For the best experience, open
https://m.hosakannada.com
on your mobile browser.
Advertisement

North Korea Lipstick Ban: ಉತ್ತರ ಕೊರಿಯಾದಲ್ಲಿ ಇನ್ನು ಮುಂದೆ ಕೆಂಪು ಲಿಪ್ ಸ್ಟಿಕ್ ಹಾಕಿಕೊಂಡರೆ ಜೈಲು : ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೊಸ ಕಾನೂನು

North Korea Lipstick Ban: ಇತ್ತೀಚೆಗೆ, ಮಹಿಳೆಯರು ತಮ್ಮ ತುಟಿಗಳಿಗೆ ಕೆಂಪು ಲಿಪ್ಟಿಕ್ ಅನ್ನು ಅನ್ವಯಿಸುವುದನ್ನು ಉತ್ತರ ಕೊರಿಯದಾದ್ಯಂತ ನಿಷೇಧಿಸಲಾಗಿದೆ.
03:16 PM May 15, 2024 IST | ಸುದರ್ಶನ್
UpdateAt: 04:54 PM May 15, 2024 IST
north korea lipstick ban  ಉತ್ತರ ಕೊರಿಯಾದಲ್ಲಿ ಇನ್ನು ಮುಂದೆ  ಕೆಂಪು ಲಿಪ್ ಸ್ಟಿಕ್ ಹಾಕಿಕೊಂಡರೆ ಜೈಲು   ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೊಸ ಕಾನೂನು
Advertisement

North Korea Lipstick Ban: ಉತ್ತರ ಕೊರಿಯಾದ ಐಲು ದೊರೆ ಕಿಮ್ ಜಾಂಗ್ ಉನ್(Kim Jong Un) ತನ್ನ ಸರ್ವಾಧಿಕಾರಿ ಧೋರಣೆಯಿಂದ ಅಲ್ಲಿನ ಜನತೆಗೆ ತೀವ್ರ ತೊಂದರೆ ನೀಡುತ್ತಿದ್ದಾನೆ. ವಿಚಿತ್ರವಾದ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಜನರ ವೈಯಕ್ತಿಕ ವಿಷಯಗಳನ್ನು ಸಹ ಅವನು ನಿರ್ಧರಿಸುತ್ತಾನೆ. ಜನರು ಏನು ತಿನ್ನಬೇಕು, ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವ ಮೂಲಕ ಜನರ ಹಕ್ಕುಗಳನ್ನು ದಮನ ಮಾಡುತ್ತಿದ್ದಾನೆ. ಒಂದು ವೇಳೆ ಆತ ವಿಧಿಸಿದ ಕಾನೂನುಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅಂತಹವರಿಗೆ ಭಾರೀ ದಂಡ ಮತ್ತು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Advertisement

ಇದನ್ನೂ ಓದಿ: PM Modi: ನಮ್ಮ ಪಕ್ಕದ ಮನೆಯೇ ಮುಸ್ಲಿಮರದ್ದು, ಈದ್ ದಿನ ಅವರ ಮನೆಯಲ್ಲೇ ನಮ್ಮ ಊಟ - ಪ್ರಧಾನಿ ಮೋದಿ

ಇತ್ತೀಚೆಗೆ, ಮಹಿಳೆಯರು ತಮ್ಮ ತುಟಿಗಳಿಗೆ ಕೆಂಪು ಲಿಪ್ಟಿಕ್ ಅನ್ನು ಅನ್ವಯಿಸುವುದನ್ನು ಉತ್ತರ ಕೊರಿಯದಾದ್ಯಂತ ನಿಷೇಧಿಸಲಾಗಿದೆ. ಕಿಮ್(Kim Jong Un) ಆಡಳಿತವು ಕೆಂಪು ಲಿಪ್ಟಿಕ್ (Lipstick)ಅನ್ನು ಬಂಡವಾಳಶಾಹಿಯ ಸಂಕೇತವಾಗಿ ನೋಡುತ್ತದೆ. ಮೇಲಾಗಿ, ಅದು ಸಂಪೂರ್ಣವಾಗಿ ಕಮ್ಯುನಿಸಂ ವಿರುದ್ದ ಎಂಬ ಬಲವಾದ ನಂಬಿಕೆಯಿಂದಾಗಿ, ಈಗಾಗಲೇ ಉತ್ತರ ಕೊರಿಯಾದಲ್ಲಿ ಮಹಿಳೆಯರ ಮೇಕಪ್ ಮೇಲಿನ ನಿಷೇಧ ಮುಂದುವರಿದಿದೆ.

Advertisement

ಇದನ್ನೂ ಓದಿ: SSLC: ಬೇಸಿಗೆ ರಜೆಗೆ ಕತ್ತರಿ! ಶಿಕ್ಷಣ ಇಲಾಖೆ ಮೇಲೆ ಶಿಕ್ಷಕರ ಆಕ್ರೋಶ!

ಮಹಿಳೆಯರ ಮೇಕಪ್ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಇದಕ್ಕೆಲ್ಲ ಅವಕಾಶ ನೀಡಿದರೆ ಕ್ರಮೇಣ ಜನರು ಪಾಶ್ಚಾತ್ಯ ಸಿದ್ಧಾಂತದತ್ತ ಆಕರ್ಷಿತರಾಗುತ್ತಾರೆ ಎಂಬುದು ಕಿಮ್ ಜಾಂಗ್(Kim Jong Un) ಆತಂಕ. ಕಿಮ್ ಸರ್ಕಾರವು ಜನರನ್ನು ಸಾಧಾರಣ ಮತ್ತು ಸಹಜ ಪ್ರೀತಿಯಲ್ಲಿ ಇರುವಂತೆ ತಿಳಿಸಿದ್ದಾರೆ. ಆಡಳಿತಗಾರರ ಪ್ರಕಾರ, ಲಿಪ್ಟಿಕ್ ಧರಿಸುವುದು ಅವರ ದೇಶದ ನಿಯಮಗಳಿಗೆ ವಿರುದ್ಧವಾಗಿದೆ.

ಅಲ್ಲದೆ, ಉತ್ತರ ಕೊರಿಯಾದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಅನೇಕ ಫ್ಯಾಷನ್‌ಗಳನ್ನು ನಿಷೇಧಿಸಲಾಗಿದೆ. ಬಿಗಿಯಾದ ಬಟ್ಟೆ, ನೀಲಿ ಜೀನ್ಸ್, ಆಭರಣಗಳು ಮತ್ತು ಕೆಲವು ರೀತಿಯ ಹೇರ್ಕಟ್ಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೂದಲು ಟ್ರಿಮ್ ಮಾಡಬೇಕು. ಜೀನ್ಸ್ ಪ್ಯಾಂಟ್ ಹಾಕಿಕೊಂಡು ರಸ್ತೆಯಲ್ಲಿ ಕಂಡರೆ ಅಷ್ಟೆ. ಅವರು ಅಲ್ಲಿಯೇ ಜೀನ್ಸ್ ಪ್ಯಾಂಟ್ ಅನ್ನು ಕತ್ತರಿಸುತ್ತಾರೆ.

ಅಲ್ಲದೆ, ಕಿಮ್(Kim Jong Un) ಅವರ ಲೈಂಗಿಕ ಬಯಕೆಗಳನ್ನು(Sexual desire) ಪೂರೈಸಲು ಸುಂದರ ಹುಡುಗಿಯರನ್ನು ಹೊಂದಿರುವ 'ಪ್ಲೇಷರ್ ಸ್ಕ್ಯಾಡ್ ಎಂಬ ಗುಂಪು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಕಿಮ್ ಪ್ರತಿ ವರ್ಷ 25 ಸುಂದರ ಕನೈಯರನ್ನು ಆಯ್ಕೆ ಮಾಡುತ್ತಾರೆ ಎಂದು ದೇಶದಿಂದ ಓಡಿಹೋದ ಮಹಿಳೆ ಯೆನ್ನಿ ಪಾರ್ಕ್‌ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಮಹಿಳೆಯರ ನೋಟ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಆಕೆ ಹೇಳಿದ್ದಾಳೆ.

Advertisement
Advertisement
Advertisement