For the best experience, open
https://m.hosakannada.com
on your mobile browser.
Advertisement

Prajwal Revanna Video: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಮಾರಾಟ ದಂಧೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌

Prajwal Revanna Video: ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಬೇಕಾ, ಡಿಎಂ ಮಾಡಿ ಎಂದು ಮೆಸೇಜ್‌ ಮಾಡುವುದರ ಜೊತೆಗೆ ಪೇಜ್‌ ಲೈಕ್‌ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ ಲೈಕ್‌ ಮಾಡಿ ಎಂದು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ
09:49 AM Jun 05, 2024 IST | ಸುದರ್ಶನ್
UpdateAt: 09:53 AM Jun 05, 2024 IST
prajwal revanna video  ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಮಾರಾಟ ದಂಧೆ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Image Credit: TV9 Kannada
Advertisement

Prajwal Revanna Video: ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇಟ್ಟುಕೊಂಡು ಇದೀಗ ದಂಧೆಯೊಂದು ಶುರುವಾಗಿದೆ. ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಬೇಕಾ, ಡಿಎಂ ಮಾಡಿ ಎಂದು ಮೆಸೇಜ್‌ ಮಾಡುವುದರ ಜೊತೆಗೆ ಪೇಜ್‌ ಲೈಕ್‌ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ ಲೈಕ್‌ ಮಾಡಿ ಎಂದು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ.

Advertisement

ಇದನ್ನೂ ಓದಿ: Pradeep Eshwar: ಸುಧಾಕರ್‌ ಗೆಲುವು ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ಮನೆಗೆ ಕಲ್ಲು ತೂರಾಟ

ಹಾಸನದಲ್ಲೆಡೆ ಇತ್ತೀಚೆಗೆ ಪ್ರಜ್ವಲ್‌ ರೇವಣ್ಣ ಅವರದ್ದು ಎಂದು ಹೇಳಲಾದ ಅಶ್ಲೀಲ ವೀಡಿಯೋ ಭಾರೀ ವೈರಲ್‌ ಆಗಿತ್ತು. ಮಹಿಳೆಯರ ಮುಖ ಬ್ಲರ್‌ ಕೂಡಾ ಮಾಡದೆ ಈ ವೀಡಿಯೋಗಳನ್ನು ಹರಿಬಿಡಲಾಗಿತ್ತು. ಇದಾದ ನಂತರ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅದೆಷ್ಟೋ ಮಹಿಳೆಯರು ಸಾಯಲು ಯತ್ನ ಕೂಡಾ ಮಾಡಿದ್ದರು. ಕುಟುಂಬದಿಂದ ಛೀಮಾರಿ ಹಾಕಿಸಿಕೊಂಡವರೂ ಇದ್ದಾರೆ. ಮಾನನಷ್ಟ ಅನುಭವಿಸಿದವರೂ ಇದ್ದಾರೆ. ಇದೆಲ್ಲ ಒಂದು ಕಡೆ ಆದರೆ, ಇದೀಗ ಕೆಲವರು ಈ ವಿಡಿಯೋ ದಂಧೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ಪ್ರಜ್ವಲ್‌ ರೇವಣ್ಣ ವೀಡಿಯೋ ಇದೆ, ಡಿಎಂ ಮಾಡಿ, ವೀಡಿಯೋ ಬೇಕಿದ್ರೆ ಹಣ ಕಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ. ಈಗಾಗಲೇ ಎಸ್‌ಐಟಿ ಈ ವೀಡಿಯೋಗಳನ್ನು ಶೇರ್‌ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಆದರೂ ಈ ರೀತಿಯ ನೀಚ ಕೃತ್ಯಕ್ಕೆ ಮುಂದಾಗಿರುವ ಕಿಡಿಗೇಡಿಗಳ ಬಗ್ಗೆ ಗಮನಹರಿಸಿ ಬಂಧಿಸಬೇಕಾಗಿದೆ.

ಇದನ್ನೂ ಓದಿ: Dakshina Kannada Crime News: ಕಾಯರ್ತಡ್ಕದಲ್ಲಿ ಬಿಜೆಪಿ ನಾಯಕನ ಮೇಲೆ ಹಲ್ಲೆ

Advertisement
Advertisement
Advertisement