ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Pratima Muder case:ಗಣಿ ಮತ್ತು ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ಮಾಹಿತಿ!!! ಇಲ್ಲಿದೆ ಸಂಪೂರ್ಣ ವಿವರ

11:22 AM Jan 12, 2024 IST | ಅಶ್ವಿನಿ ಹೆಬ್ಬಾರ್
UpdateAt: 11:26 AM Jan 12, 2024 IST
Advertisement

Prathima Murder Case: ಹಿರಿಯ ಗಣಿ ಮತ್ತು ಭೂವಿಜ್ಞಾನಿ ಕೆ.ಎಸ್.ಪ್ರತಿಮಾ ಬರ್ಬರ ಹತ್ಯೆ ಪ್ರಕರಣ ಎಲ್ಲೆಡೆ ನಡುಕ ಹುಟ್ಟಿಸಿತ್ತು. ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿ ಪ್ರತಿಮಾ (Prathima Murder Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ಎರಡೇ ತಿಂಗಳಲ್ಲಿ ಕೊಲೆ ಪ್ರಕರಣ ಭೇದಿಸಿ ವಿಚಾರಣೆ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ನವೆಂಬರ್ 5 ರಂದು ಬೆಂಗಳೂರಿನ ಸುಬ್ರಮಣ್ಯಪುರದ ಮನೆಯಲ್ಲಿ ಪ್ರತಿಮಾ ಕೊಲೆ ನಡೆದಿತ್ತು. ಈ ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿದ್ದ ತಲಘಟ್ಟಪುರ ಪೊಲೀಸರು ಎರಡೇ ತಿಂಗಳಲ್ಲಿ ವಿಚಾರಣೆ ಅಂತ್ಯಗೊಳಿಸಿದ್ದಾರೆ. ಹಿರಿಯ ಗಣಿ ಅಧಿಕಾರಿ ಪ್ರತಿಮಾ ಅವರಿಗೆ ಕೆಲಸದ ವಿಚಾರ ಹೊರತುಪಡಿಸಿ ಯಾವುದೇ ಗಣಿ ವಿಚಾರ ಸಮಸ್ಯೆಗಳಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ವೇಳೆ ಸಿಸಿಕ್ಯಾಮರಾಗಳಿಲ್ಲದಿದ್ದರು ಕೂಡ ಟವ‌ರ್ ಲೋಕೇಷನ್ ಮೂಲಕ ಖಾಕಿ ಪಡೆ ಆರೋಪಿಯ ಪತ್ತೆಗೆ ಬಲೆ ಬೀಸಿತ್ತು.

ಟೆಕ್ನಿಕಲ್ ಎವಿಡೆನ್ಸ್ ಪೊಲೀಸರು ಸಂಗ್ರಹಿಸಿದ್ದು, ಚಾಲಕನಾಗಿದ್ದ ಕಿರಣ್‌ನನ್ನ ಕೆಲಸದಿಂದ ತೆಗೆದು ಹಾಕಿದ್ದರಿಂದ ಆತ ಕುಪಿತನಾಗಿದ್ದ. ಆರೋಪಿ ಪತ್ನಿ ಬಳಿ ಸರ್ಕಾರಿ ಕೆಲಸ ಅಂತ ಹೇಳಿದ್ದು, ನಿಜ ತಿಳಿದ ಮೇಲೆ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಹೀಗಾಗಿ, ಕೆಲಸ ಕೊಡದೇ ಹೋದರೆ ಕೊಲೆ ಮಾಡಿ ಹಣ ದೋಚುವ ಪ್ಲಾನ್ ಮಾಡಿದ್ದೆ ಎಂದು ಪೊಲೀಸರ ತನಿಖೆ ವೇಳೆ ಆರೋಪಿ ಕಿರಣ್ ಸತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇದೀಗ ಪೊಲೀಸರು ಚಾರ್ಜ್‌ ಶೀಟ್ ರೆಡಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇದನ್ನೂ ಓದಿ: Hormones: ಸಲಿಂಗಕಾಮಕ್ಕೆ ಇದೂ ಕೂಡ ಕಾರಣವಂತೆ!!

ಆರೋಪಿ ಕಿರಣ್ ನನ್ನು ಪ್ರತಿಮಾ ಕೆಲಸದಿಂದ ತೆಗೆದ ವಿಚಾರಕ್ಕೆ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಆರೋಪಿ ಕೊಲೆ ಮಾಡಿದ ಬಳಿಕ ಐದು ಲಕ್ಷ ನಗದು ಹಾಗೂ ನಗ ಕಳ್ಳತನ ಮಾಡಿದ್ದಾನೆ. ಕದ್ದ ಹಣವನ್ನು ಸ್ನೇಹಿತ ಶಿವುಗೆ ಕೊಟ್ಟು ಮಲೆಮಹದೇಶ್ವರ ದೇವಸ್ಥಾನಕ್ಕೆ ತೆರಳಿದ್ದ. ಆರೋಪಿ ಕಿರಣ್ ಜೊತೆಗೆ ಇಬ್ಬರು ಸ್ನೇಹಿತರನ್ನು ಈ ಪ್ರಕರಣದಲ್ಲಿ ಹೈವಿಟ್ನೆಸ್ ಎನ್ನಲಾಗಿದೆ. ಕೆಲ ಬಲ್ಲ ಮೂಲಗಳ ಮಾಹಿತಿ ಅನುಸಾರ, 500ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿಕೊಂಡಿದ್ದಾರೆ. ಅರವತ್ತಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ.

Advertisement
Advertisement