ಪೊಲೀಸ್ ರಕ್ಷಣೆ ನೀಡಲಾಗಿದೆ. ನಾನು ಇಲ್ಲಿಂದ ಹೋಗುವುದಿಲ್ಲ, ಪೊಲೀಸರೇ ಕಾನೂನು ಉಲ್ಲಂಘಿಸಿದರೆ ಕಾನೂನನ್ನು ಯಾರು ಜಾರಿಗೊಳಿಸುತ್ತಾರೆ?ಎಂದು ಪ್ರಶ್ನಿಸಿದರು. ಸ್ಥಳೀಯ ಮುಖಂಡರು ಮಧ್ಯ ಪ್ರವೇಶಿಸಿ ಮನವೊಲಿಸಲು ಯತ್ನಿಸಿದರೂ ರಾಜ್ಯಪಾಲರು ಮಣಿಯಲಿಲ್ಲ. ರಾಜ್ಯದ ಗೃಹ ಇಲಾಖೆ ವಿಫಲವಾಗಿದ್ದು, ಪೊಲೀಸರು ಪ್ರತಿಭಟನಾಕಾರರ ಜತೆ ಶಾಮೀಲಾಗಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ.

https://twitter.com/ANI/status/1751133142239633580?t=TEU5lVV-7q74TwUZps3yjw&s=19

13 ಜನರ ವಿರುದ್ಧ ಪ್ರಕರಣ ದಾಖಲು
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ ಪೊಲೀಸರು ಇದೀಗ 13 ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 143, 144, 147, 283, 353, 124, 149 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

https://x.com/ANI/status/1751135613095755954?t=0yJ2Sx9OCmELySLn_4TeOw&s=08

Z+ ಭದ್ರತೆ ಒದಗಿಸಿದ ಕೇಂದ್ರ!!
ಶನಿವಾರ ಬೆಳಗ್ಗೆ ನಡೆದ ಈ ಪ್ರತಿಭಟನೆ- ಆಕ್ರೋಶ ನಂತರ ಕೇಂದ್ರ ಸರ್ಕಾರ ಖಾನ್ ಅವರಿಗೆ Z+ ಭದ್ರತೆಯನ್ನು ನೀಡಿದೆ. “ಗೌರವಾನ್ವಿತ ಗವರ್ನರ್ ಮತ್ತು ಕೇರಳ ರಾಜಭವನಕ್ಕೆ ಸಿಆರ್‌ಪಿಎಫ್‌ನ Z+ ಭದ್ರತೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕೇರಳ ರಾಜಭವನಕ್ಕೆ ತಿಳಿಸಿದೆ” ಎಂದು ರಾಜ್ಯಪಾಲರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

Advertisement
Advertisement