For the best experience, open
https://m.hosakannada.com
on your mobile browser.
Advertisement

Priyanka Chopra: 166 ಕೋಟಿ ಬೆಲೆಯ ಮನೆಯನ್ನು ಏಕಾಏಕಿ ತೊರೆದು ಬಂದು ಪ್ರಿಯಾಂಕ ಚೋಪ್ರಾ - ಕಾರಣ ತಿಳಿದರೆ ನೀವೂ ಶಾಕ್ ಆಗ್ತೀರಾ !!

01:18 PM Feb 02, 2024 IST | ಹೊಸ ಕನ್ನಡ
UpdateAt: 01:19 PM Feb 02, 2024 IST
priyanka chopra  166 ಕೋಟಿ ಬೆಲೆಯ ಮನೆಯನ್ನು ಏಕಾಏಕಿ ತೊರೆದು ಬಂದು ಪ್ರಿಯಾಂಕ ಚೋಪ್ರಾ   ಕಾರಣ ತಿಳಿದರೆ ನೀವೂ ಶಾಕ್ ಆಗ್ತೀರಾ
Advertisement

Priyanka Chopra: ಪ್ರಿಯಾಂಕ ಚೋಪ್ರಾ ಮದುವೆ ಆದ ಮೇಲೆ ಚಿತ್ರಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಇಲ್ಲ ಸಲ್ಲದ ವಿಚಾರಗಳಿಂದನೇ. ಇನ್ನೂ ಪ್ರಿಯಾಂಕ ಚೋಪ್ರಾ ಅಂದರೆ ಟ್ರೋಲಿಗರಿಗೆ ಹಬ್ಬವೋ ಹಬ್ಬ. ಇಂತಹ ಪ್ರಿಯಾಂಕ ಚೋಪ್ರಾ(Priyanka Chopra)ಇದೀಗ 'ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು' ಎಂದು ದೊಡ್ಡವರು ಹೇಳಿದ ಮಾತನ್ನ ನೆನಪಿಸಿಕೊಳ್ಳುವಂತೆ ಆಗಿದೆ.

Advertisement

ಇದನ್ನೂ ಓದಿ: Belthangady: ವಾಹನ ಡಿಕ್ಕಿಯಾಗಿ ತಲೆಗೆ ಪೆಟ್ಟಾಗಿದ್ದ ಮಂಗನನ್ನು ರಕ್ಷಿಸಿದ ಯುವಕರು!

ಯಾಕೆಂದರೆ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ತಮ್ಮ ಲಾಸ್‌ ಏಂಜಲೀಸ್(Las anglais)ಮನೆಯಿಂದ ಹೊರಬಂದಿದ್ದಾರೆ. ಇದೇನು ಸಾಮಾನ್ಯ ವಿಚಾರ ಅನ್ನಬಹುದು. ಆದರೆ ಅವರು ಬಂದದ್ದು ಬರೋಬ್ಬರಿ 166 ಕೋಟಿ ರೂ. ಬೆಲೆಬಾಳುವ ಮನೆಯಿಂದ. ಅಲ್ಲದೆ ಮನೆ ಬಿಡಲು ಕೊಟ್ಟ ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!!

Advertisement

ಹೌದು, ಈ 166 ಕೋಟಿ ಮನೆಯಲ್ಲಿ ನೀರು ಸೋರುತ್ತಿದೆ ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದಾರಂತೆ. ಈ ಜೋಡಿಯ ಲಾಸ್ ಏಂಜಲೀಸ್‌ನಲ್ಲಿರುವ ಬರೋಬ್ಬರಿ 166 ಕೋಟಿ ರುಪಾಯಿ ಮೌಲ್ಯದ ಮನೆಯಲ್ಲಿ ಕೂಡಾ ಈ ನೀರು ಸೋರೋ, ಬೂಸ್ಟ್ ಹಿಡಿಯೋ ಸಮಸ್ಯೆ ತಲೆ ಚಿಟ್ಟು ಹಿಡಿಸಿದೆಯಂತೆ. ಎಷ್ಟರ ಮಟ್ಟಿಗೆ ಅಂದ್ರೆ ಇವರಿಬ್ರೂ ಮನೆಯಿಂದನೇ ಹೊರ ಬರೋ ಲೆವೆಲ್ಲಿಗೆ. ಈದೀಗ ಈ ಜೋಡಿ ಮನೆ ಸೋರುತ್ತಿರುವ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದು, ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಮನೆಯಲ್ಲಿ ಏನೆಲ್ಲ ಇದೆ?

ವರದಿಯ ಪ್ರಕಾರ, ದಂಪತಿ ಸೆಪ್ಟೆಂಬರ್ 2019 ರಲ್ಲಿ $20 ಮಿಲಿಯನ್ಗೆ(166ಕೋಟಿ) ಮನೆಯನ್ನು ಖರೀದಿಸಿದರು. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ಈ ಐಷಾರಾಮಿ ಮಹಲಿನೊಳಗೆ ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನಗೃಹಗಳು, ಶೆಫ್ ಅಡುಗೆಮನೆ, ವೈನ್‌ಗಾಗಿ ವಿಶೇಷ ಕೊಠಡಿ, ಒಳಾಂಗಣ ಬಾಸ್ಕೆಟ್‌ಬಾಲ್ ಅಂಕಣ, ಬೌಲಿಂಗ್ ಏರಿಯಾ, ಹೋಮ್ ಥಿಯೇಟರ್, ಮೋಜಿಗಾಗಿ ಲಾಂಜ್, ಸ್ಟೀಮ್ ಶವರ್ ಹೊಂದಿರುವ ಸ್ಪಾ, ಪೂರ್ಣ-ಸೇವಾ ಜಿಮ್, ಮತ್ತು ಬಿಲಿಯರ್ಡ್ಸ್ ಆಡಲು ಕೊಠಡಿಗಳಿವೆ.

ಸಮಸ್ಯೆ ಏನು?

ಮೇ 2023ರಲ್ಲಿ ಪೂಲ್ ಮತ್ತು ಸ್ಪಾಗೆ ಸಂಬಂಧಿಸಿದ ಸಮಸ್ಯೆಗಳು ಏಪ್ರಿಲ್ 2020 ರ ಸುಮಾರಿಗೆ ಪ್ರಾರಂಭವಾಯಿತು. ನೀರು ಸೋರುವ ಸಮಸ್ಯೆ ಇದೆ. ಇದು ಪಾಚಿ ಬೆಳೆಯಲು ಕಾರಣವಾಯಿತು ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಿತು. ಡೆಕ್‌ನಲ್ಲಿರುವ ಬಾರ್ಬೆಕ್ಯೂ ಪ್ರದೇಶದಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿತು. ಈ ಸೋರಿಕೆಯು ಡೆಕ್‌ ಕೆಳಗಿರುವ ಆಂತರಿಕ ವಾಸದ ಪ್ರದೇಶದ ಒಂದು ಭಾಗವನ್ನು ಹಾನಿಗೊಳಿಸಿತು. ಇದರಿಂದ ಈ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ.

Advertisement
Advertisement
Advertisement