Prajwal Vedeio Case: ಪ್ರಜ್ವಲ್ ಪ್ರಕರಣ ಬಳಿಕ 'ಹಾಸನದ ಹೆಣ್ಣು ಬೇಡ ಅನ್ನುತ್ತಾರೆ' - ಮಹಿಳೆ ಆಕ್ರೋಶ !!
Prajwal Vedeio Case: ರಾಜ್ಯದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣ(Prajwal Revanna Case) ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಯಾವ ಮಾಧ್ಯಮಗಳಲ್ಲಿ ನೋಡಿದರೂ ಅದೇ ವಿಚಾರದ ಪ್ರಸಾರ. ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಹಿರಂಗ. ಜನರಿಗೆ ಶಾಕ್ ಮೇಲೆ ಶಾಕ್ ಆಗುತ್ತಲೇ ಇದೆ. ಇದೀಗ ಈ ಕುರಿತು ಮಹಿಳೆಯೊಬ್ಬರು ವಿಚಿತ್ರ ರೀತಿಯಲ್ಲಿ ಅಭಿಪ್ರಾಯ ಹೊರಹಾಕಿದ್ದು, ಇದು ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ರೀತಿಯಲ್ಲಿ ಟ್ರೋಲ್ ಆಗುತ್ತಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋ ಪ್ರಕರಣ ಯಾವೆಲ್ಲಾ ತಿರುವು ಪಡೆದುಕೊಂಡಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇದರಲ್ಲಿ ಮಹಿಳಾ ಸರ್ಕಾರಿ ನೌಕರರು, ಅಧಿಕಾರಿಗಳು ಕೂಡ ಸಂತ್ರಸ್ತೆಯರು ಎಂಬುದು ವಿಷಾದದ ಸಂಗತಿ. ಕೆಲವರು ಇದು ಕುತಂತ್ರ ಅಂದರೆ ಮತ್ತೆ ಕೆಲವರು ಸತ್ಯ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ತನಿಖೆ ಬಳಿಕ ನಿಜವಾದ ಸತ್ಯ ತಿಳಿಯಬೇಕಿದೆ. ಆದರೆ ಪ್ರಜ್ವಲ್ ಹಾಸನ ಸಂಸದರಾದ ಕಾರಣ, ದೇಶಾದ್ಯಂತ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದರಿಂದ ಹಾಸನದ ಹೆಸರಿಗೆ, ದೇವೇಗೌಡರು ಕಟ್ಟಿದ ಭಧ್ರ ಕೋಟೆಗೆ ಕೊಂಚವಾದರೂ ಹಲವು ರೀತಿಯಲ್ಲಿ ಹಿನ್ನಡೆಯಾಗಿರುವುದು ಸತ್ಯ. ಈ ವಿಚಾರವಾಗಿಯೇ ಮಹಿಳೆಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು, ಕೆಲವು ಖಾಸಗಿ ವಾಹಿನಿಗಳು, ಯೂಟ್ಯೂಬ್ ಚಾನಲ್ ಅವರು ಈ ಪ್ರಕರಣದ ಬಳಿಕ ಹಾಸನದ ಜನ ಹಾಗೂ ಇತರ ಭಾಗದ ಜನ ಏನು ಅಭಿಪ್ರಾಯ ಹೊಂದಿದ್ದಾರೆ ಎಂದು ಅವರ ಬಳಿ ಮಾತನಾಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದ ಬಳಿಕವೂ ಪ್ರಜ್ವಲ್ ಗೆಲ್ಲುತ್ತಾರೋ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು 'ಇಷ್ಟೆಲ್ಲಾ ಆದ ಬಳಿಕ ಜನ ಹಾಸನದ ಹೆಣ್ಣು ತರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮದುವೆಯಾಗಲು ಹಾಸನದ ಹೆಣ್ಣು ಬೇಡವೇ ಬೇಡ ಎಂದು ಹಿಂಜರಿಯುತ್ತಿದ್ದಾರೆ. ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಹಾಸನ ಜಿಲ್ಲೆಯಿಂದ ಹೆಣ್ಣ ತರೋದು ಕಷ್ಟ ಅನ್ನೋ ಪರಿಸ್ಥಿತಿ ಇದೆ ಎಂದು ಮಹಿಳೆಯೊಬ್ಬರು ನಿಮ್ಮ NEWS 15 kannada ಚಾನೆಲ್ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹಾಸನದಲ್ಲಿ ಎಲ್ಲರೂ ಹಾಗೆ ಇರುವುದಿಲ್ಲ, ಆದರೆ ಒಬ್ಬರು ಮಾಡಿದ ತಪ್ಪಿಂದ ಎಲ್ಲರಿಗೂ ಕೆಟ್ಟ ಹೆಸರು. ಯಾರು ಈ ರೀತಿ ಇಲರಲ್ಲ, ಈತ ಮಾಡಿದ ಹಲ್ಕ ಕೆಲಸಕ್ಕೆ (ಪ್ರಜ್ವಲ್ ವಿಡಿಯೋ ಪ್ರಕರಣ) ಎಲ್ಲರೂ ಇದೇ ರೀತಿ ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
https://www.instagram.com/reel/C6xp5UGomg2/?igsh=MXZtbTdrdHlrYjRzag==
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು ಜನರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ. ಯಾರೋ ಒಬ್ಬರು ಕೆಟ್ಟವರು ಎಂದರೆ ಎಲ್ಲಾ ಹೆಣ್ಣುಮಕ್ಕಳು ಕೆಟ್ಟವರಲ್ಲ. ಎಲ್ಲರನ್ನೂ ಹೀಗೆ ನೋಡಬೇಡಿ. ಹೆಣ್ಣು ಹೆಂಗಸಾಗಿ ಈ ರೀತಿ ಮಾತನಾಡಬೇಡಿ ಎಂದು ಹೇಳಿದ್ದಾರೆ.