PM Modi: ಉಗ್ರರನ್ನು ಅವರ ನೆಲದಲ್ಲೇ ನುಗ್ಗಿ ಹೊಡೆಯುತ್ತಿದ್ದೇವೆ- ವಿಶ್ವದಾದ್ಯಂತ ಕೋಲಾಹಲ ಸೃಷ್ಟಿಸಿದ ಪ್ರಧಾನಿ ಹೇಳಿಕೆ !!
PM Modi: ನಮ್ಮ ಸರ್ಕಾರ ಉಗ್ರರನ್ನು (Terrorists) ಅವರ ತವರು ನೆಲದಲ್ಲಿಯೇ ಮಟ್ಟ ಹಾಕಿದೆ, ಉಗ್ರರ ನೆಲಗಳಿಗೆ ನುಗ್ಗಿ ಹೊಡೆದು ಅವರನ್ನು ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಅಬ್ಬರದ ಭಾಷಣ ಮಾಡಿದ್ದಾರೆ. ಸದ್ಯ ಇದು ವಿಶ್ವದಾತ್ಯಂತ ಕೋಲಾಹಲ ಸೃಷ್ಟಿಸಿದೆ.
ಹೌದು, ಉತ್ತರಾಖಂಡ್ಗೆ (Uttarakhand) ಚುನಾವಣಾ ಪ್ರಚಾರಕ್ಕಾಗಿ ಭೇಟಿ ನೀಡಿರುವ ಮೋದಿ ರಿಷಿಕೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಲಿಷ್ಠ ಸರ್ಕಾರದ ಅಡಿಯಲ್ಲಿ ದೇಶದ ಭದ್ರತಾ ಪಡೆಗಳು ಭಯೋತ್ಪಾದನೆಯನ್ನು ನಿಗ್ರಹಿಸಿದೆ ದೇಶಾದ್ಯಂತ ನಮ್ಮ ಸರ್ಕಾರದ ಪ್ರಯೋಜನಗಳನ್ನು ಕಂಡಿರುವ ಜನ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ (ಮತ್ತೊಮ್ಮೆ ಮೋದಿ ಸರ್ಕಾರ) ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಬಲಿಷ್ಠ ಮೋದಿ ಸರ್ಕಾರದ (Modi Government) ಅಡಿಯಲ್ಲಿ ನಮ್ಮ ಪಡೆಗಳು ಉಗ್ರರಿರುವ ಅವರ ನೆಲದಲ್ಲೇ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಹೇಳಿದರು. ಈ ಹೇಳಿಕೆ ಸದ್ಯ ವಿಶ್ವದ ಗಮನ ಸೆಳೆದಿದೆ.
ಇದನ್ನೂ ಓದಿ: Pune: ಇನ್ಮುಂದೆ ಮಂಗಳಮುಖಿಯರು ಟ್ರಾಫಿಕ್ ನಲ್ಲಿ ಹಣ ಕೇಳುವಂತಿಲ್ಲ, ಯಾರ ಮನೆಗೂ ಹೋಗುವಂತಿಲ್ಲ !! ಹೊಸ ಆದೇಶ
ಏಕೆಂದರೆ ಇತ್ತೀಚೆಗೆ ಭಾರತವು ನೆರೆಯ ರಾಷ್ಟ್ರಗಳ ಮೇಲೆ ಗೂಡಚರ್ಯೆ ನಡೆಸಿ, ದೇಶದೊಳಗೆ ನುಗ್ಗಿ ಅಲ್ಲಿನ ಉಗ್ರರನ್ನು ಸೆದೆಬಡಿಯುತ್ತಿದೆ. ಸುಪಾರಿ ಕಿಲ್ಲಿಂಗ್ ನಡೆಸುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಸ್ವತಃ ಕೆನಡಾ ಪ್ರಧಾನಿ ಕೂಡ ಭಾರತ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಬ್ರಿಟಿಷ್ ಪತ್ರಿಕೆ ಗಾರ್ಡಿಯನ್(Guardian)ಕೂಡ ಮಾಡಿತು. ಪಾಕಿಸ್ತಾನ ಆಗಾಗ ಹೇಳುತ್ತಲೇ ಬರುತ್ತಿತ್ತು. ಅಮೆರಿಕಾ ಕೂಡ ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಆರೋಪಿಸಿ ಒಬ್ಬನನ್ನು ಅರೆಸ್ಟ್ ಮಾಡಿ ಇದೀಗ ತನಿಖೆಯನ್ನೂ ನಡೆಸುತ್ತಿದೆ. ಆದರೆ ಭಾರತ ಸರ್ಕಾರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಎಲ್ಲಾ ಆರೋಪ ತಳ್ಳಿ ಹಾಕಿತ್ತು. ಆದರೀಗ ಈ ಹೊತ್ತಲ್ಲೇ ಪ್ರಧಾನಿ ಮೋದಿ ನಮ್ಮ ಸರ್ಕಾರ 'ಉಗ್ರರನ್ನು ಅವರ ನೆಲದಲ್ಲೇ ನುಗ್ಗಿ ಹೊಡೆಯುತ್ತಿದ್ದೇವೆ' ಎಂದು ಹೇಳಿರುವುದು ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ. ಆರೋಪಗಳನ್ನು ಪ್ರಧಾನಿ ಒಪ್ಪಿಕೊಂಡರಾ? ಸತ್ಯವನ್ನು ಬಾಯಿಬಿಟ್ಟರಾ? ಎಂದು ಅನುಮಾನಗಳು ಶುರುವಾಗಿದೆ. ಒಟ್ಟಿನಲ್ಲಿ ಜಗತ್ತಿನ ಇತರ ರಾಷ್ಟ್ರಗಳು ಇದನ್ನು ಹೇಗೆ ಸ್ವೀಕರಿಸುತ್ತವೆ ಎಂದು ನೋಡಬೇಕಿದೆ.