For the best experience, open
https://m.hosakannada.com
on your mobile browser.
Advertisement

Power TV: ತಕ್ಷಣದಿಂದಲೇ ಪವರ್‌ ಟಿವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ, ಸೌಜನ್ಯಾ ಹೋರಾಟಗಾರರಿಗೆ ಮತ್ತೊಂದು ಜಯ

Power TV: ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ ತಕ್ಷಣಕ್ಕೆ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶ ನೀಡಿದೆ.
08:37 AM Jun 26, 2024 IST | ಸುದರ್ಶನ್
UpdateAt: 08:37 AM Jun 26, 2024 IST
power tv  ತಕ್ಷಣದಿಂದಲೇ ಪವರ್‌ ಟಿವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ  ಸೌಜನ್ಯಾ ಹೋರಾಟಗಾರರಿಗೆ ಮತ್ತೊಂದು ಜಯ
Advertisement

Power TV: ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ ತಕ್ಷಣಕ್ಕೆ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಕೇಂದ್ರ ವಲಯದ ಐಜಿ ಬಿಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Advertisement

ತನ್ನ ಚಾನೆಲ್ ಗೆ ಪರವಾನಗಿ ನವೀಕರಿಸದ ಹಿನ್ನೆಲೆಯಲ್ಲಿ ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ ಕೂಡಲೇ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್‌, ನಿನ್ನೆ ಮಂಗಳವಾರ ಆದೇಶಿಸಿದೆ. ಧರ್ಮಸ್ಥಳದ ಸೌಜನ್ಯ ಹೋರಾಟಗಾರರ ಬಗ್ಗೆ ಕೀಳು ಟೀಕೆ ಮಾಡಿದ್ದ ನಿಂದಿಸಿದ ಚಾಲೆಂಜ್ ಮಾಡಿದ್ದ ಪವರ್ ಟಿವಿ ರಾಕೇಶ್ ಶೆಟ್ಟಿಗೆ ಸೋಲಾಗಿದೆ. ಅಷ್ಟೇ ಅಲ್ಲ ಹಲವಾರು ಗಣ್ಯರ ವಿರುದ್ಧ ಅವರು ಅಪಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲ ಸಾಮಾಜಿಕ ಹೋರಾಟಗಾರ ಮಾಜಿ ಪೊಲೀಸ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಮೇಲೆ ಕೂಡ ಪವರ್ ಟಿವಿ ಅಕ್ರಮಣ ನಡೆಸಿತ್ತು. ಆವಾಗ ಗಿರೀಶ್ ಮಟ್ಟನ್ನನವರ್ ಪವರ್ ಟಿವಿಯ ಇತಿಹಾಸ ಕೆದಕಿ ತನಿಖೆ ಕೈಗೊಂಡಿದ್ದು, ಪವರ್ ಟಿ ವಿ ಗೆ ಲೈಸೆನ್ಸ್ ಇಲ್ಲ ಅನ್ನುವ ಮಾಹಿತಿಯನ್ನು ಕೆಲವು ತಿಂಗಳುಗಳ ಹಿಂದೆಯೇ ಬಹಿರಂಗಪಡಿಸಿದ್ದರು.

ಪವರ್ ಟಿವಿ ಚಾನೆಲ್ ನ ವಿರುದ್ಧ ಕೇಂದ್ರ ವಲಯದ ಐಜಿ ಬಿಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್‌ಆರ್‌ ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ.

Advertisement

"ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ - 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8 ರವರೆಗೆ ಪ್ರಸಾರ ಮಾಡಬಾರದು," ಎಂದು ಕರ್ನಾಟಕ ಹೈಕೋರ್ಟ್‌ ಕಟ್ಟಪ್ಪಣೆ ನೀಡಿದೆ.

Dakshina Kannada: ಉಳ್ಳಾಲ : ಮನೆಯ ಪಕ್ಕದ ಆವರಣಗೋಡೆ ಮನೆಯ ಮೇಲೆ ಬಿದ್ದು ಒಂದೇ ಮನೆಯ ನಾಲ್ವರು ಸಾವು

ಈ ಪ್ರಕರಣದ ಪ್ರತಿವಾದಿಯಾಗಿ ಪವರ್‌ ಟಿವಿಯ ಮಾತೃ ಸಂಸ್ಥೆಯಾದ ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ನ ಪ್ರತಿನಿಧಿಯಾಗಿರುವ ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್‌ ರಾಕೇಶ್‌ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್‌ ಈ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.

ಪವರ್ ಟಿವಿ ವಿರುದ್ಧ ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲರಾದ ಪ್ರಭುಲಿಂಗ ಕೆ ನಾವಡಗಿ, ಸಂದೇಶ್‌ ಜೆ ಚೌಟ ಹಾಗೂ ಡಿಆರ್‌ ರವಿಶಂಕರ್‌ ವಾದ ಮಂಡಿಸಿದರು. "ಪ್ರತಿವಾದಿ ರಾಕೇಶ್‌ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ವಾಸ್ತವದಲ್ಲಿ ಅವರು ಚಾನೆಲ್‌ ಬೆಳೆಸುತ್ತಿರುವುದು ಕೂಡ ಕಾನೂನು ಬಾಹಿರವಾಗಿ. ಅವರು 2021ರಿಂದಲೂ ಚಾನೆಲ್‌ ಪರವಾನಗಿ ನವೀಕರಿಸಿಲ್ಲ," ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

Hassan: ಮೂಳೆ ಮುರಿತದ ಆಪರೇಶನ್ ಚಿಕಿತ್ಸೆಗೆ ಮೆಹೆಂದಿ ಕೋನ್ ತರಿಸಿದ ವೈದ್ಯ !! ಯಾಕಿರಬಹುದು?

Advertisement
Advertisement
Advertisement