For the best experience, open
https://m.hosakannada.com
on your mobile browser.
Advertisement

Prices Of Medicines: ಬಿಪಿ, ಶುಗರ್, ಹೃದ್ರೋಗ ಸೇರಿ ಇತರೆ ಔಷಧಿಗಳ ದರ ಇಳಿಕೆ

Prices of Medicines: ಹೃದ್ರೋಗ, ಮಧುಮೇಹ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ 6 ಔಷಧೀಯ ಸಂಯೋಜನೆಗಳ ದರವನ್ನು ಕಡಿಮೆ ಮಾಡಿದೆ.
09:45 AM May 17, 2024 IST | ಸುದರ್ಶನ್
UpdateAt: 09:46 AM May 17, 2024 IST
prices of medicines  ಬಿಪಿ  ಶುಗರ್  ಹೃದ್ರೋಗ ಸೇರಿ ಇತರೆ ಔಷಧಿಗಳ ದರ ಇಳಿಕೆ

Prices of Medicines: ಕೇಂದ್ರ ಸರಕಾರವು ಸಾಮಾನ್ಯವಾಗಿ ಬಳಸುವ 41 ಔಷಧ ಗಳು ಹಾಗೂ ಹೃದ್ರೋಗ, ಮಧುಮೇಹ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ 6 ಔಷಧೀಯ ಸಂಯೋಜನೆಗಳ ದರವನ್ನು ಕಡಿಮೆ ಮಾಡಿದೆ.

Advertisement

ಇದನ್ನೂ ಓದಿ: Bengaluru: ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿ ಬಹಿರಂಗ ! ಐವರ ಸಾವಿಗೆ ಇದೇ ಕಾರಣ!

ಮಧುಮೇಹ, ಹೃದ್ರೋಗ, ಅಲರ್ಜಿ, ಗ್ಯಾಸ್ಟಿಕ್, ಸಾಮಾನ್ಯ ಸೋಂಕು, ಯಕೃತ್ ಸಂಬಂಧಿತ ಕಾಯಿಲೆಗಳಿಗೆ ಬಳಸುವ ಔಷಧಗಳ ದರಗಳು ಇಳಿಕೆಯಾಗಲಿವೆ. ಜತೆಗೆ ಮಲ್ಟಿವಿಟಮಿನ್ ಮಾತ್ರೆಗಳು ಹಾಗೂ ಆಂಟಿಬಯಾಟಿಕ್ ಔಷಧಗಳ ದರವೂ ಇಳಿಕೆಯಾಗಲಿದೆ. ಕೇಂದ್ರ ಸರಕಾರದ ಔಷಧ ಇಲಾಖೆ ಹಾಗೂ 'ರಾಷ್ಟ್ರೀಯ ಔಷಧ ದರ ಪ್ರಾಧಿಕಾರ' (ಎನ್‌ಪಿಪಿಎ) ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

Advertisement

ಇದನ್ನೂ ಓದಿ: Earned leave: ಗಳಿಕೆ ರಜೆ ನೀಡಿ ಶಿಕ್ಷಕರ ಅಸಮಾಧಾನ ತಣಿಸಿದ ಸರ್ಕಾರ !!

ಭಾರತದಲ್ಲಿ ಇನ್ಸುಲಿನ್ ಮೇಲೆ ಅವಲಂಬಿತ 10ಕೋಟಿಗೂ ಮಧುಮೇಹಿಗಳಿದ್ದು, ಸರಕಾರದ ನಿರ್ಧಾರದಿಂದ ಮಾತ್ರೆಗಳು ಹಾಗೂ ಇನ್ಸುಲಿನ್ ಮೇಲೆ ಅವಲಂಭಿತರಾಗಿರುವವರಿಗೆ ನೆರವಾಗಲಿದೆ.

ಯಾವೆಲ್ಲಾ ಮಾತ್ರೆ ಹಗ್ಗ?

ರಕ್ತದಲ್ಲಿ ಗೂಕೋಸ್ ಅಂಶವನ್ನು ಕಡಿಮೆ ಮಾಡಲು ಬಳಸುವ 'ಡೆಪಾಗ್ನಿಪ್ರೊಜಿನ್ ಮೆಟ್‌ಫೋಲ್ಡನ್ ಹೈಡೋಕ್ಲೋರೈಡ್' ಮಾತ್ರೆಯ ದರವನ್ನು ಒಂದಕ್ಕೆ 30 ರೂ.ನಿಂದ 16 ರೂ.ಗೆ ಇಳಿಸಲಾಗಿದೆ. ರಕ್ತದೊತ್ತಡ ಇಳಿಕೆಗೆ ಬಳಸಲಾಗುವ 'ಹೈಡೋಕ್ಲೋರೋಥೈಯಾಜೈಡ್' ಮಾತ್ರೆಯ ದರವು ಒಂದಕ್ಕೆ 11.07 ರೂ.ನಿಂದ 10.45 ರೂ.ಗೆ ಇಳಿಕೆಯಾಗಲಿದೆ. ಐಬ್ರೂಫಿನ್, ಪ್ಯಾರಾಸಿಟಮಲ್ ಮಾತ್ರೆಗಳ ಬೆಲೆಯನ್ನೂ 1.59 ರೂ.ಗೆ ಇಳಿಕೆ ಮಾಡಲಾಗಿದೆ.

Advertisement
Advertisement
Advertisement